ರಾಹುಲ್ ಗಾಂಧಿ ಮೇಲೆ ಕೇಂದ್ರ ಬೇಹುಗಾರಿಕೆ ಮಾಡ್ತಿದೆಯಾ?

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 08 : ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿದ್ದಾಗ ರಕ್ಷಣಾ ಸಿಬ್ಬಂದಿಯನ್ನು ಏಕೆ ಕರೆದುಕೊಂಡು ಹೋಗಿರಲಿಲ್ಲ. ಅಸಲಿಗೆ ಅವರು ಹೋಗಿದ್ದಾದರೂ ಎಲ್ಲಿಗೆ? ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ಮಂಗಳವಾರ ಕೇಳಿರುವುದು ಕಾಂಗ್ರೆಸ್ ಪಕ್ಷಯ ಕಣ್ಣು ಕೆಂಪಾಗುವಂತೆ ಮಾಡಿದೆ.

ರಾಹುಲ್ ಪರ ರಮ್ಯಾ ಟ್ವೀಟ್: ಅಣಕಿಸಿದ ಟ್ವಿಟ್ಟಿಗರು!

ರಾಹುಲ್ ಅವರು ಕಳೆದ ಎರಡು ವರ್ಷಗಳಲ್ಲಿ 6 ಬಾರಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಅವರು 72 ದಿನಗಳ ಕಾಲ ವಿದೇಶದಲ್ಲಿ ವಿಹರಿಸಿದ್ದಾರೆ. ಅಲ್ಲಿಗೆ ಹೋದಾಗ ಅವರು ಸ್ಪೆಷಲ್ ಪ್ರೊಕೆಕ್ಷನ್ ಗ್ರೂಪ್ ರಕ್ಷಣೆ ಪಡೆದಿರಲಿಲ್ಲ ಎಂದು ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.

Why didn’t Rahul Gandhi take SPG cover on several foreign trip: Rajnath

ರಾಜನಾಥ್ ಅವರ ಈ ವಾದ ಕಾಂಗ್ರೆಸ್ ಸಂಸದರನ್ನು ಕೆರಳಿಸಿದೆ. ಕೇಂದ್ರ ಸರಕಾರಕ್ಕೆ, ರಾಹುಲ್ ಎಲ್ಲಿ ಹೋಗುತ್ತಾರೆ, ಯಾರೊಂದಿಗೆ ಏನು ಮಾಡುತ್ತಾರೆ, ಎಷ್ಟು ದಿನ ಕಳೆಯುತ್ತಾರೆ... ಇದೆಲ್ಲ ಏಕೆ ಬೇಕು. ಕೇಂದ್ರ ಸರಕಾರ ರಾಹುಲ್ ಗಾಂಧಿಯ ವಿರುದ್ಧ ಬೇಹುಗಾರಿಕೆ ನಡೆಸಿದೆಯಾ ಎಂದು ಕೆಲವೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಅವರು ಗುಜರಾತ್‌ನ ಬನಷ್ಕಂಟಕ್ಕೆ ಪ್ರವಾಹ ಪೀಡಿತರನ್ನು ಭೇಟಿಯಾಗಲು ಹೋಗಿದ್ದಾಗ ಅವರಿದ್ದ ಕಾರಿಗೆ ದುರುಳರು ಕಲ್ಲನ್ನು ಎಸೆದು, ಕಾರಿನ ಗಾಜನ್ನು ಪುಡಿಪುಡಿ ಮಾಡಿದ್ದರು. ಈ ಘಟನೆ ಕಾಂಗ್ರೆಸ್ಸಿಗರಿಂದ ತೀವ್ರ ಟೀಕೆಗೆ ಒಳಗಾಗಿತ್ತು. ರಾಹುಲ್ ಅಂಥವರಿಗೆ ರಕ್ಷಣೆ ನೀಡುವುದು ಸ್ಥಳೀಯ ಬಿಜೆಪಿ ಸರಕಾರದ ಕರ್ತವ್ಯ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ಈಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ: ಜೈರಾಂ ರಮೇಶ್

ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಅವರಿಗೆ ಭದ್ರತೆ ನೀಡಲು ವಿನಯ್ ರೂಪಾನಿ ಅವರು ಸಂಪೂರ್ಣ ವಿಫಲವಾಗಿದ್ದಾರೆ. ಗುಜರಾತ್‌ಗೆ ಭಯೋತ್ಪಾದಕರು ಎಲ್ಲಿಂದ ಬಂದರು. ಅವರು ರಾಹುಲ್ ಅವರು ಜೀವ ತೆಗೆಯಲು ಯತ್ನಿಸಿದರು ಎಂದು ವಾಗ್ದಾಳಿ ನಡೆಸಿದರು.

Rahul Gandhi decides to protest against IT Department | Oneindia Kannada

ಇದಕ್ಕೆ ಪ್ರತ್ಯುತ್ತರ ನೀಡಿರುವ ರಾಜನಾಥ್ ಸಿಂಗ್ ಅವರು, ರಾಹುಲ್ ಅವರಿಗೆ ಎಸ್ಪಿಜಿ ಭದ್ರತೆ ನೀಡಲಾಗಿದೆ. ಅವರು ಗುಂಡು ವಿರೋಧಿ ಕಾರನ್ನು ನೀಡಲಾಗಿದೆ. ಆದರೂ ಅವರು ಬುಲೆಟ್ ಪ್ರೂಫ್ ಕಾರನ್ನು ಬಳಸಿದ್ಯಾಕೆ? ಇದನ್ನೆಲ್ಲ ನಿರ್ಲಕ್ಷಿಸಿ ಅಡ್ಡಾಡುತ್ತಿರುವುದು ಅವರ ತಪ್ಪಲ್ಲವೆ ಎಂದು ಮರುಪ್ರಶ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why didn’t Rahul Gandhi take SPG cover on several foreign trip : Rajnath Singh questions Congress party. He was replying to Mallikarjun Kharge's statement that Gujarat govt didn't give him security when he was in Gujarat, where stones pelted on him.
Please Wait while comments are loading...