ಅತ್ಯಾಚಾರ ಕೊನೆಗೊಳ್ಳಲಿ: ಶೇ. 91ರಷ್ಟು ಮಂದಿ ಅಭಿಮತ
ನವದೆಹಲಿ, ಏ.5: ಮುಂಬೈ ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಮೇಲೆ ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳ ಬಗ್ಗೆ ಸ್ಪಷ್ಟ ಜನಾಭಿಪ್ರಾಯ ವ್ಯಕ್ತವಾಗಿದ್ದು, ಅತ್ಯಾಚಾರಿಗಳನ್ನು ಸುಮ್ಮನೆ ಬಿಡಬೇಡಿ. ಅವರಿಗೆ ಗಲ್ಲುಶಿಕ್ಷೆಯೇ ಉಚಿತ ಶಿಕ್ಷೆ ಎಂಬ ಆಕ್ರೋಶ ಹೊರಹೊಮ್ಮಿದೆ.
Womanifesto ಬೇಕೇಬೇಕು: [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಆದರೆ ದಿಲ್ಲಿಯಲ್ಲಿ ಪೈಶಾಚಿಕ ರೀತಿಯ ದಾಮಿನಿ ಪ್ರಕರಣದಲ್ಲಿಯೂ ಹೀಗೆ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಿತ್ತಲ್ಲಾ. ಅದಾದನಂತರ ಅತ್ಯಾಚಾರ ಪ್ರಕರಣಗಳು ನಿಂತುಹೋದವೇ? ಅಸಲಿಗೆ ಅತ್ಯಾಚಾರವೆಂಬುದು ದೇಶದಲ್ಲಿ ಮಹಾಮಾರಿಯಾಗಿ ವಕ್ಕರಿಸಿಕೊಂಡುಬಿಟ್ಟಿದೆ. ಏನೇ ಆಗಲಿ ಇದನ್ನು ಅಂತ್ಯಗೊಳಿಸಲೇಬೇಕು ಎಂದು ದೇಶದಲ್ಲಿ ಶೇ. 91ರಷ್ಟು ಮಂದಿ ಅಭಿಮತ ವ್ಯಕ್ತಪಡಿಸಿದ್ದಾರೆ.
MDRA/Avaaz ಸಂಸ್ಥೆಗಳು ನಡೆಸಿರುವ ಸಮೀಕ್ಷೆಯ ಪ್ರಕಾರ ಅಭಿಪ್ರಾಯ ವ್ಯಕ್ತಡಿಸಿರುವ ಎಲ್ಲರೂ ಸರಕಾರ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅವರ ಪೈಕಿ ಶೇ. 85ರಷ್ಟು ಮಂದಿ ಮಹಿಳೆಯರ ಮೇಲಿನ ಎಲ್ಲ ರೀತಿಯ ಹಿಂಸೆಗಳನ್ನು ಕೊನೆಗಾಣಿಸಬೇಕು ಎಂದು ಅಭಿಪ್ರಾಯಪಟ್ಟಿರುವುದಾಗಿ Avaaz Executive Director Ricken Patel ಹೇಳಿದ್ದಾರೆ.
ಸಮೀಕ್ಷೆಯ ಪ್ರಮುಖ ಅಂಶಗಳು ಹೀಗಿವೆ:
1. ಶೇ. 94ರಷ್ಟು ಮಂದಿ ಹೇಳುವಂತೆ ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರಗಳನ್ನು ತಡೆಗಟ್ಟಲು ಜಾಗೃತ ಕಾರ್ಯಕ್ರಮಗಳು ಸೇರಿದಂತೆ ವಿಶೇಷ ಅಭಿಯಾನಗಳನ್ನು ಕೈಗೊಳ್ಳಬೇಕು.
2. ಶೇ. 99ರಷ್ಟು ಮಂದಿ ಹೇಳುವಂತೆ ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರಗಳ ಬಗ್ಗೆ ಚಿಂತಿತರಾಗಿದ್ದಾರೆ. ಪ್ರತಿ ಇಬ್ಬರಲ್ಲಿ ಒಬ್ಬ ಮಹಿಳೆಯ ಮೇಲೆ ಹಿಂಸಾಚಾರ/ ದೌರ್ಜನ್ಯಗಳು ನಡೆಯುತ್ತಿವೆ.
3. ಶೇ. 75ರಷ್ಟು ಮಂದಿ ಹೇಳುವಂತೆ ಮಹಿಳೆಯ ಮೇಲಿನ ಹಿಂಸಾಚಾರ/ ದೌರ್ಜನ್ಯಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜನಪ್ರತಿನಿಧಿಗಳು ನೀಡುವ ಭರವಸೆಗಳು ಈಡೇರುವುದೇ ಇಲ್ಲ.
4. ಶೇ. 91ರಷ್ಟು ಮಂದಿ ಹೇಳುವಂತೆ ಹಾಲಿ ಲೋಕಸಭಾ ಚುನಾವಣೆಯಲ್ಲಿ ರಾಕಲೀಯ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳಲ್ಲಿ ಮಹಿಳಾ ಸುರಕ್ಷತೆ ವಿಷಯ ಅಗ್ರ ಸ್ಥಾನ ಪಡೆಯಬೇಕು.
5 ಶೇ. 85ರಷ್ಟು ಮಂದಿ ಹೇಳುವಂತೆ ಯಾವ ಜನನಾಯಕ ಮಹಿಳಾ ಸುರಕ್ಷತೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಾರೋ ಅವರಿಗೇ ತಾವು ಮತ ಹಾಕುವುದಾಗಿ ತಿಳಿಸಿದ್ದಾರೆ.


Click it and Unblock the Notifications
