Get Updates
Get notified of breaking news, exclusive insights, and must-see stories!

ಗೋವಾದಲ್ಲಿ ನಿಲ್ಲದ ಕನ್ನಡಿಗರ ಮೇಲಿನ ದೌರ್ಜನ್ಯ: ಮತ್ತೆ ಪುಂಡಾಟ ಮಾಡಿದ 'ರೆವಲ್ಯೂಷನರಿ ಗೋವನ್ಸ್'

ಪಣಜಿ, ಅಕ್ಟೋಬರ್ 14: ಗೋವಾದಲ್ಲಿ ಕೆಲ ಸಮಯ ತಣ್ಣಗಾಗಿದ್ದ "ರೆವಲ್ಯೂಷನರಿ ಗೋವನ್ಸ್' ಕಾರ್ಯಕರ್ತರ ಪುಂಡಾಟ ಮತ್ತೆ ಶುರುವಾಗಿದೆ. ನವರಾತ್ರಿ ಅಂಗವಾಗಿ ಟನ್‌ಗಟ್ಟಲೆ ಹೂವನ್ನು ಮಾರಾಟಕ್ಕೆ ತಂದಿದ್ದ ಕರ್ನಾಟಕದ ವ್ಯಾಪಾರಿಗಳನ್ನು "ರೆವಲ್ಯೂಷನರಿ ಗೋವನ್ಸ್' ತಂಡ ವ್ಯಾಪಾರಕ್ಕೆ ಅವಕಾಶ ನೀಡದೆ ಅತಂತ್ರರನ್ನಾಗಿಸಿದೆ.

ನವರಾತ್ರಿಯ ಆಯುಧ ಪೂಜೆ ಅಂಗವಾಗಿ ಉತ್ತರ ಕರ್ನಾಟಕದ ಭಾಗದಿಂದ ಹತ್ತಾರು ವ್ಯಾಪಾರಿಗಳು ಪ್ರತಿವರ್ಷದಂತೆ ಹೂವುಗಳ ಮಾರಾಟಕ್ಕೆಂದು ಗೋವಾಕ್ಕೆ ತೆರಳಿದ್ದರು. ರಸ್ತೆ ಪಕ್ಕದಲ್ಲಿ ಹೂವುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಆದರೆ ಇದನ್ನು ಕಂಡು ಸಹಿಸದ "ರೆವಲ್ಯೂಷನರಿ ಗೋವನ್ಸ್' ಕಾರ್ಯಕರ್ತರು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

 ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಒತ್ತಡ

ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಒತ್ತಡ

ಅಲ್ಲದೇ ಮರ್‌ಗಾವ್ ಮುನ್ಸಿಪಲ್ ಕೌನ್ಸಿಲ್‌ಗೆ ಮಾಹಿತಿ ನೀಡಿ, ಕರ್ನಾಟಕದ ಬೀದಿ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಒತ್ತಡ ಹೇರಿದ್ದಾರೆ. ಇದರಿಂದಾಗಿ ಸ್ಥಳಕ್ಕೆ ಭೇಟಿ ನೀಡಿದ ಮರ್‌ಗಾವ್ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಯೊಬ್ಬರು, ಕರ್ನಾಟಕದ ವ್ಯಾಪಾರಿಗಳು ತಂದಿದ್ದ ಹೂವುಗಳನ್ನೆಲ್ಲ ಮುನ್ಸಿಪಲ್ ಕೌನ್ಸಿಲ್ ಗಾಡಿಗೆ ತುಂಬಿಕೊಂಡು ತೆರಳಿದ್ದಾರೆ. "ನಾವೇ ತೆಗೆದುಕೊಂಡು ಹೋಗುತ್ತೇವೆ' ಎಂದು ವ್ಯಾಪಾರಿಗಳು ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ, ಕಸ ತುಂಬಿದಂತೆ ತಾಜಾ ಹೂವುಗಳನ್ನು ಮುನ್ಸಿಪಲ್ ಗಾಡಿಗೆ ತುಂಬಿಕೊಂಡು ತೆರಳಿದ್ದಾರೆ.

