ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಿಎಂ ದಿಗಂಬರ್ ಕಾಮತ್ ಸೇರಿದಂತೆ 8 ಕಾಂಗ್ರೆಸ್ ಶಾಸಕರು ಗೋವಾ ಬಿಜೆಪಿಗೆ ಸೇರ್ಪಡೆ ಸಾಧ್ಯತೆ

|
Google Oneindia Kannada News

ಪಣಜಿ, ಸೆ. 14: ಮಾಜಿ ಸಿಎಂ ದಿಗಂಬರ್ ಕಾಮತ್ ಸೇರಿದಂತೆ 8 ಕಾಂಗ್ರೆಸ್ ಶಾಸಕರು ಇಂದು ಗೋವಾದಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಮಾಜಿ ಸಿಎಂ ದಿಗಂಬರ್ ಕಾಮತ್, ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೋ ಸೇರಿದಂತೆ ಎಂಟು ಕಾಂಗ್ರೆಸ್ ಶಾಸಕರು ಇಂದು ಗೋವಾದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ ತಿಳಿಸಿದ್ದಾರೆ.

ಈ ಹಿಂದೆ ಜುಲೈನಲ್ಲಿ ಅಧಿವೇಶನ ಮುಂಚಿತವಾಗಿ ಗೋವಾ ಕಾಂಗ್ರೆಸ್ ಕರೆದಿದ್ದ ಸಭೆಗೆ 7 ಮಂದಿ ಶಾಸಕರು ಗೈರಾಗಿದ್ದರು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈಗಾಗಲೇ ಈ ಎಲ್ಲಾ ಶಾಸಕರು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಷಯ ಕೇಳಿಬರುತ್ತಿದೆ. ಆದರೂ ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ, ಆಡಳಿತಾರೂಢ ಬಿಜೆಪಿಯು ಇಂತಹ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್ ಹೇಳಿದ್ದರು.

ಮೂಲಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ದಿಗಂಬರ್ ಕಾಮತ್ ಶಾಸಕರ ಸಭೆಗೆ ಗೈರಾಗಿದ್ದರು. ಮೈಕೆಲ್ ಲೋಬೋ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕೆ ಕಾಮತ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದ್ದು ಪಕ್ಷವು ಇದನ್ನು ನಿರಾಕರಿಸಿತ್ತು.

8 Congress MLAs including former CM Digambar Kamat are likely to join the Goa BJP

ಲಭ್ಯವಾದ ಮಾಹಿತಿ ಅನ್ವಯ ಹಿರಿಯ ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್ ಬಿಜೆಪಿ ಸೇರುವ ಸಾಧ್ಯತೆಗಳಿವೆ, ಕಮಲ ಪಾಳಯ ಇವರನ್ನು ಇಂಧನ ಸಚಿವರನ್ನಾಗಿ ಮಾಡಬಹುದು. ಕಾಮತ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ನಂತರ ಬಿಜೆಪಿ ಸೇರಿದ್ದರು, ಅಲ್ಲಿ ಸುಮಾರು 11 ವರ್ಷಗಳ ಕಾಲ ಇದ್ದರು. ಇದಾದ ಬಳಿಕ ಮತ್ತೆ ತವರಿಗೆ ವಾಪಸಾಗಿದ್ದ ಅವರು ಕಾಂಗ್ರೆಸ್ ಸೇರಿ ರಾಜ್ಯದ ಸಿಎಂ ಕೂಡ ಆಗಿದ್ದರು. ಹೀಗಿರುವಾಗ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ಅವರ ಮೇಲಿತ್ತು. ಆದರೆ ಪಕ್ಷ ಸೋಲನ್ನು ಎದುರಿಸಬೇಕಾಯಿತು.

ದಿಗಂಬರ್ ಕಾಮತ್ ಯಾರು?

ಗೋವಾದಲ್ಲಿ 10 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಕಾಮತ್ ಮೂರು ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದರು. ಅವರನ್ನು ಗೋವಾದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ಎಂದು ಪರಿಗಣಿಸಲಾಗಿದೆ. ಅವರು ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. 2005ರಲ್ಲಿ ಕಾಂಗ್ರೆಸ್ ಸೇರಿ 2007ರಲ್ಲಿ ಸಿಎಂ ಆದರು. ಕಾಮತ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ. 2007ರಿಂದ 2012ರ ನಡುವೆ ಅವರು ಸಿಎಂ ಆಗಿದ್ದಾಗ ನ್ಯಾಯಮೂರ್ತಿ ಎಂ.ಬಿ.ಷಾ ಆಯೋಗ 35 ಸಾವಿರ ಕೋಟಿ ರೂ.ಗಳ ಗಣಿ ಹಗರಣದಲ್ಲಿ ಅವರ ವಿರುದ್ಧ ಆರೋಪ ಮಾಡಿತ್ತು. 2014ರಲ್ಲಿ ಕೂಡ ಈ ಬಗ್ಗೆ ವಿಚಾರಣೆ ನಡೆಸಲಾಗಿತ್ತು.

ಗೋವಾದ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 25 ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನಿಂದ 11 ಸದಸ್ಯರಿದ್ದಾರೆ. ಸದ್ಯ ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ ಹೇಳಿದಂತೆ 8 ಕಾಂಗ್ರೆಸ್ ಶಾಸಕರು ಗೋವಾ ಬಿಜೆಪಿಗೆ ಸೇರ್ಪಡೆಯಾದರೆ ಕೇವಲ ಮೂರು ಸದಸ್ಯರು ಮಾತ್ರ ಉಳಿಯಲಿದ್ದಾರೆ.

English summary
8 Congress MLAs including former CM Digambar Kamat are likely to join BJP in Goa today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X