ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೋಕ್ ವರ್ಮಾರನ್ನು ಅಮಾನತು ಮಾಡಿಲ್ಲ, ವಜಾನೂ ಮಾಡಿಲ್ಲ!

|
Google Oneindia Kannada News

ನವದೆಹಲಿ, ಜನವರಿ 11 : ಇಡೀ ದೇಶದ ಸುದ್ದಿ ಕೇಂದ್ರಬಿಂದುವಾಗಿರುವ, ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಸಿಬಿಐನ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಅಮಾನತು ಮಾಡಲಾಗಿಲ್ಲ, ವಜಾ ಕೂಡ ಮಾಡಲಾಗಿಲ್ಲ. ಅವರನ್ನು ವರ್ಗಾವಣೆ ಮಾಡಲಾಗಿದೆಯಷ್ಟೇ.

ಆದರೆ, ಎಲ್ಲೆಡೆ ಅಲೋಕ್ ಕುಮಾರ್ ಅವರನ್ನು ಅನೈತಿಕವಾಗಿ ವಜಾ ಮಾಡಲಾಗಿದೆ, ಅವರನ್ನು ಅವರಿದ್ದ ಹುದ್ದೆಯಿಂದ ಕಿತ್ತು ಬಿಸಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ವಸ್ತುಸ್ಥಿತಿಯೇನು? ಆಯ್ಕೆ ಸಮಿತಿಯಲ್ಲಿ ನ್ಯಾಯಮೂರ್ತಿ ಸಿಕ್ರಿ ಅವರಿಂದ ಏನು ಅಭಿಪ್ರಾಯ ಬಂದಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮಾರ್ಕಡೇಯ್ ಕಾಟ್ಜು ಅವರು ವಿವರಿಸಿದ್ದಾರೆ.

ಭಾರೀ ಚರ್ಚೆಗೊಳಗಾಗಿರುವ ಮತ್ತು ಆಕ್ರೋಶಕ್ಕೂ ಒಳಗಾಗಿರುವ ಈ ಹೈ ಪ್ರೊಫೈಲ್ ಪ್ರಕರಣದ ಬಗ್ಗೆ, ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಲ್ಲಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರೊಂದಿಗೆ, ಈ ವಿವಾದದ ಬಗ್ಗೆ ಮಾತನಾಡಿದ್ದು, ಅವರ ಅನುಮತಿಯನ್ನು ತೆಗೆದುಕೊಂಡೇ ಸ್ಪಷ್ಟನೆ ನೀಡಿರುವ ಬಗ್ಗೆ ಪ್ರಕಟಿಸಿದ್ದೇನೆ ಎಂದು ಮಾರ್ಕಡೇಯ್ ಕಾಟ್ಜು ಅವರು ಟ್ವೀಟ್ ಮಾಡಿದ್ದಾರೆ.

ಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾ ಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾ

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗೊಗೊಯ್ ಅವರು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಅವರಿಗೆ ಸ್ಥಾನ ದೊರಕಿಸಿಕೊಟ್ಟ 24 ಗಂಟೆಗಳೊಳಗೆ, ನರೇಂದ್ರ ಮೋದಿ, ನ್ಯಾಯಮೂರ್ತಿ ಸಿಕ್ರಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಸಮಿತಿ, 2-1ರ ಬಹುಮತದೊಂದಿಗೆ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿದೆ.

ಕಾಟ್ಜು ಅವರೊಂದಿಗೆ ಸಿಕ್ರಿ ಆಡಿರುವ ಮಾತುಗಳೇನು? ಸಿಕ್ರಿ ಅವರು ಏನು ಸಮಜಾಯಿಷಿ ಕೊಟ್ಟಿದ್ದಾರೆ? ತೀರ್ಮಾನಕ್ಕೆ ಬರುವ ಮೊದಲು ಯಾಕೆ ಅಲೋಕ್ ವರ್ಮಾ ಅವರಿಗೆ ವಿಚಾರಣೆಗೊಳಪಡುವ ಅವಕಾಶ ನೀಡಲಿಲ್ಲ? ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ತೊಲಗಿಸಿ ಬೇರೆ ತತ್ಸಮಾನ ಹುದ್ದೆ ನೀಡಿದ್ದು ನ್ಯಾಯಯುತವೆ? ಇತ್ಯಾದಿ ಚರ್ಚೆ ನಡೆಯಲಿ. ಸಿಕ್ರಿ ಅವರು ಏನು ವಿವರಣೆ ಕೊಟ್ಟಿದ್ದಾರೆ ಎಂಬುದು ಕೆಳಗಿನಂತಿದೆ.

ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿತ್ತು

ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿತ್ತು

ಕೇಂದ್ರ ಜಾಗೃತ ಆಯೋಗ (ಸಿವಿಸಿ) ತನಗೆ ಸಿಕ್ಕ ದಾಖಲಾತಿಗಳ ಆಧಾರದ ಮೇಲೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಲೋಕ್ ವರ್ಮಾ ಅವರ ವಿರುದ್ಧ ಕೆಲ ಗಂಭೀರ ಆರೋಪಗಳಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ದಾಖಲಿಸಿತ್ತು. (ಇದಕ್ಕೂ ಮೊದಲು ಕೇಂದ್ರ ಜಾಗೃತ ಆಯೋಗ ನೀಡಿದ ವರದಿಯ ಆಧಾರದ ಮೇಲೆ ಅಲೋಕ್ ವರ್ಮಾ ಅವರನ್ನು ಬಲವಂತದ ರಜಾ ಮೇಲೆ ಕಳಿಸಲಾಗಿತ್ತು.)

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ... ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ...

ವಿವರಣೆ ನೀಡಲು ಅವಕಾಶ ನೀಡಿತ್ತು

ವಿವರಣೆ ನೀಡಲು ಅವಕಾಶ ನೀಡಿತ್ತು

ಆದರೆ, ಅಲೋಕ್ ವರ್ಮಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ನಂತರ, ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ದಾಖಲಿಸುವ ಮೊದಲು ಅಲೋಕ್ ವರ್ಮಾ ಅವರ ವಾದವನ್ನು ಆಲಿಸಿತ್ತು ಮತ್ತು ವಿವರಣೆ ನೀಡಲು ಸಾಕಷ್ಟು ಸಮಯಾವಕಾಶವನ್ನೂ ನೀಡಿತ್ತು.

ಭ್ರಷ್ಟಾಚಾರ ಸಾಬೀತು: ಸಿಬಿಐ ಸ್ಥಾನದಿಂದ ಅಲೋಕ್ ವರ್ಮಾ ವಜಾ ಭ್ರಷ್ಟಾಚಾರ ಸಾಬೀತು: ಸಿಬಿಐ ಸ್ಥಾನದಿಂದ ಅಲೋಕ್ ವರ್ಮಾ ವಜಾ

ತೀರ್ಪು ಬರುವವರೆಗೆ ಹುದ್ದೆಯಲ್ಲಿ ಇರಬಾರದು

ತೀರ್ಪು ಬರುವವರೆಗೆ ಹುದ್ದೆಯಲ್ಲಿ ಇರಬಾರದು

ದಕ್ಕಿರುವ ದಾಖಲಾತಿಗಳನ್ನು ಪರಿಶೀಲಿಸಿದ ನಂತರ, ಅವುಗಳ ಆಧಾರದ ಮೇಲೆ ಮೇಲ್ನೋಟಕ್ಕೆ ಅಲೋಕ್ ವರ್ಮಾ ಅವರ ವಿರುದ್ಧದ ಭ್ರಷ್ಟಾಚಾರದ ಕೆಲ ಗುರುತರ ಆರೋಪಗಳು ಸಾಬೀತಾಗಿರುವುದರಿಂದ ಸಂಪೂರ್ಣ ತನಿಖೆ ನಡೆದು ಅಂತಿಮ ತೀರ್ಪು ಬರುವವರೆಗೆ ಅಲೋಕ್ ವರ್ಮಾ ಅವರು ನಿರ್ದೇಶಕ ಸ್ಥಾನದಲ್ಲಿ ಇರಬಾರದು ಎಂಬುದು ಸಿಕ್ರಿ ಅವರ ಅಭಿಪ್ರಾಯ. ಬದಲಾಗಿ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂಬುದು ಅವರ ನಿಲುವು.

