ಉಪರಾಷ್ಟ್ರಪತಿ ಚುನಾವಣೆ: ನಿತೀಶ್ ಬೆಂಬಲ ಯಾರಿಗೆ?
ನವದೆಹಲಿ, ಜುಲೈ 28: ಭಾರತದ ಉಪರಾಷ್ಟ್ರಪತಿ ಆಯ್ಕೆಗೆ ಆಗಸ್ಟ್ 5 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲ ಯಾರಿಗೆ ಎಂಬುದು ಇದೀಗ ಕುತೂಹಲದ ಪ್ರಶ್ನೆಯಾಗಿದೆ.
ಜುಲೈ 27 ರಂದು ಆರ್ ಜೆಡಿ ಜೊತೆ ಮೈತ್ರಿ ಮುರಿದುಕೊಂಡು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮಮೆ ನೀಡೀದ್ದ ನಿತೀಶ್ ಕುಮಾರ್, ಜುಲೈ 28 ರಂದು ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿಕೊಂಡು ಮತ್ತೆ ಬಿಹಾರದ ಮುಖ್ಯಮಂತ್ರಿಯಾದರು.

ಇದಕ್ಕೂ ಮುನ್ನ ತಮ್ಮ ಬೆಂಬಲ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರಿಗೆ ಎಂದಿದ್ದ ನಿತೀಶ್ ನಡೆಯಲ್ಲಿ ಇದೀಗ ಬದಲಾವಣೆಯಾಗಲಿದೆಯಾ? ಅವರು ಈ ಬದಲಾದ ಪರಿಸ್ಥಿತಿಯಲ್ಲಿ ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರನ್ನು ಬೆಂಬಲಿಸುತ್ತಾರಾ? ಎನ್ ಡಿಎಯ ಭಾಗವಾಗಿರುವುದರಿಂದ ನಾಯ್ಡು ಅವರಿಗೆ ಬೆಂಬಲ ನೀಡುವುದು ನಿತೀಶ್ ಅವರಿಗೆ ಅನಿವಾರ್ಯವೇ? ಈ ಕುರಿತು ಜೆಡಿಯು ನಿಲುವೇನು ಎಂಬುದು ಸದ್ಯದಲ್ಲೇ ತಿಳಿಯಲಿದೆ.












Click it and Unblock the Notifications