ಗೋವಾ ಚುನಾವಣೆ; ಮಹಿಳಾ ಮತದಾರರನ್ನು ಸೆಳೆಯಲು ಕಸರತ್ತು!

ಪಣಜಿ, ಡಿಸೆಂಬರ್ 15; ಗೋವಾ ವಿಧಾನಸಭೆ ಚುನಾವಣೆ 2022ರಲ್ಲಿ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ಆರಂಭಿಸಿವೆ. ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿವೆ.

ಡಿಸೆಂಬರ್ 10ರಂದು ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪಕ್ಷ ಅಧಿಕಾಕ್ಕೆ ಬಂದರೆ ಉದ್ಯೋಗದಲ್ಲಿ ಮಹಿಳೆಯರಿಗೆ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಿದರು. ಮಹಿಳಾ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಪಕ್ಷದ ಮಹಿಳಾ ಪದಾಧಿಕಾರಿಗಳ ಜೊತೆ ಸಂವಾದ ನಡೆಸಿದರು.

ಈ ಬಾರಿ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಟಿಎಂಸಿ ಮಹಿಳೆಯರಿಗಾಗಿ 'ಗೃಹ ಲಕ್ಷ್ಮೀ ಕಾರ್ಡ್' ಘೋಷಣೆ ಮಾಡಿದೆ. ಈ ಯೋಜನೆ ಅಡಿ ಪ್ರತಿ ತಿಂಗಳು ಮಹಿಳೆಯರಿಗೆ 5 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ.

 Goa Elections 2022 Why Political Partys Try To Impress Women Voters

ಆಮ್ ಆದ್ಮಿ ಪಕ್ಷವೂ ಮಹಿಳಾ ಮತದಾರರನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲಾ ಹೆಣ್ಣುಮಕ್ಕಳಿಗೆ ತಿಂಗಳಿಗೆ 1000 ರೂ. ನೀಡುವುದಾಗಿ ಘೋಷಣೆ ಮಾಡಿದೆ. ಮೂರು ಪ್ರಮುಖ ಪಕ್ಷಗಳ ಗುರಿ ಮಹಿಳಾ ಮತಗಳನ್ನು ಸೆಳೆಯುವುದು.

ಏಕೆ ಇಷ್ಟು ಕಸರತ್ತು?; ಮಹಿಳಾ ಮತದಾರರು ಹೆಚ್ಚು ಇರುವ ದೇಶದ 13 ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ಗೋವಾ ಸಹ ಒಂದು. 2019ರ ಮಾಹಿತಿಯಂತೆ ರಾಜ್ಯದ ಮಹಿಳಾ ಮತದಾರರ ಸಂಖ್ಯೆ 4.4 ಲಕ್ಷ, ಪುರುಷ ಮುತದಾರರು 4.1 ಲಕ್ಷ.

ಮಹಿಳಾ ಮತದಾರರು ಹೆಚ್ಚು ಇರುವ ಕಾರಣ ಎಲ್ಲಾ ಪ್ರಮುಖ ಪಕ್ಷಗಳು ಮಹಿಳೆಯರಿಗಾಗಿ ಹಲವಾರು ಘೋಷಣೆಗಳನ್ನು ಮಾಡುತ್ತಿವೆ. ಪಕ್ಷಗಳಚುನಾವಣಾ ಪ್ರಣಾಳಿಕೆಯಲ್ಲಿಯೂ ಮಹಿಳೆಯರಿಗಾಗಿ ಹಲವು ಯೋಜನೆ ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನುತ್ತಾರೆ ರಾಜಕೀಯ ಪಂಡಿತರು.

ಸ್ಪರ್ಧೆ ಮಾಡುವುದು ಕಡಿಮೆ; ಗೋವಾದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. ಆದರೆ ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧೆ ಮಾಡುವುದು ಕಡಿಮೆ. 2017ರ ವಿಧಾನಸಭೆ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ 251 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇವರಲ್ಲಿ ಮಹಿಳೆಯರು ಕೇವಲ 17.

