ಗೋವಾ: ಬಹುಮತ ಸಾಬೀತು ಪಡಿಸೋಕೆ ಬುಧವಾರ ಮುಹೂರ್ತ
ಪಣಜಿ, ಮಾರ್ಚ್ 19: ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಗೋವಾ ಮುಖ್ಯಮಂತ್ರಿಯಾಗಿ ಮಂಗಳವಾರ ನಸುಕಿನಲ್ಲಿ ಬಿಜೆಪಿಯ ಪ್ರಮೋದ್ ಸಾವಂತ್ ಅವರು ಪ್ರಮಾನ ವಚನ ಸ್ವೀಕರಿಸಿದ್ದು, ನಂತರ ಮಧ್ಯಾಹ್ನ ಸುಮಾರು 12 ಗಂಟೆಯ ಸಮಯಕ್ಕೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಬುಧವಾರ, ಮಾರ್ಚ್ 20 ರಂದು ಬಿಜೆಪಿ ಮೈತ್ರಿ ಸರ್ಕಾರ ಸದನದಲ್ಲಿ ಬಹುಮತ ಸಾಬೀತು ಪಡಿಸಲಿದ್ದು, ಸದ್ಯಕ್ಕೆ 37(40) ಸದಸ್ಯರ ಗೋವಾ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 19.
ಇಡೀ ದೇಶವೂ ಮನೋಹರ್ ಪರಿಕ್ಕರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದ್ದರೆ, ಗೋವಾದಲ್ಲಿ ಮಾತ್ರ ರಾಜಕೀಯ ಗೊಂದಲ ಎದ್ದಿತ್ತು. ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲ, ತನಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ತಕ್ಷಣವೇ ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿತು.

ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 14 ಸ್ಥಾನ ಹೊಂದಿ ಅತೀ ದೊಡ್ಡ ಪಕ್ಷವಾಗಿಯಲ್ಲಿ ಪ್ರಸ್ತುತ 37 ಸದಸ್ಯ ಬಲ ಇರುವುದರಿಂದ ಮ್ಯಾಜಿಕ್ ನಂಬರ್ 19. ಬಿಜೆಪಿಯು, ಗೋವಾ ಫಾರ್ವಡ್ ಎಂಜಿಪಿ ಮುಂತಾದ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಆ ಮೂಲಕ 21 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದೆ.












Click it and Unblock the Notifications