• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆ ಕ್ಯಾಂಟೀನ್ ಊಟ ಮಾಡಿದ ಮೋದಿ

By Mahesh
|
Google Oneindia Kannada News

ನವದೆಹಲಿ, ಮಾ.2: ಸಂಸತ್ತಿನ ಕ್ಯಾಂಟೀನ್ ನಲ್ಲಿ ಸೋಮವಾರ ಮಧ್ಯಾಹ್ನ ಅಚ್ಚರಿ ಕಾದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಕ್ಯಾಂಟೀನಲ್ಲಿ ತಮ್ಮ ಸಹದ್ಯೋಗಿಗಳ ಜೊತೆ ಮಧ್ಯಾಹ್ನ ಊಟ ಮಾಡಿ 'ಅನ್ನದಾತ ಸುಖಿ ಭವ' ಎಂದು ಹರಿಸಿ ಬಂದಿದ್ದಾರೆ.

ಅಚ್ಚರಿಯ ನಡೆ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುವುದರಲ್ಲಿ ಎತ್ತಿದ ಕೈ ಎನಿಸಿರುವ ಮೋದಿ ಅವರು ಸೋಮವಾರ ಸಂಸತ್ತಿನ ಕ್ಯಾಂಟಿಗೆ ಬಂದಿದ್ದು ಅಲ್ಲಿನ ಸಿಬ್ಬಂದಿಗೆ ಹಬ್ಬದ ವಾತಾವರಣ ತಂದಿತ್ತು.

ಅದರೆ, ಮೋದಿ ಅವರು ಹಠಾತ್ತಾಗಿ ಕ್ಯಾಂಟೀನ್ ಗೆ ಬಂದಿದ್ದರಿಂದ ಹೆಚ್ಚಿನ ವಿಶೇಷ ಭಕ್ಷ್ಯಗಳಿಲ್ಲದೆ ಅವರು ಆರ್ಡರ್ ಮಾಡಿದ 'ವೆಜ್ ತಾಲಿ' ಊಟವನ್ನು ಕ್ಯಾಂಟೀನ್ ಸಿಬ್ಬಂದಿ ಬಡಿಸಿದರು. ಪ್ರಧಾನಿ ಮೋದಿ ಅವರ ಜೊತೆಗೆ ಸುಮಾರು 25-30 ಸಂಸದರು ಕ್ಯಾಂಟೀನ್ ಗೆ ಬಂದಿದ್ದರು.

ರೂಮ್ ನಂ.70: ಮೋದಿ ಅವರು ಸಂಸತ್ತಿನ ಕ್ಯಾಂಟೀನ್ ನ ಮೊದಲ ಮಹಡಿಯಲ್ಲಿರುವ ರೂಮ್ 70ನಲ್ಲಿ ಊಟ ಸೇವಿಸಿದ್ದಾರೆ. ಮೋದಿ ಅವರ ತಟ್ಟೆಯಲ್ಲಿ ಸಾಗು, ಆಲೂ ಭಜ್ಜಿ, ಅನ್ನ, ತರಕಾರಿ ಸಾಂಬಾರು, ರೋಟಿ, ಮೊಸರು, ಸೊಪ್ಪಿನ ಪಲ್ಯ, ಸಲಾಡ್, ಧಾನ್ಯಗಳ ಪಲ್ಯ..ಇತ್ಯಾದಿ ಇತ್ತು.

ಊಟ ಮಾಡಿ ಕೈ ಒರೆಸಿಕೊಂಡ ಮೋದಿ ಅವರು 29 ರು ಪಾವತಿಸಿ ಸಂದರ್ಶಕರ ಪುಸ್ತಕದಲ್ಲಿ 'ಅನ್ನದಾತ' ನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಂತರ ಇತರೆ ಸಂಸದರೊಂದಿಗೆ ಕೆಲ ಕಾಲ ಚರ್ಚಿಸುತ್ತಾ ಸದನದತ್ತ ತೆರಳಿದರು.

ಒನ್ ಇಂಡಿಯಾ ಸುದ್ದಿ

English summary
Prime Minister Narendra Modi is known for doing things which at times surprises everyone. In a similar move, PM Modi on Monday made a sudden visit to the Parliament's canteen and surprised everyone including the canteen staff. Had his lunch (Thali Meal) Rs 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X