ಇಷ್ಟಕ್ಕೂ ರಾಹುಲ್ ಸಂದರ್ಶನ ಫಿಕ್ಸ್ ಮಾಡಿದ್ದು ಯಾರು?
ನವದೆಹಲಿ,
ಜ. 30- ಸಂಸದರಾಗಿ 10 ವರ್ಷಗಳಾದ ನಂತರ ಮೊದಲ ಬಾರಿಗೆ ಟಿವಿ ಮಾಧ್ಯಮಕ್ಕೆ ರಾಹುಲ್ ಗಾಂಧಿ ನೀಡಿದ ಸಂದರ್ಶನ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದು ಸದ್ಯಕ್ಕೆ ಮುಗಿಯುವ ಹಾಗೂ ಕಾಣುತ್ತಿಲ್ಲ. id="toptextpromo"> id='are-slot-1' class='oiad oi-axt oiadv'>ರಾಹುಲ್
ಸಂದರ್ಶನ ಮಾಡಿದ 'ಟೈಮ್ಸ್ ನೌ' ವಾಹಿನಿಯ ಸಂಪಾದಕ ಆರ್ನಬ್ ಗೋಸ್ವಾಮಿ ಈ 10 ವರ್ಷ ಕಾಲ ಕಾದಿದ್ದಕ್ಕೂ ಸಾರ್ಥಕವಾಯ್ತು. ರಾಹುಲ್ ಗಾಂಧಿಯನ್ನು ಸರಿಯಾಗಿ ಬಲೆಗೆ ಕೆಡವಿದ್ದಾರೆ. ಸಂದರ್ಶನ ಮುಗಿಸಿ, ಅದು ಹುಟ್ಟುಹಾಕಿರುವ ವ್ಯಾಪಕ ಚರ್ಚೆ/ ಟೀಕೆಗಳನ್ನು ಆರ್ನಬ್ ಗೋಸ್ವಾಮಿ ಆಸ್ವಾದಿಸುತ್ತಿರಬಹುದು ಎಂದು ಮಾಧ್ಯಮದ ಜನ ಮಾತನಾಡಿಕೊಳ್ಳುವಂತಾಗಿದೆ.id='are-slot-2' class='oiad oi-axt oiadv'>

ರಾಹುಲ್ ಸಂದರ್ಶನ 'ಬಾಯ್ಬಿಟ್ಟರೆ ಬಣ್ಣಗೇಡು' ಎಂಬಂತಾಗಿದೆ
ಆದರೆ 'ಬಾಯ್ಬಿಟ್ಟರೆ ಬಣ್ಣಗೇಡು' ಎಂಬಂತಾಗಿದೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪರಿಸ್ಥಿತಿ. ಇಷ್ಟಕ್ಕೂ ರಾಹುಲ್ ಗಾಂಧಿ ಸಂದರ್ಶನ ಫಿಕ್ಸ್ ಮಾಡಿದ್ದು ಯಾರು? ಪಕ್ಷಕ್ಕೆ ಇದರಿಂದ ಆಗಿರುವ ಡ್ಯಾಮೇಜಿಗೆ ಹೊಣೆಯಾರು? ಎಂದು ಕೇಳುವಂತಾಗಿದೆ. ಪಕ್ಷದ ಕಾರ್ಯಕರ್ತರಂತೂ ತಮ್ಮ ನಾಯಕನ ಮಾತುಗಳನ್ನು ಕೇಳಿ ನಿರಾಸೆಗೊಂಡಿದ್ದಾರೆ. ಇದರಿಂದ ಚುನಾವಣೆ ಸಂದರ್ಭದಲ್ಲಿ ಪಕ್ಷ ನಿಸ್ತೇಜಗೊಂಡಂತಾಗಿದೆ.

'ಬೊಂಬಾಯಿ' ಆರ್ನಬ್ ಗೋಸ್ವಾಮಿ ಜತೆ ಮುಖಾಮುಖಿ
ಅಸಲಿಗೆ ಯಾರು ರಾಹುಲ್ ಗಾಂಧಿ ಸಂದರ್ಶನಕ್ಕೆ ಒಪ್ಪಿಗೆ ಸೂಚಿಸಿದ್ದು ಎಂಬುದರತ್ತಲೇ ಪ್ರಶ್ನೆಗಳು ಕಾಡತೊಡಗಿವೆ. ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗವಂತೂ ಸಂದರ್ಶನವನ್ನು ತಾನು ನಿಗದಿಪಡಿಸಿಲ್ಲ ಎಂದು ಕೈತೊಳೆದುಕೊಂಡಿದೆ. ಟಿವಿ ಮಾಧ್ಯಮದಲ್ಲಿ 'ಬೊಂಬಾಯಿ' ಎಂದೇ ಖ್ಯಾತರಾದ ಆರ್ನಬ್ ಗೋಸ್ವಾಮಿ ಜತೆ ಮುಖಾಮುಖಿ ಸಂದರ್ಶನಕ್ಕೆ ಅನುವು ಮಾಡಿಕೊಟ್ಟವರಾರು/ ಗ್ರೀನ್ ಸಿಗ್ನಲ್ ಕೊಟ್ಟವರು ಯಾರು? ಎಂಬುದರ ಸುತ್ತ ಪಕ್ಷ ಗಿರಕಿ ಹೊಡೆಯುತ್ತಿದೆ.

