ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್, ಟಿಎಂಸಿ ಸೂಪರ್ ಸ್ಟಾರ್: ಗೋವಾದಲ್ಲಿ ಮಮತಾಗೆ ಸ್ವಾಗತ
ಪಣಜಿ, ಡಿಸೆಂಬರ್ 13: ಮುಂಬರಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಗೋವಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಏರ್‌ಪೋರ್ಟ್ ಬಳಿ ''ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್, ಟಿಎಂಸಿ ಸೂಪರ್ ಸ್ಟಾರ್'' ಎಂದು ಜೈಕಾರ ಹಾಕುತ್ತಾ ಸ್ವಾಗತಿಸಲಾಯಿತು. ಸಾಕಷ್ಟು ಮಂದಿ ಪಕ್ಷದ ಕಾರ್ಯಕರ್ತರು ಅಲ್ಲಿ ನೆರೆದಿದ್ದರು,'' ಟಿಎಂಸಿ ಜಿಂದಾಬಾದ್, ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್, ಟಿಎಂಸಿ ಸೂಪರ್ ಸ್ಟಾರ್ ''ಎನ್ನುವ ಘೋಷಣೆಗಳು ಎಲ್ಲೆಡೆ ಕೇಳುತ್ತಿತ್ತು.
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ನಂತರ ಗೋವಾದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳಾ ಖಾತೆಗಳಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ನೇರ ನಗದು ವರ್ಗಾವಣೆ ಯೋಜನೆ ಜಾರಿಗೊಳಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಶನಿವಾರ ಘೋಷಿಸಿದೆ.
ಗೋವಾದಲ್ಲಿ ಒಂದು ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷಿ ಯೋಜನೆ ಅಡಿಯಲ್ಲಿ ಹಣದುಬ್ಬರ ಕಡಿಮೆ ಮಾಡಲು ಖಾತರಿ ಆದಾಯ ಬೆಂಬಲವಾಗಿ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ತಿಂಗಳಿಗೆ 5 ಸಾವಿರ ರೂಪಾಯಿ ವರ್ಗಾವಣೆ ಮಾಡಲಾಗುವುದು ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ತಿಳಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ 3.5 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದು, ಇದು ರಾಜ್ಯದ ಬಿಜೆಪಿ ಸರ್ಕಾರದ ಸದ್ಯದ ಗೃಹ ಆಧಾರ್ ಯೋಜನೆಯಲ್ಲಿನ ಕಡ್ಡಾಯಗೊಳಿಸಲಾದ ಗರಿಷ್ಠ ಆದಾಯದ ಮಿತಿಯನ್ನು ಸಹ ತೆಗೆದುಹಾಕುತ್ತದೆ ಎಂದು ಗೋವಾದಲ್ಲಿನ ಟಿಎಂಸಿ ಉಸ್ತುವಾರಿ ಮೊಯಿತ್ರಾ ಹೇಳಿದ್ದಾರೆ.
ಯೋಜನೆಗಾಗಿ ಗುರುತಿನ ಕಾರ್ಡ್ ಗಳನ್ನು ಪಕ್ಷದಿಂದ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಗೋವಾದಲ್ಲಿನ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಪ್ರಕಟಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಡಿಯಾ ಜಿಲ್ಲೆಯ ಆಡಳಿತಾತ್ಮಕ ಪರಿಶೀಲನಾ ಸಭೆಯನ್ನು ನಡೆಸುತ್ತಿದ್ದಾಗ ಮಹುವಾ ಮೊಯಿತ್ರಾ ಅವರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದರು. "ಮಹುವಾ, ನಾನು ನಿಮಗೆ ಸ್ಪಷ್ಟವಾದ ಸಂದೇಶವನ್ನು ನೀಡಲು ಬಯಸುತ್ತೇನೆ. ಯಾರು ಯಾರ ವಿರುದ್ಧ ಎಂದು ತಿಳಿಯಲು ನಾನು ಬಯಸುವುದಿಲ್ಲ.
