ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನೋಯ್ಡಾದ ಅವಳಿ ಕಟ್ಟಡಗಳು 9 ಸೆಕೆಂಡುಗಳಲ್ಲಿ ನೆಲಸಮ

|
Google Oneindia Kannada News

ಲಕ್ನೋ, ಆಗಸ್ಟ್ 28: ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಸೂಪರ್‌ಟೆಕ್ ಅವಳಿ ಕಟ್ಟಡಗಳು ಕೇವಲ 9 ಸೆಕೆಂಡುಗಳಲ್ಲಿ ನೆಲಸಮವಾಗಿವೆ. ಅವಳಿ ಕಟ್ಟಡ ನೆಲಸಮ ಸಂಪೂರ್ಣ ಎಂದು ನೋಯ್ಡಾ ಪ್ರಾಧಿಕಾರ ಘೋಷಿಸಿದೆ.

ನೋಯ್ಡಾದ ಸೆಕ್ಟರ್ 93A ನಲ್ಲಿರುವ ಸೂಪರ್‌ಟೆಕ್ ಅವಳಿ ಕಟ್ಟಡಗಳಾಗಿರುವ ಅಪೆಕ್ಸ್ (32 ಮಹಡಿಗಳು) ಮತ್ತು ಸೆಯಾನೆ (29 ಮಹಡಿಗಳು) ಟವರ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವಿತ್ತು.

Breaking: ನೋಯ್ಡಾದ ಅವಳಿ ಕಟ್ಟಡಗಳು ಮಧ್ಯಾಹ್ನ ನೆಲಸಮBreaking: ನೋಯ್ಡಾದ ಅವಳಿ ಕಟ್ಟಡಗಳು ಮಧ್ಯಾಹ್ನ ನೆಲಸಮ

ನಿಯಮಗಳ ಉಲ್ಲಂಘನೆಯನ್ನು ಆರೋಪಿಸಿ ನಿವಾಸಿಗಳು ನಡೆಸಿದ 9 ವರ್ಷಗಳ ಸುದೀರ್ಘ ಹೋರಾಟಕ್ಕೆ ಅಂತ್ಯ ಹಾಡಲಾಗಿದೆ. ಭಾರೀ ಸ್ಫೋಟದಲ್ಲಿ ಎರಡು ಕಟ್ಟಡಗಳು ನೆಲಸಮವಾಗಿವೆ.

The Supertech twin towers in Noida are Brought Down In 9-Second Operation

ಸ್ಫೋಟದ ಕೆಲವು ಗಂಟೆಗಳ ಮುಂಚೆಯೇ ಪ್ರದೇಶದಲ್ಲಿರುವವರನ್ನು ಸ್ಥಳಾಂತರಿಸಲಾಗಿತ್ತು. ಪಕ್ಕದ ಕಟ್ಟಡಗಳು, ಮನೆಗಳು ಸ್ಫೋಟದಿಂದ ಹಾಳಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಚಾರ ಮಾರ್ಗಗಳನ್ನು ಬೇರೆಡೆಗೆ ನಿಯೋಜಿಸಿ, ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿತ್ತು.

ಎರಡು ಟವರ್‌ಗಳನ್ನು ನೆಲಸಮ ಮಾಡಲು 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಟ್ಟಡಗಳ ಕಂಬಗಳಲ್ಲಿ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಸೇರಿಸಲಾಗಿತ್ತು. 20,000 ಸರ್ಕ್ಯೂಟ್‌ಗಳನ್ನು ಹೊಂದಿಸಲಾಗಿತ್ತು.

ಜಲಪಾತ ತಂತ್ರ (waterfall technique) ಬಳಸಿ ಅವಳಿ ಕಟ್ಟಡಗಳು ನೇರವಾಗಿ ಕೆಳಗೆ ಬೀಳುವಂತೆ ಸ್ಫೋಟವನ್ನು ಪ್ಲಾನ್ ಮಾಡಲಾಗಿತ್ತು.

ಈ ಪ್ರದೇಶದ ಸುಮಾರು 7,000 ನಿವಾಸಿಗಳನ್ನು ಭಾನುವಾರ ಬೆಳಗ್ಗೆ ಸ್ಥಳಾಂತರಿಸಲಾಯಿತು. ಅಕ್ಕಪಕ್ಕದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಅವುಗಳನ್ನು ಪುನಃಸ್ಥಾಪಿಸಲಾಗುತ್ತದೆ ಮತ್ತು ನಿವಾಸಿಗಳಿಗೆ ಸಂಜೆ 5.30 ರೊಳಗೆ ಹಿಂತಿರುಗಲು ಅನುಮತಿಸಲಾಗುತ್ತದೆ.

