• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಿನ ಪಕ್ಕದಲ್ಲೇ ಕೂತು ಕೊನೆಯ ಬಾರಿ ಫೈಲ್ ಗೆ ಸಹಿ ಮಾಡಿದ್ದ ಪರಿಕ್ಕರ್!

|

ಪಣಜಿ, ಮಾರ್ಚ್ 18: ರಾಜಕಾರಣದಲ್ಲಿದ್ದುಕೊಂಡೂ ಸರಳತೆ, ಪ್ರಾಮಾಣಿಕತೆ, ಮಾನವೀಯತೆಯಿಂದ ಬದುಕುವುದುಕ್ಕೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ ಮನೋಹರ್ ಪರಿಕ್ಕರ್ ಅವರಿಗೆ ತಮ್ಮ ಕೆಲಸದ ಮೇಲಿದ್ದ ಸಮರ್ಪಣಾಭಾವ ಎಂಥದ್ದು ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ.

ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್

ಅದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಮರಣಶಯ್ಯೆಯಲ್ಲಿ ಮಲಗಿಯೇ ಅವರು ಇತ್ತೀಚೆಗೆ ಮಹತ್ವದ ಕಡತವೊಂದಕ್ಕೆ ಸಹಿ ಮಾಡಿದ್ದು. ಗೋವಾ ಸಚಿವ ವಿಶ್ವಜಿತ್ ರಾಣೆ ಅವರು ಚಾನೆಲ್ ವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಮನೋಹರ್ ಪರಿಕ್ಕರ್ ಅವರ ಕರ್ತವ್ಯ ಪ್ರಜ್ಞೆಯ ಬಗ್ಗೆ ಮಾತನಾಡುತ್ತಿದ್ದರು.

ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು

ಸಂದರ್ಭದಲ್ಲಿ ಮಹತ್ವದ ಕಡತವೊಂದಕ್ಕೆ ತು ಸಹಿ ಮಾಡಬೇಕಿದೆ ಎಂದು ಖುದ್ದು ಅವರೇ ರಾಣೆ ಅವರನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದ ಘಟನೆಯನ್ನು ನೆನಪಿಸಿಕೊಂಡರು.

ಪರಿಕ್ಕರ್ ಅವರು ಪ್ಯಾಂಕ್ರಿಯಾಸ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬುದು ತಿಳಿದಂದಿನಿಂದಲೂ ಅವರು ತಮ್ಮ ಕರ್ತವ್ಯಕ್ಕೆ ಎಂದಿಗೂ ಚ್ಯುತಿ ಬರುವಂತೆ ವರ್ತಿಸಿಲ್ಲ. ಕೊನೆಯ ಉಸಿರಿರುವವರೆಗೂ ಗೋವಾ ಜನರ ಸೇವೆ ಸಲ್ಲಿಸುತ್ತೇನೆ ಎಂದಿದ್ದ ಅವರು ತಮ್ಮ ಮಾತನ್ನು ಕೊನೆಗೂ ಉಳಿಸಿಕೊಂಡರು.

ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?

ಮರಣಶಯ್ಯೆಯಲ್ಲಿ ಮಲಗಿಯೇ ಕಡತಕ್ಕೆ ಸಹಿ!

ಮರಣಶಯ್ಯೆಯಲ್ಲಿ ಮಲಗಿಯೇ ಕಡತಕ್ಕೆ ಸಹಿ!

"ಪರಿಕ್ಕರ್ ಅವರು ಸಹಿ ಮಾಡಿದ ಕಟ್ಟಕಡೆಯ ಕಡತ ನಾನೇ ಒಯ್ದಿದ್ದು. ಅವರು ಆಸ್ಪತ್ರೆಯಲ್ಲಿ ಮಲಗಿದ್ದಾಗ ನನ್ನನ್ನು ಕರೆದು ಆ ಕಡತಕ್ಕೆ ನಾನು ಸಹಿ ಮಾಡಬೇಕು ಎಂದಿದ್ದರು. ಸಹಿ ಮಾಡಿದರು ಕೂಡ. ಆದರೆ ಅದೇ ಅವರು ಸಹಿ ಮಾಡಿದ ಕೊನೆಯ ಕಡತವಾಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ" ಎಂದು ವಿಶ್ವಜಿತ್ ರಾಣೆ ಹೇಳಿದರು.

