• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲ್‌ಜೆಪಿ ಸಂಸದ ಪ್ರಿನ್ಸ್‌ ರಾಜ್ ಮೇಲೆ ಅತ್ಯಾಚಾರ ದೂರು ದಾಖಲು

|
Google Oneindia Kannada News

ನವದೆಹಲಿ, ಜೂನ್ 16: ಲೋಕ ಜನಶಕ್ತಿ ಪಕ್ಷದ (ಎಲ್‌ಪಿಜಿ) ನಾಯಕ ಚಿರಾಗ್ ಪಾಸ್ವಾನ್ ತನ್ನ ಸೋದರ ಸಂಬಂಧಿ ಪ್ರಿನ್ಸ್‌ ರಾಜ್‌ ಹೆಸರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಸ್ತಾಪಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಪ್ರಿನ್ಸ್‌ ರಾಜ್‌ ವಿರುದ್ಧ ಅತ್ಯಾಚಾರ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ.

ಮಹಿಳೆಯು ಮೂರು ಪುಟಗಳ ದೂರನ್ನು ಕನೌಟ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ದಾಖಲಿಸಿದ್ದು, ಮತ್ತು ಬರುವ ಔಷಧಿ ಹಾಕಿದ ಪಾನೀಯ ಕುಡಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿದರು ಎಂದು ಪ್ರಿನ್ಸ್‌ ರಾಜ್ ವಿರುದ್ಧ ದೂರು ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಬಿಕ್ಕಟ್ಟು: ಲೋಕ ಜನಶಕ್ತಿ ಪಕ್ಷದಲ್ಲಿ ಮಗನ ವಿರುದ್ಧವೇ ಚಿಕ್ಕಪ್ಪನ ದಂಗೆಬಿಹಾರದಲ್ಲಿ ಬಿಕ್ಕಟ್ಟು: ಲೋಕ ಜನಶಕ್ತಿ ಪಕ್ಷದಲ್ಲಿ ಮಗನ ವಿರುದ್ಧವೇ ಚಿಕ್ಕಪ್ಪನ ದಂಗೆ

ಆದರೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಲೋಕಸಭಾ ಸಂಸದನ ವಿರುದ್ಧದ ಈ ಆರೋಪದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ನಂತರ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿದುಬಂದಿದೆ.

ಲೋಕಸಭೆಯಲ್ಲಿ ಲೋಕಜನಶಕ್ತಿ ಪಕ್ಷದ ನಾಯಕರನ್ನಾಗಿ ಪಶುಪತಿ ಕುಮಾರ್ ಪಾರಸ್ ಅವರನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಅಧಿಸೂಚನೆ ವಿರೋಧಿಸಿ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ತಮ್ಮ ವಿರುದ್ಧ ಆರೋಪ ಮಾಡಿರುವ ಐವರು ಸಂಸದರನ್ನು ಪಕ್ಷದಿಂದ ಹೊರ ಹಾಕಲು ನಿರ್ಧರಿಸಲಾಗಿದೆ. ತಾವು ಈ ಹಿಂದೆ ತೆಗೆದುಕೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಿ ನನ್ನನ್ನು ಲೋಕಸಭೆಯಲ್ಲಿ ಎಲ್‌ಜೆಪಿ ಪಕ್ಷದ ನಾಯಕನನ್ನಾಗಿ ನೇಮಿಸಿ ಸುತ್ತೋಲೆ ಹೊರಡಿಸಿ ಎಂದು ಒತ್ತಾಯಿಸಿದ್ದಾರೆ.

English summary
Woman files rape complaint against LJP MP Prince Raj in Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X