ಗಂಡನನ್ನು ಕೊಲೆ ಮಾಡಿ, ಸಾವಿಗೆ ಕೊರೊನಾ ವೈರಸ್ ಕಾರಣ ಅಂದ್ಲು

ನವದೆಹಲಿ, ಮೇ 8: ಪತಿಯನ್ನು ಕೊಲೆ ಮಾಡಿ ಸಾವಿಗೆ ಕೊರೊನಾ ವೈರಸ್ ಕಾರಣ ಎಂದು ನಂಬಿಸಿದ್ದ ಮಹಿಳೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.

ಪ್ರಿಯಕರನ ಜೊತೆಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಳು, ಬಳಿಕ ನೆರೆಹೊರೆಯವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದಳು.

ಅನಿತಾ ಕೆಲವು ವರ್ಷಗಳಿಂದ ಸಂಜಯ್ ಎಂಬುವವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದ ಬಳಿಕ ಪತಿ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ನೊಂದ ಆಕೆ ಅತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು. ಇದಕ್ಕಾಗಿ ಪ್ರಿಯಕರನ ಸಹಾಯವನ್ನೂ ಕೂಡ ಪಡೆದಿದ್ದಳು.

Woman Kills Husband Tries To Pass Death Off As Due To Covid

ದೆಹಲಿಯ ಅಶೋಕ್ ವಿಹಾರದಲ್ಲಿ ಶರತ್ ದಾಸ್ ಅಂಗಡಿ ಇಟ್ಟುಕೊಂಡಿದ್ದ. ಅನಿತಾ ಮತ್ತು ಆಕೆಯ ಪ್ರಿಯಕರ ಸಂಜಯ್ ಸೇರಿ ಕೊಲೆ ಮಾಡಿದ್ದಾರೆ.

ಏಪ್ರಿಲ್ 30ರ ರಾತ್ರಿವರೆಗೂ ಆರೋಗ್ಯವಾಗಿದ್ದ ಶರತ್ ರಾತ್ರಿ ವೇಳೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿರುವುದಾಗಿ ಅನಿತಾ ಹೇಳಿರುವುದನ್ನು ನಂಬದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 30 ರಂದು ರಾತ್ರಿ ಊಟ ಮಾಡಿ ಮಲಗಿದ್ದಾಗ, ಅನಿತಾ ಹಾಗೂ ಆಕೆಯ ಪ್ರಿಯಕರ ದಿಂಬನಿಂದ ಮುಖವನ್ನು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಮರುದಿನ ಬೆಳಗ್ಗೆ ಆಕೆ ಕೊರೊನಾದಿಂದ ಪತಿ ಸತ್ತಿರಬಹುದು ಎಂದು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಳು, ಅದಕ್ಕೆ ಹೆದರಿದ ಜನರು ನಮ್ಮ ಪ್ರದೇಶದಲ್ಲಿ ಕೊರೊನಾದಿಂದ ಒಂದು ಸಾವಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಉಸಿರುಗಟ್ಟಿಸಿ ಸಾಯಿಸಿರುವುದಾಗಿ ವೈದ್ಯರು ಹೇಳಿದ್ದರು, ಬಳಿಕ ಅನಿತಾಳನ್ನು ವಶಕ್ಕೆ ಪಡೆದಿದ್ದಾರೆ.ತನಿಖೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+