ಫ್ರಾನ್ಸ್‌ನಲ್ಲಿ ಕೋವಿಡ್‌ನ ನಾಲ್ಕನೇ ಅಲೆ ಸಾಧ್ಯತೆ: ಸರ್ಕಾರದ ಸಲಹೆಗಾರ ಮಾಹಿತಿ

ಪ್ಯಾರಿಸ್, ಜೂ.30: ''ಭಾರತದಲ್ಲಿ ಮೊದಲು ಕಂಡುಬಂದ ಡೆಲ್ಟಾ ರೂಪಾಂತರದಿಂದ ಉಂಟಾದ ಪ್ರಕರಣಗಳು ಮತ್ತೆ ಹೆಚ್ಚಳವಾದ ಕಾರಣ ಫ್ರಾನ್ಸ್‌ನಲ್ಲಿ ಕೋವಿಡ್‌ ವೈರಸ್‌ನ ನಾಲ್ಕನೇ ಅಲೆ ಉಂಟಾಗುವ ಸಾಧ್ಯತೆಯಿದೆ,'' ಎಂದು ಫ್ರೆಂಚ್ ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಜೀನ್-ಫ್ರಾಂಕೋಯಿಸ್ ಡೆಲ್ಫ್ರೈಸಿ ಹೇಳಿದ್ದಾರೆ.

''ಅದೇನೆ ಇದ್ದರೂ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಫ್ರಾನ್ಸ್‌ಗೆ ಕೋವಿಡ್‌ನ ಈ ನಾಲ್ಕನೇ ಅಲೆ ಫ್ರಾನ್ಸ್‌ಗೆ ಅಪ್ಪಳಿಸಬಹುದು ಎಂದು ಅನೇಕ ವೈದ್ಯಕೀಯ ತಜ್ಞರು ಭಾವಿಸಿದ್ದಾರೆ. ಈ ಹೊಸ ಅಲೆಯ ಪರಿಣಾಮವನ್ನು ತಗ್ಗಿಸಲು ಕೋವಿಡ್‌ ಲಸಿಕೆಗಳು ಸಹಾಯ ಮಾಡುತ್ತದೆ,'' ಎಂದು ಕೂಡಾ ಬುಧವಾರ ಡೆಲ್ಫ್ರೈಸಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಫ್ರೆಂಚ್ ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಜೀನ್-ಫ್ರಾಂಕೋಯಿಸ್ ಡೆಲ್ಫ್ರೈಸಿ, "ನಾವು ನಾಲ್ಕನೇ ಕೊರೊನಾ ಅಲೆಯನ್ನು ಎದುರಿಸಲಿದ್ದೇವೆ ಎಂದು ನಾನು ಭಾವಿಸುತ್ತೇನೆ," ಎಂದಿದ್ದಾರೆ.

France likely to have fourth wave of COVID says government adviser

"ಆದರೆ ಇದು ಹಿಂದಿನ ಮೂರು ಅಲೆಗಳಿಗಿಂತ ಹೆಚ್ಚು ಕುಂಠಿತವಾಗಿರುತ್ತದೆ ಎಂಬುದು ನಮ್ಮ ನಿರೀಕ್ಷೆ, ಯಾಕೆಂದರೆ ವ್ಯಾಕ್ಸಿನೇಷನ್‌ಗಳ ಮಟ್ಟವು ಮೊದಲ ಅಲೆಗೆ ಹೋಲಿಸಿದರೆ ನಾಲ್ಕನೇ ಅಲೆಯ ವೇಳೆ ತುಂಬಾ ಹೆಚ್ಚಳವಾಗಿರುತ್ತದೆ," ಎಂದು ಈ ವೇಳೆಯೇ ಅಭಿಪ್ರಾಯಿಸಿದ್ದಾರೆ.

ವೈಜ್ಞಾನಿಕ ವಿಷಯಗಳ ಬಗ್ಗೆ ಫ್ರೆಂಚ್ ಸರ್ಕಾರಕ್ಕೆ ಸಲಹೆ ನೀಡುವ ಫ್ರೆಂಚ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಅರ್ನಾಡ್ ಫಾಂಟಾನೆಟ್‌ ಬುಧವಾರ ಬಿಎಫ್‌ಎಂ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, "ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಫ್ರಾನ್ಸ್‌ನ ಕೋವಿಡ್‌-19 ಸೋಂಕಿನ ಸಂಖ್ಯೆ ಮತ್ತೆ ಏರಿಕೆಯಾಗಲಿದೆ," ಎಂದು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದರು.

ಫ್ರೆಂಚ್ ಆರೋಗ್ಯ ಮಂತ್ರಿ ಆಲಿವಿಯರ್ ವೆರನ್, "ಈ ವಾರದ ಆರಂಭದಲ್ಲಿ ಕೋವಿಡ್‌ ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡಿದೆ. ಕೆಲವು ದೇಶಗಳು ಪ್ರಯಾಣ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಮಾಡಿದೆ. ಈಗ ಫ್ರಾನ್ಸ್‌ನ ಶೇ.20 ಕೋವಿಡ್‌ ಪ್ರಕರಣಗಳನ್ನು ಪ್ರತಿನಿಧಿಸುತ್ತದೆ," ಎಂದರು.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+