ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Whatsapp ಸೆಂಟ್ ಮೆಸೇಜ್ ಡಿಲೀಟ್ ಮಾಡೋಕೆ 1 ಗಂಟೆ ಸಮಯ!

|
Google Oneindia Kannada News

ನವದೆಹಲಿ, ಮಾರ್ಚ್ 06: ಯಾರಿಗೋ ಕಳಿಸಬೇಕಾದ ಮೆಸೇಜ್ ಅನ್ನು ಇನ್ಯಾರಿಗೋ ಕಳಿಸಿ ನಮ್ಮ ಮೂರ್ಖತನಕ್ಕೆ ನಮ್ಮನ್ನೇ ಶಪಿಸಿಕೊಂಡ ಉದಾಹರಣೆಗಳು ಹಲವು. ಬಿಟ್ಟ ಬಾಣ, ಕಳಿಸಿದ ಮೆಸೇಜ್ ಅನ್ನು ವಾಪಸ್ ಪಡೆಯೋಕಾಗಲ್ಲ, ಆದದ್ದಾಯ್ತು ಎಂದುಕೊಂಡು ಸುಮ್ಮನಾಗುವ ಪರಿಸ್ಥಿತಿ ಈಗಿಲ್ಲ.

ಯಾಕಂದ್ರೆ ಬಹುಕೋಟಿ ಜನರ ನೆಚ್ಚಿನ ಮೆಸೆಂಜರ್ app ಆದ whatsapp ಕಳಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡುವ ಅವಕಾಶವನ್ನು ಈಗಾಗಲೇ ನೀಡಿದೆ.

ಜೋಕೆ, ಒಂದು whatsapp ಮೆಸೇಜ್ ನಿಮ್ಮನ್ನು ಜೈಲಿಗೆ ತಳ್ಳಬಹುದು!ಜೋಕೆ, ಒಂದು whatsapp ಮೆಸೇಜ್ ನಿಮ್ಮನ್ನು ಜೈಲಿಗೆ ತಳ್ಳಬಹುದು!

ಇಷ್ಟು ದಿನ ನಾವು ಕಳಿಸಿದ ಯಾವುದೇ ಮೆಸೇಜ್ ಅನ್ನು ಕಳಿಸಿದ 420 ಸೆಕೆಂಡ್ ಗಳಲ್ಲಿ ಅಂದರೆ 7 ನಿಮಿಷಗಳೊಳಗೆ ಡಿಲೀಟ್ ಮಾಡಬಹುದಾದ 'Delete for Everyone' ಆಯ್ಕೆಯನ್ನು whatsapp ನೀಡಿತ್ತು. ಆದರೆ ಇದೀಗ ಈ ಅವಧಿಯನ್ನು ಮತ್ತಷ್ತು ವಿಸ್ತರಿಸಿದೆ.

Whatsapp users can delete their sent message after an hour!

ಇನ್ನು ಮೇಲೆ 4096 ಸೆಕೆಂಡ್ ಅಂದರೆ 68 ನಿಮಿಷ, 16 ಸೆಕೆಂಡ್ (1 ಗಂಟೆ 8 ನಿಮಿಷ 16 ಸೆಕೆಂಡ್) ಗಳೊಳಗೆ ನೀವು ಕಳಿಸಿದ ಮೆಸೇಜ್ ಅನ್ನು 'ಡಿಲೀಟ್' ಮಾಡಬಹುದು.

ಸದ್ಯಕ್ಕೆ ಈ ಆಯ್ಕೆಯನ್ನು whatsapp Android beta version 2.18.69 ಗೆ ಮಾತ್ರ ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್ ಗಳಿಗೂ ಲಭ್ಯವಾಗಲಿದೆ.

ಅನುಚಿತ ಎಂಓಜಿ ಅಳವಡಿಕೆ ಆರೋಪ: ವಾಟ್ಸಾಪ್ ಗೆ ಲೀಗಲ್ ನೋಟಿಸ್ಅನುಚಿತ ಎಂಓಜಿ ಅಳವಡಿಕೆ ಆರೋಪ: ವಾಟ್ಸಾಪ್ ಗೆ ಲೀಗಲ್ ನೋಟಿಸ್

English summary
WhatsApp Messenger has updated its ‘Delete for Everyone’ feature. As of new feature user can delete his or her sent message after an hour! User can delete sent message within 4096 seconds or 68 minutes and 16 seconds as compared to its earlier deadline of 420 seconds or seven minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X