ಕಾಂಗ್ರೆಸ್ ಆಡಿಯೋ ಬಗ್ಗೆ ಮನೋಹರ್ ಪರಿಕ್ಕರ್ ಪ್ರತಿಕ್ರಿಯೆ
ಪಣಜಿ, ಜನವರಿ 02: ರಫೇಲ್ ಹಗರಣಕ್ಕೆ ಸಂಬಂಧಿಸಿದ ಅನೇಕ ಮಹತ್ವದ ದಾಖಲೆಗಳು, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಬೆಡ್ ರೂಮಿನಲ್ಲಿ ಅಡಕವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಾಡಿರುವ ಆರೋಪವನ್ನು ಮನೋಹರ್ ಅವರು ತಳ್ಳಿ ಹಾಕಿದ್ದಾರೆ.
"ರಫೇಲ್ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದು ಮತ್ತು ಕಾಂಗ್ರೆಸ್ನ ಸುಳ್ಳುಗಳು ಸುಪ್ರೀಂಕೋರ್ಟ್ ತೀರ್ಪುನಿಂದ ಬಹಿರಂಗಗೊಂಡ ನಂತರ ಹತಾಷೆಗೊಂಡು ಕಾಂಗ್ರೆಸ್ ಇಂಥ ತಿರುಚಲ್ಪಟ್ಟ ಆಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ. ರಫೇಲ್ಗೆ ಸಂಬಂಧಿಸಿದ ಅಂಥ ಯಾವುದೇ ಚರ್ಚೆ ಕ್ಯಾಬಿನೆಟ್ ಸಭೆಯಲ್ಲಿ ಆಗಿಲ್ಲ, " ಎಂದು ಅವರು ತಮ್ಮ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ರಫೇಲ್ ಹಗರಣದ ದಾಖಲೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ಆಡಿಯೋ ಕ್ಲಿಪ್ವೊಂದನ್ನು ಬಿಡುಗಡೆ ಮಾಡಿದರು. ಗೋವಾ ಸರ್ಕಾರದ ಆರೋಗ್ಯ ಸಚಿವ ವಿಶ್ವಜಿತ್ ಪ್ರತಾಪ್ ರಾಣೆ ಅವರು, ಪರಿಕ್ಕರ್ ಮಲಗುವ ಕೋಣೆಯಲ್ಲಿ ಮಹತ್ವದ ರಫೇಲ್ ಡೀಲ್ಗೆ ಸಂಬಂಧಿಸಿದ ಫೈಲ್ಗಳಿವೆ ಎಂದು ಮಾತನಾಡಿದ್ದಾರೆ. ಈ ಆಡಿಯೋದಲ್ಲಿ ಎಲ್ಲವೂ ಇದೆ ಎಂದು ಹೇಳಿದ್ದರು.

ವಿಶ್ವಜಿತ್ ಪ್ರತಾಪ್ ರಾಣೆ ಪ್ರತಿಕ್ರಿಯೆ
ಈ ಆಡಿಯೋವನ್ನ ತಿರುಚಲಾಗಿದ್ದು, ಇಂಥ ಕೀಳುಮಟ್ಟದ ರಾಜಕೀಯವನ್ನು ಕಾಂಗ್ರೆಸ್ ಬಿಡಬೇಕೆಂದು ತಿರುಗೇಟು ನೀಡಿದ್ದಾರೆ. ನನ್ನ ಧ್ವನಿಯನ್ನು ಮರುಸೃಷ್ಟಿಸಿ ನಕಲಿ ಆಡಿಯೋ ರೆಡಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪರಿಕ್ಕರ್, ರಫೇಲ್ ಡೀಲ್ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಕುರಿತು ನನ್ನ ಬಳಿ ಮಾತನಾಡಿಲ್ಲ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ಪ್ರತಾಪ್ ರಾಣೆ ಹೇಳಿದ್ದಾರೆ.
|
ಯಾರ ಜತೆ ಮಾತುಕತೆ ನಡೆದಿದ್ದು?
ವಿಶ್ವಜಿತ್ ರಾಣೆ ಮತ್ತು ಅನಾಮಧೇಯ ವ್ಯಕ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಪರಿಕ್ಕರ್ ಅವರು ನಿರಾಕರಿಸಿದ್ದಾರೆ. ಆಡಿಯೋದಲ್ಲಿರುವುದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ತಿರುಚಲ್ಪಟ್ಟದ್ದು ಎಂದು ಟ್ವೀಟ್ ಮಾಡಿದ್ದಾರೆ.
|
ಈ ಆಡಿಯೋವನ್ನು ತಿರುಚಲಾಗಿದೆ
ಈ ಆಡಿಯೋವನ್ನು ತಿರುಚಲಾಗಿದ್ದು, ಇಂಥ ಕಳೆಮಟ್ಟದ ರಾಜಕೀಯವನ್ನ ಕಾಂಗ್ರೆಸ್ ಬಿಡಬೇಕೆಂದು ತಿರುಗೇಟು ನೀಡಿದ್ದಾರೆ. ನನ್ನ ಧ್ವನಿಯನ್ನು ಮರುಸೃಷ್ಟಿಸಿ ಆಡಿಯೋ ರೆಡಿ ಮಾಡಲಾಗಿದೆ ಎಂಬುದು ಸುಳ್ಳು ಎಂದು ವಿಶ್ವಜಿತ್ ರಾಣೆ ಹೇಳಿದ್ದಾರೆ.
|
ಹತಾಶೆಗೊಂಡಿರುವ ಕಾಂಗ್ರೆಸ್
ರಫೇಲ್ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದು ಮತ್ತು ಕಾಂಗ್ರೆಸ್ನ ಸುಳ್ಳುಗಳು ಸುಪ್ರೀಂಕೋರ್ಟ್ ತೀರ್ಪುನಿಂದ ಬಹಿರಂಗಗೊಂಡ ನಂತರ ಹತಾಷೆಗೊಂಡು ಕಾಂಗ್ರೆಸ್ ಇಂಥ ತಿರುಚಲ್ಪಟ್ಟ ಆಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ












Click it and Unblock the Notifications