Fact Check: 1967ರಲ್ಲಿ ಚಿನ್ನ ಖರೀದಿಸದಂತೆ ಇಂದಿರಾ ಗಾಂಧಿ ಮನವಿ ಮಾಡಿದ್ರಾ? ವೈರಲ್ ಫೋಟೋ ಅಸಲಿಯತ್ತು ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಎರಡು ಮೂರು ದಿನದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಂಬಂಧಿಸಿದ ಹಳೆಯ ಪತ್ರಿಕೆಯ ಮುಖಪುಟದ ಚಿತ್ರವೊಂದು ಭಾರಿ ವೈರಲ್ ಆಗುತ್ತಿದೆ. ಜೂನ್ 6, 1967 ರ 'ದಿ ಹಿಂದೂ' ದಿನಪತ್ರಿಕೆಯ ಮುಖಪುಟವಿದೆ ಎಂದು ಹೇಳಲಾಗಿದೆ. ಇದರಲ್ಲಿ "ಚಿನ್ನ ಖರೀದಿಸಬೇಡಿ, ಜನರಿಗೆ ಇಂದಿರಾ ಮನವಿ; 'ರಾಷ್ಟ್ರೀಯ ಶಿಸ್ತು' ಕಾಯ್ದುಕೊಳ್ಳಲು ಕರೆ" ಎಂಬ ಹೆಡ್‌ಲೈನ್‌ ನೀಡಲಾಗಿದೆ. ದೇಶದಲ್ಲಿ ವಿದೇಶಿ ವಿನಿಮಯದ ಕೊರತೆ ಇರುವ ಕಾರಣ, ಚಿನ್ನದ ಆಮದನ್ನು ಕಡಿಮೆ ಮಾಡಲು ಜನರು ಚಿನ್ನ ಖರೀದಿಸಬಾರದು ಎಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇಳಿದ್ದರು ಎಂದು ಈ ಪತ್ರಿಕಾ ತುಣುಕಿನಲ್ಲಿ ತೋರಿಸಲಾಗಿದೆ.

ಆದರೆ, ಈ ವೈರಲ್ ಪತ್ರಿಕಾ ತುಣುಕಿನ ಅಸಲಿಯತ್ತು ಏನು ಎಂದು ಪರಿಶೀಲಿಸಿದಾಗ, ಇದು ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಹೌದು, ಈ ವೈರಲ್ ಚಿತ್ರವನ್ನು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ. ಸ್ವತಃ 'ದಿ ಹಿಂದೂ' ಪತ್ರಿಕೆಯ ಆಡಳಿತ ಮಂಡಳಿಯೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. "ಜೂನ್ 6, 1967 ರ ದಿ ಹಿಂದೂ ಪತ್ರಿಕೆಯ ಮುಖಪುಟ ಎಂದು ಹೇಳಿಕೊಳ್ಳುವ ಡಿಜಿಟಲ್ ಆಗಿ ತಿದ್ದಲಾದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ನಮ್ಮ ಆರ್ಕೈವ್‌ಗಳಿಂದ ಪಡೆದ ಅಧಿಕೃತ ಪುಟವಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಓದುಗರು ಇದನ್ನು ಶೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಮತ್ತು ಪರಿಶೀಲಿಸಿ" ಎಂದು ಪತ್ರಿಕೆ ಸ್ಪಷ್ಟವಾಗಿ ತಿಳಿಸಿದೆ.

Fact Check

ಈ ನಕಲಿ ಚಿತ್ರ ಈಗೇಕೆ ವೈರಲ್ ಆಗುತ್ತಿದೆ?

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಯನ್ನು ಬಲಪಡಿಸುವ ದೃಷ್ಟಿಯಿಂದ ಮತ್ತು ವಿದೇಶಿ ವಿನಿಮಯವನ್ನು ಉಳಿಸಲು, ಒಂದು ವರ್ಷಗಳ ಮಟ್ಟಿಗೆ ಅನಗತ್ಯ ಚಿನ್ನದ ಖರೀದಿಯನ್ನು ಮುಂದೂಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಪ್ರಧಾನಿ ಮೋದಿಯವರ ಈ ಹೇಳಿಕೆಯ ಬಳಿಕ, ಹಿಂದೊಮ್ಮೆ ಇಂದಿರಾ ಗಾಂಧಿಯವರು ಕೂಡ ಇದೇ ರೀತಿಯ ಮನವಿ ಮಾಡಿದ್ದರು ಎಂದು ಬಿಂಬಿಸಲು ಕೆಲವರು ಈ ನಕಲಿ ಪತ್ರಿಕಾ ತುಣುಕನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಹಿಂದೆ ಆಗಿದ್ದಾದರೂ ಏನು?

ವೈರಲ್ ಆಗಿರುವ ಪತ್ರಿಕೆಯ ಮುಖಪುಟ ನಕಲಿಯಾಗಿದ್ದರೂ, ಆ ಕಾಲಘಟ್ಟದಲ್ಲಿ ಭಾರತವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿತ್ತು ಎಂಬುದು ಸತ್ಯ. ಇಂದಿರಾ ಗಾಂಧಿಯವರ ಸರ್ಕಾರವು ಚಿನ್ನದ ಮೇಲೆ ಕಟ್ಟುನಿಟ್ಟಾದ ನಿಯಂತ್ರಣಗಳನ್ನು ಹೇರಿತ್ತು. ಜನಸಾಮಾನ್ಯರು ಚಿನ್ನದ ಗಟ್ಟಿಗಳು ಮತ್ತು ನಾಣ್ಯಗಳನ್ನು ಹೊಂದುವುದನ್ನು ನಿರ್ಬಂಧಿಸುವ ಉದ್ದೇಶದಿಂದ 1968 ರಲ್ಲಿ ಚಿನ್ನದ ನಿಯಂತ್ರಣ ಕಾಯ್ದೆಯನ್ನು (Gold Control Act) ಜಾರಿಗೆ ತರಲಾಗಿತ್ತು. ಆದರೆ, ವೈರಲ್ ಆಗಿರುವ ಚಿತ್ರದಲ್ಲಿರುವಂತೆ ಇಂದಿರಾ ಗಾಂಧಿಯವರು 'ರಾಷ್ಟ್ರೀಯ ಶಿಸ್ತು' ಎಂದು ಹೇಳಿ ಪತ್ರಿಕಾ ಹೇಳಿಕೆ ನೀಡಿದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ.

ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನು ಕುರುಡಾಗಿ ನಂಬಬಾರದು. ಯಾವುದೇ ಸುದ್ದಿಯನ್ನು ಫಾರ್ವರ್ಡ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ. ಈ ಫೋಟೋ ಕೇವಲ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ತಿರುಚಲಾದ ಸುಳ್ಳು ಸುದ್ದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+