ಕಾಂಗ್ರೆಸ್ ಬಲಪಡಿಸಲು ಮತ್ತೆ ಅಖಾಡಕ್ಕೆ ಇಳಿದರು ಸೋನಿಯಾ ಗಾಂಧಿ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 11: ವಿದೇಶದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ತೆರಳಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂತಿರುಗಿದ್ದು, ಪಕ್ಷದ ವ್ಯವಹಾರಗಳ ಕಡೆಗೆ ಗಮನ ಹರಿಸಿದ್ದಾರೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಲಿರುವ ಅವರು, ಔತಣಕೂಟವೊಂದನ್ನು ಆಯೋಜಿಸಲಿದ್ದಾರೆ.

ಕಾಂಗ್ರೆಸ್ ಗೆ ಈಗ ಸಮರ್ಥ ಮಾರ್ಗದರ್ಶನದ ಅಗತ್ಯವಿದೆ. ಅದನ್ನು ನೀಡಲು ರಾಹುಲ್ ಗಾಂಧಿ ಅವರಿಗೆ ಸಾಧ್ಯವಾಗುತ್ತಿಲ್ಲ. ಈಗ ಜವಾಬ್ದಾರಿ ಮತ್ತೆ ಸೋನಿಯಾ ಗಾಂಧಿ ಅವರ ಹೆಗಲೇರಿದೆ. ಈಗಾಗಲೇ ರಣತಂತ್ರ ಹೆಣೆಯುವ ಭಾಗವಾಗಿ ಸೋನಿಯಾ ಅವರು ಹಲವು ಸಭೆಗಳನ್ನು ನಡೆಸಿದ್ದಾರೆ.[ಅನಾರೋಗ್ಯ ಪೀಡಿತ ಅಮ್ಮನಿಗಾಗಿ ರಾಹುಲ್ ವಿದೇಶಕ್ಕೆ]

With Congress in tatters, Sonia is back in action

ಆಗೆಲ್ಲ ಕೇಳಿಬಂದಿರುವುದು ಅವೇ ಒತ್ತಾಯ. ಉತ್ತರಾಖಂಡ ಹಾಗೂ ಉತ್ತರಪ್ರದೇಶದಲ್ಲಿ ಪಕ್ಷದ ಹೀನಾಯ ಸೋಲಿಗೆ ಕಾರಣರಾದವರು ಜವಾಬ್ದಾರಿ ಹೊರಬೇಕು. ಮತ್ತು ಮಣಿಪುರ ಹಾಗೂ ಗೋವಾದಲ್ಲಿ ಅಧಿಕಾರ ಹಿಡಿಯುವ ಅವಕಾಶ ಇದ್ದಾಗಲೂ ಕೈಚೆಲ್ಲಿದವರು ಅದರ ಹೊಣೆ ಹೊರಬೇಕು.

With Congress in tatters, Sonia is back in action

ಕಳೆದ ಪಂದು ವಾರದಿಂದ ಪಕ್ಷದ ಕಾರ್ಯಕರ್ತರ ಜತೆಗೆ ಸೋನಿಯಾ ಗಾಂಧಿ ಮಾತುಕತೆಯಲ್ಲಿ ತೊಡಗಿದ್ದಾರೆ. ಆ ಪೈಕಿ ಹಲವರು ಆಕೆಯ ನೇತೃತ್ವ ಹಾಗೂ ಸಕ್ರಿಯ ಪಾಳ್ಗೊಳ್ಳುವಿಕೆಗೆ ಒತ್ತಾಯಿಸಿದ್ದಾರೆ. ಪಕ್ಷದಲ್ಲಿ ಯಾವ ಬದಲಾವಣೆ ತರಬೇಕು ಎಂಬ ಬಗ್ಗೆ ಕಾಂಗ್ರೆಸ್ ಮುಖಂಡರ ಜತೆಗೆ ಸೋನಿಯಾ ಚರ್ಚೆ ನಡೆಸಿದ್ದಾರೆ.[ನಮಸ್ಕಾರ, ದಿಗ್ವಿಜಯ್ ಸಿಂಗ್ ಸರ್, ಹೋಗಿ ಬನ್ನಿ!]

With Congress in tatters, Sonia is back in action

ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆಯನ್ನು ತರಬಹುದು ಎಂಬ ನಿರೀಕ್ಷೆಯಿದೆ. ಹಲವು ಹಿರಿಯ ನಾಯಕರು ನಾಯತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷವನ್ನು ತೊರೆದಿದ್ದಾರೆ. ಇನ್ನೂ ಹೆಚ್ಚಿನ ಅನಾಹುತ ಆಗದಂತೆ ತಡೆಯಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ.

ಇನ್ನು ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪಕ್ಷವು ಯೋಜನೆ ರೂಪಿಸುತ್ತಿದೆ.

With Congress in tatters, Sonia is back in action

ಗುಜರಾತ್ ಹೊರತುಪಡಿಸಿ ಉಳಿದ ಎರಡು ಕಡೆ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದ್ದರಿಂದ ಆ ಎರಡೂ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡೀಯಲೇ ಬೇಕು ಗುರಿಯಲ್ಲಿ ತಂತ್ರ ಹೆಣೆಯಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sonia Gandhi who returned from abroad following medical treatment is back in action. She will chair a meeting of the Congress leaders ahead of the budget session and also host a dinner. The Congress is in desperate need for guidance and with Rahul Gandhi unable to provide that, the mantle has fallen on Sonia.
Please Wait while comments are loading...