"ಪರಿಕ್ಕರ್ ಅವರ ಸ್ಥಾನವನ್ನು ಇನ್ಯಾರೂ ತುಂಬುವುದಕ್ಕೆ ಸಾಧ್ಯವಿಲ್ಲ. ಅವರ ಅಗಲಿಕೆ ಗೋವಾ ರಾಜಕೀಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಒಂದು ಶಾಶ್ವತವಾದ ನಿರ್ವಾತ ಸೃಷ್ಟಿಸಿದೆ" ಎಂದು ರಾಣೆ ಭಾವುಕರಾಗಿ ನುಡಿದರು.

ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟೇ ಕೆಲಸ

ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟೇ ಕೆಲಸ

ಕಳೆದ ಡಿಸೆಂಬರ್ ನಲ್ಲಿ ಮಾಂಡೋವಿ ನದಿಯ ಸೇತಿವೆಯನ್ನು ವೀಕ್ಷಿಸಲು ಬಂದಿದ್ದ ಮನೋಹರ್ ಪರಿಕ್ಕರ್ ಅವರು ಮೂಗಿಗೆ ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟು, ವೈದ್ಯರ ಸಹಾಯದಿಂದ ನಿಂತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಪ್ರಚಾರದ ಗಿಮಿಕ್ ಎಂದು ಕೆಲವರು ಕರೆದರೆ, ಮನೋಹರ್ ಪರಿಕ್ಕರ್ ಅವರ ಕರ್ತವ್ಯಪ್ರಜ್ಞೆಗೆ ಸಾಕಷ್ಟು ಜನ ಸಲಾಂ ಎಂದಿದ್ದರು.

ಆಸ್ಪತ್ರೆಯಿಂದ ನೇರ ಸದನಕ್ಕೆ!

ಆಸ್ಪತ್ರೆಯಿಂದ ನೇರ ಸದನಕ್ಕೆ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಿಕ್ಕರ್, ಡಿಸ್ಚಾರ್ಜ್ ಆದ ದಿನವೇ ಆಸ್ಪತ್ರೆಯಿಂದ ನೇರ ವಿಧಾನಸಭೆಗೆ ಆಗಮಿಸಿ ಬಜೆಟ್ ಮಂಡಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದರು. ನಂತರ ಇತ್ತೀಚೆಗಷ್ಟೇ ಬಿಡುಗಡೆಯಾದ 'ಉರಿ' ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರವನ್ನು ನೋಡಿ, 'ಹೌ ಇಸ್ ದಿ ಜೋಶ್' ಎಂದು ಅಭಿಮಾನಿಗಳಲ್ಲಿ ಕೇಳುವ ಮೂಲಕ ಸುದ್ದಿಯಾಗಿದ್ದರು.

ಆಸ್ಪತ್ರೆಯಲ್ಲೇ ಸಭೆ!

ಆಸ್ಪತ್ರೆಯಲ್ಲೇ ಸಭೆ!

ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಮನೋಹರ್ ಪರಿಕ್ಕರ್ ಅವರು ತಮ್ಮ ಸಂಪುಟದ ಸಚಿವರನ್ನು ಕರೆಸಿ ಸಭೆ ನಡೆಸುತ್ತಿದ್ದರು. ಡಿಸ್ಚಾರ್ಜ್ ಆದ ಬಳಿಕವೂ, ತೀವ್ರ ಅನಾರೋಗ್ಯವಿದ್ದರೂ ಮೂಗಿಗೆ ನಳಿಕೆ ಸಿಕ್ಕಿಸಿಕೊಂಡೇ ಸಂಪುಟ ಸಭೆ ನಡೆಸುತ್ತಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Goa chief minister Manohar Parrikar who was on his death bed, called one of his ministers and signed a file. It was his last sign for a file.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more