ರಾಷ್ಟ್ರಪತಿ ಭವನದ ಎದುರು ನಗ್ನರಾದ ದಂಪತಿ

New Delhi - Young Couple strips in front of Rashtrapati Bhavan - police shocked
ನವದೆಹಲಿ, ಫೆ.3: ರಾಷ್ಟ್ರದ ರಾಜಧಾನಿ ವಿಪರೀತ ಚಳಿಯಿಂದ ಗಢಗಢ ಅನ್ನುತ್ತಿದೆ. ಅಂಥಾದ್ದರಲ್ಲಿ ಯುವದಂಪತಿ ಇಂದು ಬೆಳಗ್ಗೆ ರಾಷ್ಟ್ರಪತಿ ಭವನದೆದುರು ನಗ್ನಗೊಂಡು ದೊಡ್ಡ ಪ್ರಹಸನವನ್ನುಂಟುಮಾಡಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿಮಾಡಬೇಕು ಎಂದು 30 ವರ್ಷ ದಾಟಿದ ದಂಪತಿ ರಾಷ್ಟ್ರಪತಿ ಭವನದತ್ತ ತೆರಳಿದ್ದಾರೆ. ಆದರೆ ಅದು ಭದ್ರಕೋಟೆ. ನರಪಿಳ್ಳೆಯೂ ನುಸುಳದಂತಹ ಜಾಗ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಂಗೆಲ್ಲಾ ಬೀಡೋಕ್ಕಾಗೊಲ್ಲ. ನಿಮ್ಮ ಸಮಸ್ಯೆ ಏನು ಅಂತ ಹೇಳಿ, ನೋಡೋಣ ಎಂದಿದ್ದಾರೆ.

ಆದರೆ ಯುವ ದಂಪತಿಗೆ ಏನು ಹೇಳಬೇಕೋ ತೋಚಿಲ್ಲ. ಆದರೂ ಒಳಗೆ ಹೋಗಲೇಬೇಕು ಎಂದು ವರಾತ ತೆಗೆದಿದ್ದಾರೆ. ಇದಕ್ಕೆಲ್ಲಾ ಸಿಬ್ಬಂದಿ ಸೊಪ್ಪು ಹಾಕಿಲ್ಲ. ಆದರೆ ಅವರೋ ಹಾಕಿದ್ದ ಬಟ್ಟೆಯನ್ನೇ ಕಿತ್ತು ಬಿಸಾಕಿ, ರಂಪಾಟ ಮಾಡಿದ್ದಾರೆ.

ಅವಾಕ್ಕಾದ ಪೊಲೀಸರು ತಕ್ಷಣಾ ಸಾವರಿಸಿಕೊಂಡು ಇಬ್ಬರನ್ನೂ ಹಿಡಿಯಲು ಯತ್ನಿಸಿದ್ದಾರೆ. ಆದರೆ ಅವರು ಅತ್ತಿಂದಿತ್ತ ಇತ್ತಿಂದತ್ತ ಓಡಿದ್ದಾರೆ. ಆದರೆ ಪೊಲೀಸರು ಪಂಚೆ ಬಿಚ್ಚಿ ಓಡುತ್ತಿದ್ದ ಪುರುಷನನ್ನು ಹಿಡಿದು, ಪೊಲೀಸ್ ವ್ಯಾನಿಗೆ ಹಾಕಿಕೊಂಡಿದ್ದಾರೆ. ಅತ್ತ ಬಿಚ್ಚೋಲೆ ಗಂಗಮ್ಮನನ್ನೂ ಹಿಡಿದು, ವ್ಯಾನಿನಲ್ಲಿ ಕೂಡಿಹಾಕಿದ್ದಾರೆ. ಇಬ್ಬರಿಗೂ ಹಾಕಿಕೊಳ್ಳಲು ಒಂದಷ್ಟು ಬಟ್ಟೆಯನ್ನು ಕೊಟ್ಟಿದ್ದಾರೆ.

ನಂತರ ಇಬ್ಬರನ್ನೂ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದು ಆತಿಥ್ಯ ನೀಡಿದ್ದಾರೆ. ಜತೆಗೆ, ಆ ಜೋಡಿ ಹಂಗ್ಯಾಕಾಡಿತು, ಅವರು ಎಲ್ಲಿಂದ ನುಸುಳಿ ಬಂದರು, ಅವರ ಉದ್ದೇಶಾವಾದರೂ ಏನಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ವಿಚಾರಣೆಗಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+