• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 3 ದಿನದಲ್ಲಿ 30 ಮಂದಿ ಸಾವು!

|
Google Oneindia Kannada News

ಪಾಟ್ನಾ, ನವೆಂಬರ್ 6: ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹೂಚ್‌ನಲ್ಲಿ ಕಳೆದ 3 ದಿನಗಳಲ್ಲೇ ನಕಲಿ ಮದ್ಯ ಸೇವಿಸಿ 30 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್ 6ರ ಶನಿವಾರ ಮುಜಾಫರ್‌ಪುರ ಜಿಲ್ಲೆಯ ಸಮಸ್ತಿಪುರ್ ಪ್ರದೇಶದಲ್ಲಿ ನಕಲಿ ಮದ್ಯವನ್ನು ಸೇವಿಸಿದ ನಾಲ್ವರು ಸಾವನ್ನಪ್ಪಿದ್ದಾರೆ. ಚಂಪಾರಣನ್ ಮತ್ತು ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಈವರೆಗೂ 13 ಮಂದಿ ಮೃತಪಟ್ಟಿದ್ದು, ಸಮಸ್ತಿಪುರ್ ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಒಬ್ಬ ಸೇನಾ ಯೋಧ ಮತ್ತು ಬಿಎಸ್ಎಫ್ ಸಿಬ್ಬಂದಿ ಸೇರಿದಂತೆ ಎಲ್ಲಾ ನಾಲ್ವರು ಮೃತರು ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯ ರುಪೌಲಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಎಂದು ಸಮಸ್ತಿಪುರ ಪೊಲೀಸ್ ಅಧೀಕ್ಷಕ ಮಾನವಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಬಿಹಾರದ ಎರಡು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!ಬಿಹಾರದ ಎರಡು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!

ಅಸ್ವಸ್ಥಗೊಂಡ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ:
"ಪ್ರಸ್ತುತ ಆಸ್ಪತ್ರೆಯಲ್ಲಿ ಅಸ್ವಸ್ಥರಾದ ಇಬ್ಬರು ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ರಜೆಯ ಮೇಲೆ ಅವರ ಮನೆಗೆ ಭೇಟಿ ನೀಡಿದ್ದ ಸೇನಾ ಸಿಬ್ಬಂದಿ ತಂದ ಮದ್ಯವನ್ನು ಸೇವಿಸಿದ್ದಾರೆ ಎಂದು ನಮಗೆ ತಿಳಿದು ಬಂದಿದೆ." ಎಂದಿದ್ದಾರೆ.

ಆರೋಪಿಗಳ ಬಂಧನಕ್ಕಾಗಿ ಜಾಹೀರಾತು:
ಬೈಕುಂಠಪುರ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಾತನಾಡಿ, ನಾಲ್ವರು ಶಂಕಿತ ಆರೋಪಿಗಳಾದ ರಾಮಯ್ಯ ರೈ, ಮಿಥಿಲೇಶ್ ರೈ, ಅಚ್ಯಾಲಾಲ್ ರೈ ಮತ್ತು ಶ್ಯಾಮದೇವ್ ರೈ ವಿರುದ್ಧ ಜಾಹೀರಾತು ಪ್ರಕಟಿಸಲಾಗಿದೆ ಎಂದರು.

ಮದ್ಯ ನಿಷೇಧ ಕಾನೂನು ಮರುಪರಿಶೀಲನೆ ಅಗತ್ಯ:
"ಕಾನೂನು ಕಠಿಣವಾಗಿದೆ, ಆದರೆ ಜನರು ಇನ್ನೂ ಜಾಗೃತರಾಗಿಲ್ಲ ಎಂಬುದನ್ನು ಈ ಘಟನೆಗಳು ತೋರಿಸುತ್ತವೆ. ಸರ್ಕಾರದಿಂದ ಪ್ರಾಥಮಿಕವಾಗಿ ಹಳ್ಳಿಗಳಲ್ಲಿ ಇಂಥ ಮಾಫಿಯಾಗಳನ್ನು ಪೊಲೀಸರು ನಿಯಂತ್ರಿಸುವ ಕೆಲಸ ಆಗಬೇಕಿದೆ. ನಿಷೇಧದ ಕಾನೂನುಗಳನ್ನು ಮರುಪರಿಶೀಲಿಸಬೇಕು. ಮದ್ಯ ನಿಷೇಧವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉತ್ತಮ ಕಾರ್ಯವಾಗಿದೆ . "ಆರು ವರ್ಷಗಳ ಹಿಂದೆ ಮಹಿಳೆಯರ ಬೇಡಿಕೆಯ ಮೇರೆಗೆ ಅವರು ನಿಷೇಧವನ್ನು ಜಾರಿಗೆ ತಂದರು. ಆದರೆ ಈಗ ಈ ಕಾನೂನಿನ ಯಶಸ್ಸನ್ನು ಪರಿಶೀಲಿಸಬೇಕಿದೆ," ಎಂದು ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.

