ನವ ದಂಪತಿಯ ಸಂತೋಷದ ನಡುವೆ ಬಂತು ಕೊರೊನಾ: ಬೇಸರದಲ್ಲಿ ಪತಿ
ನವ ದೆಹಲಿ, ಮಾರ್ಚ್ 19: ಕೊರೊನಾ ವೈರಸ್ ಎಷ್ಟೋ ಜನರ ಜೀವನವನ್ನು ಉಲ್ಟಾ ಮಾಡಿದೆ. ಹೊಸದಾಗಿ ಮದುವೆಯಾದ ಪುಣೆಯ ದಂಪತಿಗಳು ಕೊರೊನಾದಿಂದ ದೂರದೂರ ಆಗಿದ್ದಾರೆ.
ಪುಣೆಯ ವೈದ್ಯ ದಂಪತಿ ಸಿದ್ದಾರ್ಥ್ ಮತ್ತು ಮೋನಿಕಾ ಫೆಬ್ರವರಿ 14 ಪ್ರೇಮಿಗಳ ದಿನದ ಸಂಭ್ರಮದಲ್ಲಿ ಮದುವೆ ಆಗಿದ್ದರು. ವಿವಾಹದ ಬಳಿಕ 14 ದಿನ ವಿದೇಶಕ್ಕೆ ಹನಿಮೂನ್ ಪ್ರವಾಸ ಹೋಗಿದ್ದರು. ಅಲ್ಲಿಂದ ವಾಪಸ್ ಬಂದ ಮೇಲೆ ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಗಂಡ, ಹೆಂಡತಿ ಕೆಲವು ದಿನಗಳ ಕಾಲ ಬೇರೆ ಬೇರೆ ಇರುವ ಪರಿಸ್ಥಿತಿ ಎದುರಾಗಿದೆ.
ಫ್ರಾನ್ಸ್, ಸ್ವಿಜರ್ಲ್ಯಾಂಡ್ ಸೇರಿದಂತೆ ಯೂರೋಪ್ ಪ್ರವಾಸಕ್ಕೆ ಸಿದ್ದಾರ್ಥ್ ಮತ್ತು ಮೋನಿಕಾ ಹೋಗಿ ಬಂದರು. ಮಾರ್ಚ್ 5 ಮುಂಬೈ ವಿಮಾನ ನಿಲ್ದಾಣದಲ್ಲಿ ಅವರಿಗೆ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿತ್ತು. ಆ ನಂತರ ಸಿದ್ದಾರ್ಥ್ ಆಫೀಸ್‌ಗೆ ತೆರಳಿದಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಶೀತ ಕಾಣಿಸಿಕೊಂಡಿತು.

ಶೀತ ಕೊರೊನಾ ಲಕ್ಷಣಗಳಲ್ಲಿ ಒಂದಾಗಿರುವ ಕಾರಣ ಅವರನ್ನು ಒಂಟಿಯಾಗಿ ಮನೆಯಲ್ಲಿಯೇ ವಾಸ (ಕ್ವಾರಂಟೈನ್) ಆಗಿ ಇಡಲಾಗಿದೆ. 14 ದಿನ ಅವರು ಏಕಾಂಗಿಯಾಗಿ ಸಿದ್ದಾರ್ಥ್ ಇರಬೇಕಿದೆ. ತಮ್ಮ ಇಂತಹ ಸ್ಥಿತಿಯನ್ನು ಅವರು ಹಂಚಿಕೊಂಡಿದ್ದು, ಆರೋಗ್ಯದ ಮಹತ್ವದ ಬಗ್ಗೆ ಹೇಳಿದ್ದಾರೆ.
ಸಿದ್ದಾರ್ಥ್ ಪತ್ನಿ ಮೋನಿಕಾ ಡಾಕ್ಟರ್ ಆಗಿದ್ದಾರೆ. ತಂದೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿಗೆ ಕ್ವಾರಂಟೈನ್ ನಲ್ಲಿ ಇಟ್ಟಿರುವ ವಿಷಯ ತಿಳಿದು ಅವರು ಅದನ್ನು ಪಾಲಿಸುವಂತೆ ತಿಳಿಸಿದ್ದಾರೆ.












Click it and Unblock the Notifications