• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೂವರೆ ಶತಮಾನದ ನಂತರ ಗೋವಾಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್

|

ಪಣಜಿ, ಸೆ. 06: ಒಂದೂವರೆ ಶತಮಾನದ ಬಳಿಕ ಗೋವಾಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರಣಕ್ಕೆ 75 ಹೊಸ ಕಾಲೇಜು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಬಳಿಕ ಕರಾವಳಿ ರಾಜ್ಯಕ್ಕೆ ಕಾಲೇಜು ಮಂಜೂರಾಗಿರುವ ವಿಷಯವನ್ನು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದರು.

ಪೋರ್ಚುಗಲ್ ಆಡಳಿತ ಹೊಂದಿದ್ದ ಗೋವಾ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಮೆಡಿಕಲ್ ಕಾಲೇಜು ಆರಂಭಗೊಂಡಾಗ ಏಷ್ಯಾದಲ್ಲೇ ಪ್ರಥಮ ಎನಿಸಿಕೊಂಡಿತ್ತು. 1842ರಲ್ಲಿ ಉತ್ತರ ಗೋವಾದ ಪಣಜಿ ಸಮೀಪದ ಬ್ಯಾಂಬೊಲಿಮ್ ನಲ್ಲಿ ಗೋವಾ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ(ಜಿಎಂಸಿಎಚ್ ) ಸ್ಥಾಪಿಸಲಾಗಿತ್ತು. ಪ್ರತಿ ವರ್ಷ ಸರಾಸರಿ 150 ಎಂಬಿಬಿಎಸ್ ಪದವೀಧರರು ಕಾಲೇಜಿನಿಂದ ಪಾಸಾಗಿ ಹೊರ ಬರುತ್ತಿದ್ದಾರೆ.

75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾದ ಮೋದಿ ಸರ್ಕಾರ

ಈಗ ಹೊಸ ಕಾಲೇಜು ಸ್ಥಾಪನೆಯಾಗಲಿದ್ದು, ಜಿಎಂಸಿಎಚ್ ಸ್ವಾಮ್ಯಕ್ಕೆ ಒಳಪಡುವುದಿಲ್ಲ, ಹೆಚ್ಚಿನ ಪ್ರಮಾಣದಲ್ಲಿ ವೈದ್ಯರನ್ನು ಹೊಂದಲು ನೆರವಾಗಲಿದೆ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಖಾಸಗಿ ಕಾಲೇಜಾಗಿರಬೇಕೇ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದರು.

"75 ಹೊಸ ಕಾಲೇಜಿಗೆ ಮಂಜೂರು ಸಿಕ್ಕಿರುವುದರಿಂದ ಸುಮಾರು 15,700 ಎಂಬಿಬಿಎಸ್ ಹೆಚ್ಚು ಸೀಟ್ ಗಳು ಸೇರ್ಪಡೆ ಆಗಲಿವೆ. ಹಾಲಿ ಜಿಲ್ಲಾ ಮತ್ತು ಶಿಫಾರಸ್ಸು ಆಧಾರಿತ ಆಸ್ಪತ್ರೆಗೆ ಹೊಂದಿಕೊಂಡಂತೆ ಹೊಸ ಮೆಡಿಕಲ್ ಕಾಲೇಜುಗಳು 2021-22ರ ಸುಮಾರಿಗೆ ಈ ಹೊಸ ಮೆಡಿಕಲ್ ಕಾಲೇಜುಗಳು ಸಂಪೂರ್ಣವಾಗಿ ಹೊಂದಿಕೊಳ್ಳಲಿವೆ" ಎಂದು ಮೋದಿ ಸರ್ಕಾರ ಇತ್ತೀಚೆಗೆ ಘೋಷಿಸಿದೆ.

English summary
Over one-and-half centuries after a medical college, one of the first in Asia, was started in then Portuguse-ruled Goa, the coastal state may get another school for doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X