ಆಪ್ತ ವಲಯ ಮತ್ತು ಅವರ ಪಿಆರ್ ಸಂಸ್ಥೆ ಹೊಣೆ
ಪಕ್ಷದ ಮಾಧ್ಯಮ ವಿಭಾಗ ಸಂದರ್ಶನ ಆಯೋಜಿಸಿರಲಿಲ್ಲ ಎಂದಾದ ಮೇಲೆ ಮತ್ಯಾರು ಎಂದು ಕೆದಕಿದಾಗ ರಾಹುಲ್ ಗಾಂಧಿಯವರ ಆಪ್ತ ವಲಯ ಮತ್ತು ಅವರ ಪಿಆರ್ ಸಂಸ್ಥೆ Genesis Burson-Marsteller and IPAN (Hill and Knowlton) ನತ್ತ ದೃಷ್ಟಿ ಹಾಯಿಸಲಾಗಿದೆ.

ರಾಹುಲ್ ಸಂದರ್ಶನ ಪಕ್ಷದ ವರ್ಚಸ್ಸಿಗೆ ಧಕ್ಕೆ
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಮತ್ತು ಚುನಾವಣಾ ಪ್ರಚಾರದ ಸಾರಥಿಯಾಗಿ ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ಹೆಚ್ಚಿಸುವ ಹೊಣೆಗಾರಿಕೆಯನ್ನು ರಾಹುಲ್ ಗಾಂಧಿ ಅವರಿಗೆ ವಹಿಸಲಾಗಿದೆ. ಆದರೆ ಸಂದರ್ಶನಕ್ಕೆ ಮುನ್ನ ಕೆಲವು ವಿವಾದಿತ ವಿಷಯಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಒದಗಿಸಬೇಕಾಗಿತ್ತು. ಆ ತಿಳವಳಿಕೆ ಇಲ್ಲದೆ ರಾಹುಲ್ ಗಾಂಧಿ ಪಕ್ಷದ ವರ್ಚಸ್ಸಿಗೆ ಧಕ್ಕೆಯೊದಗುವಂತೆ ಓತಪ್ರೋತವಾಗಿ ಮಾತನಾಡಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.

ಕಿರಿಯ ಸಂಸದರೇ ರಾಹುಲ್ ಗಿಂತ ಎಷ್ಟೋ ವಾಸಿ
ಪಕ್ಷದಲ್ಲಿ ಅವರಿಗಿಂತ ಕಿರಿಯರಾಗಿರುವ, ರಾಜಮನತೆನದಿಂದ ಬಂದಂತಹ ಅನೇಕ ಕಿರಿಯ ಸಂಸದರು ಇದ್ದಾರೆ, ಅವರು ರಾಹುಲ್ ಗಾಂಧಿಗಿಂತ ಎಷ್ಟೋ ವಾಸಿ. ರಾಹುಲರಿಗಿಂತ ಉತ್ತಮ ಸಂದರ್ಶನ ನೀಡುತ್ತಿದ್ದರು; ಪಕ್ಷದ ವರ್ಚಸ್ಸೂ ಸುಧಾರಿಸುತ್ತಿತ್ತು ಎಂದು ಪಕ್ಷದ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.

ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ
ಡ್ಯಾಮೇಜ್ ಕಂಟ್ರೋಲ್ ಪ್ರಯತ್ನವಾಗಿ ಅಭಿಷೇಕ್ ಸಾಂಘ್ವಿ ಮತ್ತು ಆರ್ ಎಸ್ ಸುರ್ಜೇವಾಲಾ ಅವರು ರಾಹುಲ್ ಎಲ್ಲೆಲ್ಲಿ ತಪ್ಪು ಸಂದೇಶ ರವಾನಿಸಿದ್ದಾರೋ ಅಲ್ಲೆಲ್ಲಾ ವಸ್ತುಸ್ಥಿತಿಯನ್ನು ನೀಡಲು ಹವಣಿಸುತ್ತಿದ್ದಾರೆ.

ಇಷ್ಟಕ್ಕೂ ರಾಹುಲ್ ಸಂದರ್ಶನ ನಡೆದಿದ್ದೆಲ್ಲಿ?
Rajiv Gandhi Foundationಗೆ ಸೇರಿದ ಜವಾಹರ್ ಭವನದಲ್ಲಿ ಶನಿವಾರ ರೆಕಾರ್ಡ್ ಆಗಿತ್ತು. ಕೇಂದ್ರ ಸಚಿವರಾದ ಜೈರಾಮ್ ರಮೇಶ್ ಮತ್ತು ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂದರ್ಶನದ ವೇಳೆ ಉಪಸ್ಥಿತರಿದ್ದು, ಮಧ್ಯೆ ಮಧ್ಯೆ ರಾಹುಲ್ ಗಾಂಧಿಗೆ ಮಾಹಿತಿ ನೀಡುತ್ತಾ, ಹುರಿದುಂಬಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆದಾಗ್ಯೂ ಕಾಂಗ್ರೆಸ್ ಮುಖಂಡರಿಂದ ಮೆಚ್ಚುಗೆ
ಆದಾಗ್ಯೂ ದಿಲ್ಲಿಯ ಕಾಂಗ್ರೆಸ್ ಮುಖಂಡರು ಸಂದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಂದರ್ಶನಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದೆ. ರಾಹುಲ್ ಅವರು ತಮ್ಮ ಸ್ಪಷ್ಟ ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ. ತಮ್ಮತ್ತ ತೂರಿಬಂದ ಕಠಿಣ ಪ್ರಶ್ನೆಗಳಿಗೆ ರಾಹುಲ್ ತಕ್ಕ ಉತ್ತರ ನೀಡಿದ್ದು, ಪಲಾಯನವಾದ ಮಾಡಿಲ್ಲ ಎಂದು ಸಂತೋಷಗೊಂಡಿದ್ದಾರೆ.












Click it and Unblock the Notifications