ಮನೋಹರ್ ಪರಿಕ್ಕರ್ ಅಂತ್ಯ ಸಂಸ್ಕಾರ ಎಲ್ಲಿ? ಯಾವಾಗ?
ಪಣಜಿ, ಮಾರ್ಚ್ 18: ಭಾನುವಾರ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯ ಕ್ರಿಯೆ ಸೋಮವಾರ ಸಂಜೆ 5 ಗಂಟೆಗೆ ಗೋವಾದ ಮಿರಾಮರ್ ನಲ್ಲಿ ನಡೆಯಲಿದೆ.
ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 9:30 ರಿಂದ 10:30ರವರೆಗೆ ಗೋವಾದ ಪಂಜಿಂ ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇರಿಸಲಾಗುತ್ತಿದ್ದು, ನಂತರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಇಲ್ಲಿನ ಕಲಾ ಅಕಾಡೆಮಿಯಲ್ಲಿ ಬೆಳಿಗ್ಗೆ 11:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ 5 ಗಂಟೆಗೆ ಮಿರಾಮರ್ ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಧಿಕಾರದಲ್ಲಿದ್ದಾಗಲೇ ಅಗಲಿದ ಪರಿಕ್ಕರ್ ಅವರಿಗೆ ಗೌರವ ನೀಡುವ ಸಲುವಾಗಿ ಗೋವಾ ಸರ್ಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದ್ದು, ಈ ಏಳು ದಿನ ರಾಷ್ಟ್ರಧ್ವಜವನ್ನು ಅರ್ಧಕ್ಕೇ ಹಾರಿಸಿ, ಶೋಕಾಚರಣೆ ಮಾಡಲಾಗುತ್ತದೆ.
ಪ್ಯಾಂಕ್ರಿಯಾಸ್ ಸಂಬಂಧೀ ಕಾಯಿಲೆಯಿಂದ ಬಳಲುತ್ತಿದ್ದ ಪರಿಕ್ಕರ್ 63 ವರ್ಷ ವಯಸ್ಸಿನ ಮನೋಹರ್ ಪರಿಕ್ಕರ್ ಅವರ ನಿಧನದ ಸುದ್ದಿಗೆ ಇಡೀ ದೇಶವೂ ಕಂಬನಿ ಮಿಡಿದಿದೆ.












Click it and Unblock the Notifications