ಅಮಿತ್ ಶಾ ಭೇಟಿ ಮಾಡಲು ಯಡಿಯೂರಪ್ಪ ದೆಹಲಿಗೆ
ನವದೆಹಲಿ, ಆಗಸ್ಟ್ 22: ದೆಹಲಿಗೆ ಹೊರಟು ನಿಂತಿದ್ದ ಯಡಿಯೂರಪ್ಪ ಅವರಿಗೆ ಅಮಿತ್ ಶಾ ದರ್ಶನ ತಡವಾಗುತ್ತಿದೆ..
ಖಾತೆ ಹಂಚಿಕೆಯಲ್ಲಿನ ಬಿಕ್ಕಟ್ಟು ಮತ್ತು ಅನರ್ಹ ಶಾಸಕರಿಗೆ ಸ್ಥಾನ-ಮಾನ ಕುರಿತು ಚರ್ಚೆ ಮಾಡಲು ಯಡಿಯೂರಪ್ಪ ದೆಹಲಿಗೆ ಹೊರಟಿದ್ದಾರೆ. ಅನರ್ಹ ಶಾಸಕರನ್ನು ನೇರವಾಗಿ ಅಮಿತ್ ಶಾ ಜೊತೆ ಮಾತನಾಡಿಸುವ ಉದ್ದೇಶವೂ ಯಡಿಯೂರಪ್ಪ ಅವರಿಗೆ ಇದೆ.
ಅಮಿತ್ ಶಾ ಅವರು ಗೋವಾಕ್ಕೆ ತೆರಳಿರುವ ಕಾರಣ ಯಡಿಯೂರಪ್ಪ ಅವರಿಗೆ ಅಮಿತ್ ಶಾ ರನ್ನು ಭೇಟಿ ಮಾಡಲು ಸಮಯ ನೀಡಲಾಗಿಲ್ಲ. ಈಗಾಗಲೇ ಅನರ್ಹ ಶಾಸಕರು ದೆಹಲಿ ತಲುಪಿದ್ದು, ಅಮಿತ್ ಶಾ ಭೇಟಿಯಾಗಲು ಉತ್ಸುಕರಾಗಿದ್ದಾರೆ.

ಅನರ್ಹ ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅವರಿಂದ ಸಚಿವ ಸ್ಥಾನದ ವಾಗ್ದಾನ ಪಡೆಯಲೆಂದು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ. ಅವರನ್ನು ಭೇಟಿ ಮಾಡಿಸಲೆಂದು ಯಡಿಯೂರಪ್ಪ ಇಂದು ದೆಹಲಿಗೆ ತೆರಳಲಿದ್ದಾರೆ. ಸಂಜೆ 7:30 ಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಡಿಯೂರಪ್ಪ ಅವರು ನವದೆಹಲಿಗೆ ತೆರಳಲಿದ್ದಾರೆ.












Click it and Unblock the Notifications