Get Updates
Get notified of breaking news, exclusive insights, and must-see stories!

Breaking: ಗೋವಾದ 'ಕರ್ಲೀಸ್' ರೆಸಾರ್ಟ್‌ ತೆರವಿಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ

ಪಣಜಿ, ಸೆಪ್ಟೆಂಬರ್ 09: ಗೋವಾದ ಅಂಜುನಾ ಪ್ರದೇಶದಲ್ಲಿರುವ 'ಕರ್ಲೀಸ್' ರೆಸಾರ್ಟ್‌ ತೆರವಿಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಹೊರಡಿಸಿದೆ. ಕರ್ಲೀಸ್ ರೆಸ್ಟೋರೆಂಟ್ ತೆರವು ಕಾರ್ಯಾಚರಣೆ ಕೈಗೊಂಡಿದ್ದ ಗೋವಾ ಸರ್ಕಾರಕ್ಕೆ ಕೋರ್ಟ್ ರೆಸ್ಟೋರೆಂಟ್ ಧ್ವಂಸಕ್ಕೆ ತಡೆಯಾಜ್ಞೆ ಹೊರಡಿಸಿದೆ. ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ ಎಂಬ ಷರತ್ತಿನೊಂದಿಗೆ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹರಿಯಾಣ ಭಾರತೀಯ ಜನತಾ ಪಕ್ಷದ ನಾಯಕಿ ಸೋನಾಲಿ ಫೋಗಟ್ ಅವರ ಸಾವಿಗೆ ಸಂಬಂಧಿಸಿದ ಉತ್ತರ ಗೋವಾದ ಅಂಜುನಾದಲ್ಲಿರುವ ವಿವಾದಿತ ರೆಸ್ಟೋರೆಂಟ್ ಅನ್ನು ಗೋವಾ ಸರ್ಕಾರ ಶುಕ್ರವಾರ ಬೆಳಿಗ್ಗೆ ಕೆಡವಲು ಪ್ರಾರಂಭಿಸಿತ್ತು.

Sonali Phogat murder case: Supreme Court stays demolition of Goa’s famous beach shack Curlies

ಸಿಆರ್‌ಝಡ್ ನಿಯಮ ಉಲ್ಲಂಘನೆ ಮಾಡಿ 'ಕರ್ಲೀಸ್' ರೆಸಾರ್ಟ್‌ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ. ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ 'ಕರ್ಲೀಸ್' ಎಂಬ ರೆಸ್ಟೋರೆಂಟ್ ಇತ್ತೀಚೆಗೆ ಸುದ್ದಿಯಲ್ಲಿದೆ. ಫೋಗಟ್ ಸಾಯುವ ಕೆಲವು ಗಂಟೆಗಳ ಮೊದಲು ಔಟ್‌ಲೆಟ್‌ನಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿತು. ಫೋಗಾಟ್ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರಲ್ಲಿ ಅದರ ಮಾಲೀಕ ಎಡ್ವಿನ್ ನೂನ್ಸ್ ಕೂಡ ಸೇರಿದ್ದಾರೆ. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜಿಲ್ಲಾಡಳಿತದ ಡೆಮಾಲಿಷನ್ ಸ್ಕ್ವಾಡ್ ಅಂಜುನಾ ಪೊಲೀಸ್ ಸಿಬ್ಬಂದಿಯೊಂದಿಗೆ ಬೆಳಗ್ಗೆ 7.30 ರ ಸುಮಾರಿಗೆ ಬೀಚ್‌ಗೆ ಆಗಮಿಸಿ ಸಿಆರ್‌ಝಡ್ ನಿಯಮಾವಳಿಗಳನ್ನು ಉಲ್ಲಂಘಿಸಿ 'ನೋ ಡೆವಲಪ್‌ಮೆಂಟ್ ಝೋನ್'ನಲ್ಲಿ ನಿರ್ಮಿಸಲಾಗಿದ್ದ ರೆಸ್ಟೊರೆಂಟ್ ಕೆಡವಲು ಮುಂದಾಗಿತ್ತು. ಈ ನಡುವೆ ರೆಸಾರ್ಟ್‌ ತೆರವಿಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಹೊರಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+