ನಿಷ್ಠರ ವರ್ಗಾವಣೆ ರದ್ದುಗೊಳಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ನಿಷ್ಠರ ವರ್ಗಾವಣೆ ರದ್ದುಗೊಳಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ

ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ

ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ

ಅಲೋಕ್ ವರ್ಮಾ ಅವರನ್ನು, ಕೆಲವರು ಹೇಳುತ್ತಿರುವಂತೆ ಮತ್ತು ಗ್ರಹಿಸಿರುವಂತೆ ಸೇವೆಯಿಂದ ತೆಗೆದುಹಾಕಿಲ್ಲ. ಅವರನ್ನು ಕೆಲಸದಿಂದ ಅಮಾನತೂ ಮಾಡಿಲ್ಲ, ಆದರೆ ತತ್ಸಮಾನ ಸಂಬಳ ಮತ್ತು ಇತರ ಸೌಲಭ್ಯಗಳಿರುವ ಮತ್ತೊಂದು ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. (ಆದರೆ, ಅವರನ್ನು ಅಮಾನತು ಮಾಡಲಾಗಿದೆ, ವಜಾ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವುದು ತಪ್ಪು ಎಂಬುದು ಸಿಕ್ರಿ ಅವರ ಅಭಿಪ್ರಾಯ.)

ಅಮಾನತಿನಲ್ಲಿಡಲು ಅವಕಾಶವಿದೆ

ಅಮಾನತಿನಲ್ಲಿಡಲು ಅವಕಾಶವಿದೆ

ಆಯ್ಕೆ ಸಮಿತಿಯ ಮುಂದೆ ವಿಚಾರಣೆಗೆ ಬರಲು ಅಲೋಕ್ ವರ್ಮಾ ಅವರಿಗೆ ಅವಕಾಶ ನೀಡಲಾಗಿಲ್ಲ ಎಂಬ ವಾದದ ಬಗ್ಗೆ, ಅಲೋಕ್ ವರ್ಮಾ ಅವರು ಆರೋಪಿ ಸ್ಥಾನದಲ್ಲಿರುವುದರಿಂದ ಯಾವುದೇ ವಿಚಾರಣೆ ನಡೆಸದೆ, ವಾದ ಮಂಡಿಸಲು ಅವಕಾಶವನ್ನೂ ನೀಡದೆ ಅವರನ್ನು ವಿಚಾರಣೆ ಮುಗಿಯುವವರೆಗೆ ಅಮಾನತಿನಲ್ಲಿಡಬಹುದು ಎಂಬುದು ಗೊತ್ತಿರುವ ಸಂಗತಿ. ಯಾವುದೇ ವಿಚಾರಣೆ ನಡೆಸದೆ ಅಥವಾ ವಾದ ಮಂಡಿಸಲು ಅವಕಾಶ ನೀಡದೆ ವಜಾ ಮಾಡಬಾರದು ಅಷ್ಟೇ.

ಅವರನ್ನು ಅಮಾನತಿನಲ್ಲೂ ಇಡಲಾಗಿಲ್ಲ

ಅವರನ್ನು ಅಮಾನತಿನಲ್ಲೂ ಇಡಲಾಗಿಲ್ಲ

ಅಲೋಕ್ ವರ್ಮಾ ಅವರನ್ನು ವಜಾ ಮಾಡುವುದು ಅತ್ಲಾಗಿರಲಿ, ಅವರನ್ನು ಅಮಾನತಿನಲ್ಲೂ ಇಡಲಾಗಿಲ್ಲ. ಅವರನ್ನು ತತ್ಸಮಾನ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ತಿಳಿಸಿದ್ದಾರೆ.

English summary
What Justice AK Sikri says about Alok Verma? Justice Sikri was one of the member in Selection Committee, headed by PM Narendra Modi and Mallikarjun Kharge, which removed Alok Verma from CBI director post and transferred to another department. Former judge Markandey Katju clarifies after speaking to AK Sikri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X