ಜಯ್ ಶಾ ರನ್ನು ಭ್ರಷ್ಟ ಎನ್ನುವವರು ಸಾಕ್ಷಿ ತೋರಿಸಲಿ: ಆರ್ ಎಸ್ ಎಸ್

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 12: ಅಮಿತ್ ಶಾ ಪುತ್ರ ಜಯ್ ಶಾ ಮೇಲೆ ನ್ಯೂಸ್ ವೆಬ್ ಸೈಟ್ ವೊಂದು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆರ್ ಎಸ್ ಎಸ್(ರಾಷ್ಟ್ರೀಯ ಸ್ವಯಂಸೇವಕ), ಯಾವುದೇ ಸಾಕ್ಷ್ಯವಿಲ್ಲದೆ ಅವರನ್ನು ತನಿಖೆಗೆ ಒಳಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

'ದಿ ವೈರ್' ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಜಯ್ ಶಾ

ಈ ಕುರಿತು ಮಾತನಾಡಿದ ಆರ್ ಎಸ್ ಎಸ್ ಮುಖ್ಯಸ್ಥ ದತ್ತಾತ್ರೇಯ ಹೊಸಬಾಳೆ, ಯಾವುದೇ ವ್ಯಕ್ತಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದರೂ ಅವರನ್ನು ವಿಚಾರಣೆ ನಡೆಸುವುದು ತಪ್ಪಲ್ಲ. ಆದರೆ ತನಿಖೆ ನಡೆಸುವುದಕ್ಕೆ ಕೆಲವು ಮುಖ್ಯ ಸಾಕ್ಷ್ಯಗಳು ಬೇಕಾಗುತ್ತವೆ ಎಂದಿದ್ದಾರೆ.

We want proper evidence to investigate Amit Shah's son: RSS

"ಜಯ್ ಶಾ ಅವರ ಮೇಲೆ ಯಾರು ಆರೋಪ ಹೊರಿಸಿದ್ದಾರೋ, ಅವರೇ ಇದು ಸುಳ್ಳೋ, ನಿಜವೋ ಎಂಬುದನ್ನು ಸಾಬೀತುಪಡಿಸಬೇಕು" ಎಂದು ಸಹ ಅವರು ಹೇಳಿದ್ದಾರೆ.

ಅಮಿತ್ ಶಾ ಪುತ್ರ ಜಯ್ ಶಾ ಆದಾಯ, ಮೋದಿ ಸರ್ಕಾರ ಬಂದ ಮೇಲೆ ಹಲವಾರು ಪಟ್ಟು ಹೆಚ್ಚಿದೆ ಎಂದು ಇತ್ತೀಚೆಗೆ ನ್ಯೂಸ್ ವೆಬ್ ಸೈಟ್ ವೊಂದು ಬರೆದು ವಿವಾದ ಸೃಷ್ಟಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We can not investigate Amit Shah's son Jay Shah without proper evidence, RSS leader Dattatreya Hosabale told to media in New Delhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