Get Updates
Get notified of breaking news, exclusive insights, and must-see stories!

ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಮೂರು ವರ್ಷ ಜೈಲು ಶಿಕ್ಷೆ

ಪ್ಯಾರಿಸ್, ಮಾರ್ಚ್ 1: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ನ್ಯಾಯಾಧೀಶರಿಗೆ ಲಂಚ ನೀಡಲು ಹಾಗೂ ಕಾನೂನಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪಿತ್ತಿದ್ದು, ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜತೆಗೆ ಅವರನ್ನು ಎರಡು ವರ್ಷ ಅಮಾನತುಗೊಳಿಸಲಾಗಿದೆ.

2007 ರಿಂದ 2012ರವರೆಗೆ ಫ್ರಾನ್ಸ್‌ ಅಧ್ಯಕ್ಷರಾಗಿದ್ದ ನಿಕೋಲಸ್ ಸರ್ಕೋಜಿ ಅವರು ತಾವು ತಪ್ಪು ಎಸಗಿಲ್ಲ ಎಂದು ಆರೋಪವನ್ನು ಅಲ್ಲಗಳೆದಿದ್ದಾರೆ. ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ತಮ್ಮ ಪ್ರಾಸಿಕ್ಯೂಟರ್‌ಗಳು ನಡೆಸಿದ ಕುತಂತ್ರ ಇದು ಎಂದು ಆರೋಪಿಸಿದ್ದಾರೆ.

ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕೋಜಿ ಅವರಿಗೆ ಹತ್ತು ದಿನಗಳ ಸಮಯ ನೀಡಲಾಗಿದೆ. ಜಾಕ್ವೆಸ್ ಚಿರಾಕ್ ಅವರು ಭ್ರಷ್ಟಾಚಾರದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಆಧುನಿಕ ಫ್ರಾನ್ಸ್‌ನಲ್ಲಿ ಶಿಕ್ಷಗೆ ಒಳಗಾಗುತ್ತಿರುವ ಎರಡನೆಯ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಸರ್ಕೋಜಿ ಒಳಗಾಗಿದ್ದಾರೆ.

Former French President Nicolas Sarkozy Convicted For 3 Years Jail In Corruption Case

2012ರ ತಮ್ಮ ಅಧ್ಯಕ್ಷ ಸ್ಥಾನದ ಮರು ಆಯ್ಕೆಯ ಪ್ರಯತ್ನದಲ್ಲಿ ಸರ್ಕೋಜಿ ವಿಫಲರಾಗಿದ್ದರು. ಚುನಾವಣಾ ಪ್ರಚಾರದಲ್ಲಿ ಕಾನೂನಿನ ಪ್ರಕಾರ ವಿಧಿಸಲಾಗಿರುವ 22.5 ಮಿಲಿಯನ್ ಯುರೋ ಮೊತ್ತದ ಮಿತಿಗಿಂತಲೂ ಅಧಿಕ ಮೊತ್ತವನ್ನು ವ್ಯಯಿಸಿದ್ದರು. ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಇದರಲ್ಲಿ ಸಂಸ್ಥೆಯೊಂದರಿಂದ ಅಕ್ರಮ ಹಣ ಪಡೆದ ಆರೋಪವನ್ನು ಅವರು ಒಪ್ಪಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿತ್ತು. ಈ ಸಂಬಂಧ ಅತ್ಯಂತ ಗೋಪ್ಯ ಮಾಹಿತಿಯನ್ನು ತಮಗೆ ನೀಡುವಂತೆ ಸರ್ಕೋಜಿ ಅವರು ನ್ಯಾಯಾಧೀಶ ಗಿಲ್ಬರ್ಟ್ ಅಜಿಬರ್ಟ್ ಅವರಿಗೆ ಮೊನಾಕೊದಲ್ಲಿ ದೊಡ್ಡ ಉದ್ಯೋಗ ನೀಡುವ ಆಮಿಷ ಒಡ್ಡಿದ್ದರು ಎಂಬ ಆರೋಪವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+