ಯೂಟ್ಯೂಬ್, ಅಥವಾ ಡಿಜಿಟಲ್ ಮೀಡಿಯಂ, ಅಥವಾ ನ್ಯೂಸ್ ಪೇಪರ್ ಪೇಪರ್ ನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ಸ್ವಂತ ಗುಂಪನ್ನು ಸಿದ್ಧಪಡಿಸುವ ಈ ರೀತಿಯ ರಾಜಕೀಯವು ಒಂದು ದಿನ ಉಳಿಯಬಹುದು, ಆದರೆ ಹೆಚ್ಚು ಕಾಲ ಉಳಿಯುವುದಿಲ್ಲ.
ಒಬ್ಬರು ಶಾಶ್ವತವಾಗಿ ಸ್ಥಾನದಲ್ಲಿರುತ್ತಾರೆ ಎಂದು ನಂಬಲು ಯಾವುದೇ ಕಾರಣವಿಲ್ಲ. ಚುನಾವಣೆ ಸಮಯದಲ್ಲಿ, ಯಾರು ಸ್ಪರ್ಧಿಸಬೇಕು ಮತ್ತು ಯಾರು ಸ್ಪರ್ಧಿಸಬಾರದು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ.
ಯಾವುದೇ ಭಿನ್ನಾಭಿಪ್ರಾಯ ಇರಬಾರದು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನನಗೆ ಎಲ್ಲದರ ಬಗ್ಗೆ ಜ್ಞಾನವಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ನಾಡಿಯಾ ಜಿಲ್ಲಾ ನಾಯಕತ್ವದೊಳಗಿನ ಆಂತರಿಕ ಕಲಹ , ಟಿಎಂಸಿಯ ಎರಡು ಬಣಗಳು ಮುಖಾಮುಖಿಯಾಗಿರುವ ಇತ್ತೀಚಿನ ಬೆಳವಣಿಗೆಯಿಂದ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.ಮುಂಬರುವ ಗೋವಾ ವಿಧಾನಸಭಾ ಚುನಾವಣೆಗಾಗಿ ವಿವಿಧ ಪಕ್ಷಗಳು ಮೈತ್ರಿ ಸಾಧ್ಯತೆ ಬಗ್ಗೆ ತಲೆಕೆಡಿಸಿಕೊಂಡಿರುವ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಮಹತ್ವದ ಘೋಷಣೆಯನ್ನು ಭಾನುವಾರದಂದು ಹೊರಡಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಮುಂದಿನ ವರ್ಷದ ಆರಂಭದಲ್ಲಿ ಕರಾವಳಿ ರಾಜ್ಯ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
''ಉತ್ತಮ ಅಭ್ಯರ್ಥಿಗಳೊಂದಿಗೆ ಗೋವಾ ಚುನಾವಣೆ ಎದುರಿಸಲಾಗುವುದು, ಹೊಸ ಪರ್ಯಾಯ ಸಾಧ್ಯತೆಯನ್ನು ಕಾಣಲಾಗುತ್ತಿದೆ ಮತ್ತು ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ಎಎಪಿ ನಿರ್ಧರಿಸಿದೆ,'' ಎಂದು ಪಕ್ಷದ ಗೋವಾ ಎಎಪಿ ಉಸ್ತುವಾರಿ ಅತಿಶಿ ಹೇಳಿದರು.
2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ
''ಟಿಎಂಸಿ ಜತೆ ಮೈತ್ರಿ ಇಲ್ಲ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತೇನೆ. ಹಾಗಾಗಿ ಅವರೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಗೋವಾದಲ್ಲಿ ಉತ್ತಮ ಅಭ್ಯರ್ಥಿಗಳೊಂದಿಗೆ ಹೊಸ ಪರ್ಯಾಯವನ್ನು ನೀಡಲು ಮತ್ತು ಪ್ರಾಮಾಣಿಕ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ನಾವು ನಿರ್ಧರಿಸಿದ್ದೇವೆ,'' ಎಂದು ಅತಿಶಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications