ಗೋವಾ ಹೋಟೆಲ್ ಕೋಣೆಯಲ್ಲಿ ಪ್ರವಾಸಿ ಮಹಿಳೆ ಶವ ಪತ್ತೆ, ಗೆಳೆಯ ನಾಪತ್ತೆ

ಪಣಜಿ (ಗೋವಾ), ಏಪ್ರಿಲ್ 28: ಉತ್ತರ ಗೋವಾದ ಹೋಟೆಲ್ ಕೋಣೆಯೊಂದರಲ್ಲಿ ಹಿಮಾಚಲ ಪ್ರದೇಶದ ಇಪ್ಪತ್ತೈದು ವರ್ಷದ ಮಹಿಳಾ ಪ್ರವಾಸಿ ಶನಿವಾರ ಕೊಲೆಯಾಗಿದ್ದು, ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶದ ಮಹಿಳೆ ಅಲ್ಕಾ ಸೈನಿ ಮೃತರು. ಏಪ್ರಿಲ್ ಇಪ್ಪತ್ತನೇ ತಾರೀಕು ಅರ್ಪೋರ ಬೀಚ್ ವಿಲೇಜ್ ಹೋಟೆಲ್ ಗೆ ತನ್ನ ಗೆಳೆಯನ ಜತೆಗೆ ಬಂದಿದ್ದರು.

ಸದ್ಯಕ್ಕೆ ಆತ ಪತ್ತೆಯಾಗಿಲ್ಲ. 'ಹೋಟೆಲ್ ನ ನಿರ್ವಹಣಾ ಸಿಬ್ಬಂದಿ ಕೋಣೆ ಸ್ವಚ್ಛಗೊಳಿಸಲು ತೆರಳಿದ ವೇಳೆಯಲ್ಲಿ ಶವ ಪತ್ತೆಯಾಗಿದೆ. ಆಕೆಯ ಕುತ್ತಿಗೆ ಮೇಲೆ ಚುಚ್ಚಿರುವ ಗುರುತು ಪತ್ತೆಯಾಗಿದೆ" ಎಂದು ಮೂಲಗಳು ತಿಳಿಸಿವೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ.

ಈ ಕೊಲೆ ವಿಚಾರವಾಗಿ ಪೊಲೀಸ್ ಉನ್ನತಾಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಹೋಟೆಲ್ ನ ಸಿಸಿಟಿವಿ ಪ್ರಕಾರ, ಕೋಣೆಯಲ್ಲಿ ಆ ಮಹಿಳೆಯು ಶವವಾಗಿ ಕಂಡುಬರುವ ಮೊದಲು ಅಲ್ಲಿಂದ ಇಬ್ಬರು ವ್ಯಕ್ತಿಗಳು ಹೊರಗೆ ಬಂದಿರುವುದು ಗೊತ್ತಾಗಿದೆ. ಆ ಇಬ್ಬರ ಪತ್ತೆಯಲ್ಲಿ ಪೊಲೀಸ್ ತಂಡವು ತೊಡಗಿಕೊಂಡಿದೆ.

Young woman tourist from Himachal Pradesh found murdered in Goa hotel room

ಬಸ್, ರೈಲು ನಿಲ್ದಾಣ ಹಾಗೂ ಡಬೋಲಿಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗಡಿ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಅಂಜುನಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+