 ಪೊಲೀಸರು ಕೂಡ ವ್ಯಾಪಾರಿಗಳಿಗೆ ದಂಡ ವಿಧಿಸಿದ್ದರು

ಪೊಲೀಸರು ಕೂಡ ವ್ಯಾಪಾರಿಗಳಿಗೆ ದಂಡ ವಿಧಿಸಿದ್ದರು

ಇದಕ್ಕೂ ಮುನ್ನ ಪೊಲೀಸರು ಕೂಡ ವ್ಯಾಪಾರಿಗಳಿಗೆ ದಂಡ ವಿಧಿಸಿದ್ದರು. ದಂಡ ಪಾವತಿಸಿದ ಕಾರಣ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಿದ್ದರು. ಆದರೆ ಅಷ್ಟರಲ್ಲೇ ಮುನ್ಸಿಪಲ್ ಕೌನ್ಸಿಲ್‌ನವರು ವ್ಯಾಪಾರಕ್ಕೆ ತಂದಿದ್ದ ಹೂವುಗಳನ್ನೆಲ್ಲ ಹೊತ್ತೊಯ್ದಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹೂವುಗಳನ್ನು ಲಾರಿಗಳಲ್ಲಿ ತಂದು, ಇದೀಗ ವಾಪಸ್ಸು ಹೋಗಲೂ ಕೈಯಲ್ಲಿ ಹಣವಿಲ್ಲದಾಗಿದೆ. ಊಟ- ತಿಂಡಿಗೂ ಹಣವಿಲ್ಲ ಎಂದು ವ್ಯಾಪಾರಿಗಳು ಅವಲತ್ತುಕೊಂಡಿದ್ದಾರೆ.

ಕರ್ನಾಟಕದಿಂದ ತರಕಾರಿ, ಹಾಲು ಗೋವಾಕ್ಕೆ ಬರುತ್ತದೆ. ನಾವು ಕೂಡ ಇಲ್ಲಿಯವರು ಮಾಡಿದಂತೆ ತರಕಾರಿ, ಹಾಲುಗಳನ್ನು ಗೋವಾಕ್ಕೆ ಹೋಗುವುದನ್ನು ತಡೆದರೆ ಸರಿಯಾಗುತ್ತದಾ? ನಾವು ಈವರೆಗೂ ಆ ರೀತಿ ಮಾಡಿಲ್ಲ. ಗೋವಾದವರು ಮಾತ್ರ ಕರ್ನಾಟಕದವರ ಮೇಲೆ ಈ ರೀತಿಯ ದೌರ್ಜನ್ಯ ಮುಂದುವರಿಸಿದ್ದಾರೆ ಎಂದು ವ್ಯಾಪಾರಿಯೊಬ್ಬ ಗೋವಾದ 'ಇನ್ ಗೋವಾ 24*7' ಎಂಬ ಸುದ್ದಿವಾಹಿನಿಗೆ ಹೇಳಿಕೆ ನೀಡಿದ್ದಾನೆ.