ಗುರುವಾರವಷ್ಟೇ ನಕಲಿ ಮದ್ಯ ಸೇವನೆಯಿಂದ 12 ಮಂದಿ ಸಾವು:
ಬಿಹಾರದ ಪಶ್ಚಿಮ ಚಂಪಾರಣನ್ ಜಿಲ್ಲೆಯ ತೆಲ್ಹುವಾ ಹೂಚ್ ಗ್ರಾಮದಲ್ಲಿ ನವೆಂಬರ್ 4ರಂದು ಶಂಕಿತ ನಕಲಿ ಮದ್ಯ ಸೇವಿಸಿದ 8 ಮಂದಿ ಮೃತಪಟ್ಟಿದ್ದಾರೆ. ಇತ್ತ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಅದೇ ರೀತಿ ಶಂಕಿತ ನಕಲಿ ಮದ್ಯವನ್ನು ಸೇವಿಸಿದ ಆರು ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೂ ನಕಲಿ ಮದ್ಯೆ ಸೇವಿಸಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಎರಡೂ ಜಿಲ್ಲೆಗಳಲ್ಲಿ ಒಂದೇ ರೀತಿ ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತೆಲ್ಹುವಾ ಹೂಚ್ ಗ್ರಾಮದಲ್ಲಿ ಗುರುವಾರ ನಡೆದ ನಕಲಿ ಮದ್ಯ ಸೇವನೆ ದುರಂತ ಇದೇ ಮೊದಲೇನಲ್ಲ. ಕಳೆದ 10 ದಿನಗಳಲ್ಲಿ ಉತ್ತರ ಬಿಹಾರದ ಮೂರು ಕಡೆಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿರುವುದು ವರದಿಯಾಗಿದೆ. ಪಶ್ಚಿಮ ಚಂಪಾರಣ್‌ನಲ್ಲಿ ಮೃತರನ್ನು ತೆಲ್ಹುವಾ ಗ್ರಾಮದ 2, 3 ಮತ್ತು 4ನೇ ವಾರ್ಡ್‌ಗಳ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಅವರ ಸಾವಿಗೆ ಕಾರಣವನ್ನು ಜಿಲ್ಲಾಡಳಿತ ಇನ್ನೂ ಖಚಿತಪಡಿಸಿಲ್ಲ.

ವಿಷಕಾರಿ ಪದಾರ್ಥ ಸೇವನೆಯಿಂದ ಸಾವು:
ಮೇಲ್ನೋಟಕ್ಕೆ ಈ ಸಾವು ಯಾವುದೋ ವಿಷಕಾರಿ ಪದಾರ್ಥ ಸೇವನೆಯಿಂದ ಸಂಭವಿಸಿರುವುದು ಎಂದು ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೆಂಬರ್ 2 ಮತ್ತು 3 ರ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದ ನಕಲಿ ಮದ್ಯವನ್ನು 20ಕ್ಕೂ ಹೆಚ್ಚು ಜನರು ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ತೆಲ್ಹುವಾದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಪಶ್ಚಿಮ ಚಂಪ್ರಾನ್ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ನಾಥ್ ವರ್ಮಾ ತಿಳಿಸಿದ್ದಾರೆ.

ಸಾವಿನ ಬಗ್ಗೆ ಗ್ರಾಮಸ್ಥರು ಹೇಳುವುದೇನು?:
ಕಳೆದ ನವೆಂಬರ್ 3ರ ಬುಧವಾರ ಸಂಜೆ ತೆಲ್ಹುವಾ ಗ್ರಾಮದ ಚಮರ್ತೋಲಿ ಪ್ರದೇಶದಲ್ಲಿ ಎಲ್ಲಾ ಸಂತ್ರಸ್ತರು ಮದ್ಯ ಸೇವಿಸಿದ್ದಾರೆ. "ಮದ್ಯ ಸೇವಿಸಿದ ನಂತರ, ಅವರಲ್ಲಿ ಎಂಟು ಜನರ ಸ್ಥಿತಿ ಹದಗೆಟ್ಟಿತು ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಇಂದು ಮೃತಪಟ್ಟರು," ಎಂದು ಗ್ರಾಮಸ್ಥರು ಹೇಳಿದ್ದಾರೆ. ಇನ್ನೂ ಕೆಲವು ಗ್ರಾಮಸ್ಥರು ಮದ್ಯ ಸೇವಿಸಿ ಅಸ್ವಸ್ಥಗೊಂಡ ಕೆಲವರು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬಿಹಾರದಲ್ಲಿ ನಕಲಿ ಮದ್ಯ ಮತ್ತು ಸಾವಿನ ಸರಣಿ:
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ರುಪೌಲಿ ಗ್ರಾಮದಲ್ಲಿ ನಡೆದ ಹೂಚ್ ದುರಂತದಲ್ಲಿ ಅಕ್ಟೋಬರ್ 28ರಿಂದ ಎಂಟು ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಮುಜಾಫರ್‌ಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಅಕ್ಟೋಬರ್ 31, 2021 ರವರೆಗೆ, ನವಾಡ, ಪಶ್ಚಿಮ ಚಂಪಾರಣ್, ಮುಜಾಫರ್‌ಪುರ, ಸಿವಾನ್ ಮತ್ತು ರೋಹ್ತಾಸ್ ಜಿಲ್ಲೆಗಳಲ್ಲಿ ನಕಲಿ ಮದ್ಯವನ್ನು ಸೇವಿಸಿ ಸುಮಾರು 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕರು ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.

English summary
30 People Death in Just 3 Days from consuming spurious liquor in Bihar's Hooch
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X