ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಗೆದ್ದವರಲ್ಲಿ 163 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ

|
Google Oneindia Kannada News

ಪಟ್ನಾ, ನವೆಂಬರ್ 12: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದವರ ಪೈಕಿ 163 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ತಮ್ಮ ನಾಮಪತ್ರ ಸಲ್ಲಿಸುವ ವೇಳೆ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದ ಅಭ್ಯರ್ಥಿಗಳಲ್ಲಿ ಗೆಲುವು ಕಂಡ 163 ಮಂದಿ ಅಂದರೆ ಶೇ 68ರಷ್ಟು ಮಂದಿ ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ. ಇದರಲ್ಲಿ ಆರ್‌ಜೆಡಿ ಮೊದಲ ಸ್ಥಾನದಲ್ಲಿದ್ದು, ಶೇ 73ರಷ್ಟು ಚುನಾಯಿತ ಅಭ್ಯರ್ಥಿಗಳು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.

163 ಮಂದಿಯ ಪೈಕಿ ಅವರ ಅಫಿಡವಿಟ್‌ಗಳಲ್ಲಿ ಹೇಳಿರುವಂತೆ 123 ಮಂದಿ (ಶೇ 51) ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ಬಾಕಿ ಇರುವುದಾಗಿ ತಿಳಿಸಿದ್ದಾರೆ. ಅಂದರೆ ಕೊಲೆ, ಕೊಲೆ ಪ್ರಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಅವರ ಮೇಲಿದೆ.

ನೂತನ ಬಿಹಾರ ವಿಧಾನಸಭೆಯಲ್ಲಿ 194 ಶಾಸಕರು ಕೋಟ್ಯಾಧಿಪತಿಗಳು, 163 ಶಾಸಕರ ಕ್ರಿಮಿನಲ್ ಪ್ರಕರಣ ಬಾಕಿನೂತನ ಬಿಹಾರ ವಿಧಾನಸಭೆಯಲ್ಲಿ 194 ಶಾಸಕರು ಕೋಟ್ಯಾಧಿಪತಿಗಳು, 163 ಶಾಸಕರ ಕ್ರಿಮಿನಲ್ ಪ್ರಕರಣ ಬಾಕಿ

2015ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 142 ಶಾಸಕರು ತಮ್ಮ ಅಫಿಡವಿಟ್‌ನಲ್ಲಿ ಈ ರೀತಿಯ ಪ್ರಕರಣಗಳನ್ನು ಎದುರಿಸುತ್ತಿವುದಾಗಿ ತಿಳಿಸಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) 243 ವಿಜೇತ ಅಭ್ಯರ್ಥಿಗಳ ಪೈಕಿ 241 ಮಂದಿಯ ಸ್ವಘೋಷಿತ ಅಫಿಡವಿಟ್‌ಗಳನ್ನು ಪರಿಶೀಲನೆ ನಡೆಸಿದೆ. ಉಳಿದ ವಿಜೇತರ ಬಗ್ಗೆ ಎಡಿಆರ್ ಯಾವುದೇ ಅಂತಹ ವಿವರ ನೀಡಿಲ್ಲ.

163 winners Facing Criminal Cases In Bihar, RJD Tops Lists

123 ವಿಜೇತರಲ್ಲಿ 19 ಕೊಲೆ ಪ್ರಕರಣ, 31 ಕೊಲೆಯ ಪ್ರಯತ್ನ ಮತ್ತು ಎಂಟು ಮಂದಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಕ್ಷದ 74 ವಿಜೇತರಲ್ಲಿ 54 (ಶೇ 73) ಮಂದಿ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಇದೆ. ಇನ್ನು ಬಿಜೆಪಿಯ 73 ರಲ್ಲಿ 47 ಮಂದಿ (ಶೇ 64) ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.

ಬಿಹಾರ ಚುನಾವಣೆಯಲ್ಲಿ ನೋಟಾ ಬಟನ್ ಒತ್ತಿದವರೆಷ್ಟು ಮಂದಿ?ಬಿಹಾರ ಚುನಾವಣೆಯಲ್ಲಿ ನೋಟಾ ಬಟನ್ ಒತ್ತಿದವರೆಷ್ಟು ಮಂದಿ?

ಜೆಡಿಯುದ 43 ವಿಜೇತರಲ್ಲಿ 20 ಮಂದಿ (ಶೇ 47), ಕಾಂಗ್ರೆಸ್‌ನ 19ರಲ್ಲಿ 16 ಮಂದಿ (ಶೇ 84), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ ಲೆನಿನಿಸ್ಟ್ ಲಿಬರೇಷನ್ ಪಕ್ಷದ 12 ರಲ್ಲಿ 10 (ಶೇ 83) ಮಂದಿ ಹಾಗೂ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ಐದರಲ್ಲಿ ಐದೂ (ಶೇ 100) ಅಭ್ಯರ್ಥಿಗಳು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.

English summary
Bihar assembly election results 2020: 163 winners (68%) are facing criminal cases. RJD is at the top in the list with 73 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X