 ಸುದ್ದಿವಾಹಿನಿಯ ಸಂಪಾದಕನ ಮೇಲೆ ರೇಗಾಡಿದ 'ಆರ್‌ಜಿ'ಗಳು

ಸುದ್ದಿವಾಹಿನಿಯ ಸಂಪಾದಕನ ಮೇಲೆ ರೇಗಾಡಿದ 'ಆರ್‌ಜಿ'ಗಳು

ಇನ್ನು ಮುನ್ಸಿಪಲ್ ಕೌನ್ಸಿಲ್ ಕರ್ನಾಟಕದ ವ್ಯಾಪಾರಿಗಳ ಮೇಲೆ ಈ ರೀತಿ ದೌರ್ಜನ್ಯ ನಡೆಸುತ್ತಿರುವುದನ್ನು ಕಂಡು ವರದಿ ಮಾಡುತ್ತಿದ್ದ ಗೋವಾದ 'ಇನ್ ಗೋವಾ 24*7' ಸುದ್ದಿವಾಹಿನಿಯ ಸಂಪಾದಕನ ಮೇಲೆ, ಸ್ಥಳದಲ್ಲೇ ಇದ್ದ 'ರೆವಲ್ಯೂಷನರಿ ಗೋವನ್ಸ್' ತಂಡ ರೇಗಾಡಿದೆ. ಯಾತಕ್ಕಾಗಿ ವ್ಯಾಪಾರಿಗಳನ್ನು ಎಬ್ಬಿಸುತ್ತಿದ್ದೀರಿ? ಎಂದು ಸಂಪಾದಕ ಸ್ಥಳದಲ್ಲಿದ್ದ ಮುನ್ಸಿಪಲ್ ಕೌನ್ಸಿಲ್‌ನ ಅಧಿಕಾರಿಯೊಬ್ಬರಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಬಂದ 'ಆರ್‌ಜಿ'ಗಳು, "ನೀನ್ಯಾರು? ಅಧಿಕಾರಿ ಅವರ ಕರ್ತವ್ಯ ಮಾಡುತ್ತಿದ್ದಾರೆ, ಅದನ್ನು ಪ್ರಶ್ನಿಸಲು ನಿನಗ್ಯಾವ ಹಕ್ಕಿದೆ? ಗೋವಾದ ವ್ಯಾಪಾರಿಗಳೆಲ್ಲರೂ ಶ್ರೀಮಂತರಿದ್ದಾರಾ? ಅವರು ವ್ಯಾಪಾರ ಮಾಡುವುದು ಬೇಡವಾ?'' ಎಂದೆಲ್ಲ ಸಂಪಾದಕನೊಂದಿಗೆ ವಾಗ್ವಾದ ನಡೆಸಿದ್ದಾರೆ.

 ಪುಂಡಾಟ ಇದೇ ಮೊದಲೇನಲ್ಲ

ಪುಂಡಾಟ ಇದೇ ಮೊದಲೇನಲ್ಲ

'ರೆವಲ್ಯೂಷನರಿ ಗೋವನ್ಸ್' ತಂಡದ ಈ ಪುಂಡಾಟ ಇದೇ ಮೊದಲೇನಲ್ಲ. ಗೋವಾದಲ್ಲಿ ಕರ್ನಾಟಕದವರು ಕಂಡಾಗೆಲ್ಲ ಈ ರೀತಿ ಕನ್ನಡಿಗರ ಮೇಲೆ ಈ 'ಆರ್‌ಜಿ'ಗಳು ದೌರ್ಜನ್ಯ ನಡೆಸುತ್ತಲೇ ಇದ್ದಾರೆ. ಕೋವಿಡ್ ಪೂರ್ವದಲ್ಲಿ ಇವರ ಪುಂಡಾಟ ಮಿತಿ ಮೀರಿತ್ತು. 'ರೆವಲ್ಯೂಷನರಿ ಗೋವನ್ಸ್' ಎಂಬ ಅಭಿಯಾನ ಆರಂಭಿಸಿ ಗೋವನ್ನರಲ್ಲದ, ಪ್ರಮುಖವಾಗಿ ಕರ್ನಾಟಕದವರನ್ನು ಗೋವಾದಿಂದ ಹೊರ ದಬ್ಬಬೇಕೆಂಬಂತೆ ಕಾರ್ಯೋನ್ಮುಖರಾಗಿದ್ದರು. ಕರ್ನಾಟಕದ ಬೀದಿ ವ್ಯಾಪಾರಿಗಳು, ಪ್ರವಾಸಿಗರಿಗೆ ಪ್ರತಿನಿತ್ಯ ಪೀಡಿಸುತ್ತಿದ್ದರು. ಕೊನೆಗೆ ಇವರ ವಿರುದ್ಧ ಕೆಲವು ದೂರುಗಳು ದಾಖಲಾದ ಬಳಿಕ ಕೆಲ ಸಮಯ ಸುಮ್ಮನಾಗಿದ್ದ ತಂಡ, ಇದೀಗ ಮತ್ತೆ ತಮ್ಮ ಪುಂಡಾಟ ಶುರು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+