ಸಿಎಸ್‌ಡಿಎಸ್ 2019ರಲ್ಲಿ ದೇಶದಲ್ಲಿ ಸಮೀಕ್ಷೆಯೊಂದನ್ನು ನಡೆಸಿತ್ತು. ಸಮೀಕ್ಷೇ ವರದಿಯಂತೆ ಶೇ 58ರಷ್ಟು ಮಹಿಳಾ ಮತದಾರರು ತಮ್ಮ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧಿಸಿದರೆ ಅವರಿಗೆ ಮತ ಹಾಕಲು ಬಯಸಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಮಾಣವೇ ಕಡಿಮೆ.

ನಿರುದ್ಯೋಗದ ಪ್ರಮಾಣ ಹೆಚ್ಚಾದಂತೆ ಮನೆ ನಡೆಸುವ ಜವಾಬ್ದಾರಿ ಮಹಿಳೆಯ ಮೇಲೆ ಬೀಳುತ್ತದೆ. ಆದ್ದರಿಂದ ಅವರಿಗೆ ಆರ್ಥಿಕ ನೆರವು ಸಿಗುವಂತಹ ಘೋಷಣೆಗಳನ್ನು ರಾಜಕೀಯ ಪಕ್ಷಗಳು ಮಾಡಿ ಅವರ ಮತಗಳನ್ನು ಸೆಳೆಯಲು ಪ್ರಯತ್ನ ನಡೆಸುತ್ತವೆ.

ಗಣಿಗಾರಿಕೆ, ಪ್ರವಾಸೋದ್ಯಮ ಗೋವಾ ರಾಜ್ಯದ ಆದಾಯದ ಪ್ರಮುಖ ಮೂಲವಾಗಿದೆ. ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ಗೋವಾದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಗಣಿಗಾರಿಕೆ ಸ್ಥಗಿತಗೊಂಡು ಮೂರು ವರ್ಷಗಳು ಕಳೆದಿವೆ. ಈಗ ವಿವಿಧ ಪಕ್ಷಗಳು ಘೋಷಣೆ ಮಾಡಿರುವ ಯೋಜನೆಗೆ ಹಣ ಎಲ್ಲಿಂದ ತರುತ್ತವೆ? ಎಂದು ರಾಜಕೀಯ ತಜ್ಞರು ಪ್ರಶ್ನೆ ಮಾಡುತ್ತಿದ್ದಾರೆ.

ಪ್ರತಿ ತಿಂಗಳು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆ ಗೋವಾದಲ್ಲಿ ತುಂಬಾ ಹಳೆಯದ್ದಾಗಿದೆ. ಈ ಹಿಂದೆ ಮಾಡಿದ ಇಂತಹ ಘೋಷಣೆ ಕಟ್ಟಕಡೆಯ ತನಕ ತಲುಪಿಲ್ಲ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿಯೂ ಮತ್ತೆ ರಾಜಕೀಯ ಪಕ್ಷಗಳು ಮಾಡುತ್ತಿರುವ ಇಂತಹ ಘೋಷಣೆ ಅಷ್ಟು ಪ್ರಭಾವ ಬೀರುವುದಿಲ್ಲ ಎಂಬ ಅಭಿಪ್ರಾಯವೂ ಇದೆ.

ಬೇರೆ ಬೇರೆ ಸಮುದಾಯದ ಮಹಿಳೆಯರು ಬೇರೆ-ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ವಿಫಲತೆ ಮುಂತಾದವುಗಳು ರಾಜ್ಯದ ಸಮಸ್ಯೆಗಳಲ್ಲಿ ಸೇರಿವೆ. ಆದರೆ ರಾಜಕೀಯ ಪಕ್ಷಗಳು ಆರ್ಥಿಕ ನೆರವು ನೀಡುವತ್ತಾ ಮಾತ್ರ ಗಮನಹರಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+