ಭಾರೀ ಧೂಳಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವಂತೆ ನಿವಾಸಿಗಳಿಗೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ 450 ಮೀಟರ್ ನಿಷೇಧಿತ ವಲಯದೊಳಗೆ ಸಂಚಾರವನ್ನು ನಿಲ್ಲಿಸಲಾಗಿದೆ. ಮಧ್ಯಾಹ್ನ 2.15 ರಿಂದ 2.45 ರವರೆಗೆ ಸ್ಫೋಟದ ಎರಡೂ ಬದಿಯಲ್ಲಿ 15 ನಿಮಿಷಗಳ ಕಾಲ, 30 ನಿಮಿಷಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಭಾನುವಾರ ಬೆಳಗ್ಗೆ ತಿಳಿಸಿದ್ದರು.

ಅಕ್ಕಪಕ್ಕದ ಕೆಲವು ಕಟ್ಟಡಗಳು ಅವಳಿ ಕಟ್ಟಡಗಳಿಗೆ 8 ಮೀಟರ್‌ಗಳಷ್ಟು ಹತ್ತಿರದಲ್ಲಿವೆ. 12 ಮೀಟರ್ ದೂರದಲ್ಲಿ ಇತರ ಕೆಲವು ಕಟ್ಟಡಗಳಿವೆ. ಧೂಳಿನಿಂದ ರಕ್ಷಿಸಲು ಅವುಗಳನ್ನು ವಿಶೇಷ ಬಟ್ಟೆಯಿಂದ ಮುಚ್ಚಲಾಗಿದೆ.

100 ಕೋಟಿ ವಿಮಾ ಪಾಲಿಸಿಯಡಿ ಕೆಡವುವ ಕಾರ್ಯ ನಡೆದಿದೆ. ಪಕ್ಕದ ಕಟ್ಟಡಗಳಿಗೆ ಯಾವುದಾದರೂ ಹಾನಿಯಾದರೂ ಅದನ್ನು ತುಂಬಬೇಕು. ಪ್ರೀಮಿಯಂ ಮತ್ತು ಇತರ ವೆಚ್ಚಗಳನ್ನು ಸೂಪರ್‌ಟೆಕ್ ಭರಿಸಬೇಕಾಗುತ್ತದೆ. ಕೆಡವುವ ಯೋಜನೆಗೆ ₹ 20 ಕೋಟಿಗೂ ಹೆಚ್ಚು ವೆಚ್ಚವಾಗಬಹುದಾದರೂ, ಕಟ್ಟಡಗಳಿಂದ 50 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ನಿಯಮಗಳ ಉಲ್ಲಂಘನೆಯನ್ನು ಆರೋಪಿಸಿ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಸೊಸೈಟಿಯ ನಿವಾಸಿಗಳು 2012 ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಸೂಪರ್‌ಟೆಕ್ ಗುಂಪು ಹೆಚ್ಚಿನ ಫ್ಲಾಟ್‌ಗಳನ್ನು ಮಾರಾಟ ಮಾಡಲು ಮತ್ತು ಅವರ ಲಾಭದ ಪ್ರಮಾಣವನ್ನು ಹೆಚ್ಚಿಸಲು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ವಾದಿಸಿದರು.

ಅದರಂತೆ, 2014ರಲ್ಲಿ ನ್ಯಾಯಾಲಯವು ಆದೇಶವನ್ನು ಸಲ್ಲಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ (ಸ್ವಂತ ವೆಚ್ಚದಲ್ಲಿ) ಟವರ್‌ಗಳನ್ನು ಕೆಡವಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು. ಆದರೆ, ನಂತರ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್, ಅಲಹಾಬಾದ್ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್‌ನಲ್ಲಿ 9 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿದೆ.

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವುದು ದೃಢಪಟ್ಟ ನಂತರ ಸುಪ್ರೀಂ ಕೋರ್ಟ್‌ನಿಂದ ಕಟ್ಟಡಗಳ ನೆಲಸಮಕ್ಕೆ ಆದೇಶ ನೀಡಲಾಗಿತ್ತು. ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಂಪನಿಯು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ತಿಳಿಸಿತ್ತು.

ಕಳೆದ ಆಗಸ್ಟ್‌ನಲ್ಲಿ ಟವರ್‌ಗಳನ್ನು ಕೆಡವಲು ನ್ಯಾಯಾಲಯ ಮೂರು ತಿಂಗಳ ಕಾಲಾವಕಾಶ ನೀಡಿತ್ತು, ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಕಟ್ಟಡಗಳ ನೆಲಸಮ ಒಂದು ವರ್ಷ ತೆಗೆದುಕೊಂಡಿದೆ.

English summary
The Supertech twin towers in Noida are Brought Down In 9-Second Operation. 3,700 kilograms of explosives used to destroy. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X