ರಾಹುಲ್ ಬಳಿ ಸಿದ್ದು ಬಗ್ಗೆ ದೂರು ನೀಡಿದರಾ ಕುಮಾರಸ್ವಾಮಿ?
ನವದೆಹಲಿ, ಆಗಸ್ಟ್ 30: 'ರಾಹುಲ್ ಗಾಂಧಿ ಅವರ ಬಳಿ ಸಿದ್ದರಾಮಯ್ಯ ಅವರ ಬಗ್ಗೆ ದೂರು ಹೇಳಿದ್ದೀರಾ?' ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಎಚ್ ಡಿ ಕುಮಾರಸ್ವಾಮಿ ಏನಂದ್ರು?
ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ಭೇಟಿಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, 'ಇದೊಂದು ಸೌಹಾರ್ದ ಭೇಟಿಯಷ್ಟೆ. ಸರ್ಕಾರಕ್ಕೆ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನಾನು ಅವರನ್ನು(ರಾಹುಲ್ ಗಾಂಧಿ) ಭೇಟಿ ಮಾಡಿದ್ದೇನೆ. ಯಾರ ಮೇಲೂ ದೂರು ನೀಡಿಲ್ಲ' ಎಂದರು.

ಕುಮಾರಸ್ವಾಮಿ ದೆಹಲಿ ಭೇಟಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 'ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ' ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಿಂದ ಕೊಂಚ ಇರಿಸುಮುರಿಸು ಅನುಭವಿಸಿದ್ದ ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರ ಬಳಿ ಸಿದ್ದರಾಮಯ್ಯ ಅವರ ಕುರಿತು ದೂರು ನೀಡಬಹುದು ಎನ್ನಲಾಗಿತ್ತು.












Click it and Unblock the Notifications