ಈವ್ ಟೀಸಿಂಗ್: ಯುವಕರಿಂದ ತಪ್ಪಿಸಿಕೊಳ್ಳಲು ಹೋಗಿ ಯುವತಿ ಸಾವು

ನೊಯ್ಡಾ, ಆಗಸ್ಟ್ 11: ಗ್ರೇಟರ್ ನೊಯ್ಡಾದ ದಾದ್ರಿ ಜಿಲ್ಲೆಯ ಯುವತಿಯೊಬ್ಬರು ಬುಲಂದ್‌ಶೆಹರ್‌ಗೆ ತನ್ನ ದ್ವಿಚಕ್ರವಾಹನದಲ್ಲಿ ತೆರಳುವಾಗ ಬಿದ್ದು ಸಾವನ್ನಪ್ಪಿದ್ದಾಳೆ.

Recommended Video

      ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

      ಆಕೆ ಅಮೆರಿಕದ ಬಾಕ್ಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದಳು. ಆಗಸ್ಟ್ 20 ರಂದು ಅಮೆರಿಕಕ್ಕೆ ವಾಪಸ್ ಆಗುವವಳಿದ್ದಳು.

      ಆಕೆಯ ಕುಟುಂಬದವರು ನೀಡಿದ ಮಾಹಿತಿ ಪ್ರಕಾರ ಆಕೆಯು ತನ್ನ ಅಂಕಲ್ ಜೊತೆ ಸ್ಕೂಟಿಯಲ್ಲಿ ಬರುತ್ತಿರುವಾಗ ಇಬ್ಬರು ಯುವಕರು ಬೈಕಿನಲ್ಲಿ ಆಕೆಯನ್ನು ಹಿಂಬಾಲಿಸಿದ್ದಾರೆ. ಆ ಇಬ್ಬರು ದುರ್ವರ್ತನೆ ತೋರಿದ್ದಾರೆ. ಕೆಟ್ಟ ಶಬ್ದಗಳನ್ನು ಬಳಸಿ ಆಕೆಯ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ.

      Uttar Pradesh: Chased By Eve Teasers, US Scholar Girl Dies In Bulandshahr Road Accident

      ಹಾಗೆಯೇ ಆಕೆಯನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ತಕ್ಷಣ ದುಷ್ಕರ್ಮಿಗಳ ಬೈಕ್ ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

      ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಎಸ್‌ಪಿ ಅತುಲ್ ಶ್ರೀವಾತ್ಸವ ತಿಳಿಸಿದ್ದಾರೆ. ಆಕೆ ಸ್ಕಾಲರ್‌ಶಿಪ್ ಮೂಲಕ ವಿದೇಶಕ್ಕೆ ವ್ಯಾಸಂಗಕ್ಕೆಂದು ತೆರಳಿದ್ದರು.

      ಈವ್ ಟೀಸಿಂಗ್ ಎಂದರೆ ಸಾರ್ವಜನಿಕ ಪ್ರದೇಶದಲ್ಲಿ ಯುವತಿ ಮೇಲೆ ಕೆಟ್ಟ ಶಬ್ದಗಳನ್ನು ಬಳಕೆ ಮಾಡಿ ನಿಂದಿಸುವುದು, ಅಥವಾ ಆಕೆಯ ಮೇಲೆ ದೌರ್ಜನ್ಯ ನಡೆಸುವುದು, ಲೈಂಗಿಕ ದೌರ್ಜನ್ಯವೆಸಗುವುದು ಎಂದರ್ಥ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+