ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಮಾಣಿಕ ಅಧಿಕಾರಿಗಳೇ ಕೇಜ್ರಿವಾಲ್ಅನ್ನು ಸಂಪರ್ಕಿಸಿ!

|
Google Oneindia Kannada News

ನವದೆಹಲಿ, ಡಿ. 26 : ದೆಹಲಿ ನಿಯೋಜಿತ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಾಮಾಣಿಕ ಅಧಿಕಾರಿಗಳಿಗೆ ಹುಡುಕಾಟ ಆರಂಭಿಸಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಎಂಎಂಎಸ್, ಇ-ಮೇಲ್ ಹಾಗೂ ಪತ್ರಗಳ ಮೂಲಕ ತಮ್ಮನ್ನು ಸಂಪರ್ಕಿಸಿ ಎಂದು ಅವರು ಕರೆ ನೀಡಿದ್ದಾರೆ.

ಗುರುವಾರ ಕೌಸುಂಬಿಯ ಪಕ್ಷದ ಕಚೇರಿಯಲ್ಲಿ ಜನತಾ ದರ್ಬಾರ್‌ ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡುತ್ತೇವೆ ಮತ್ತು ಅವರ ಸಹಾಯ ಪಡೆದು ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಹೇಳಿದರು.

 Arvind Kejriwal

ಪ್ರಾಮಾಣಿಕ ಅಧಿಕಾರಿಗಳು ಎಸ್‌ಎಂಎಸ್‌, ಇ-ಮೇಲ್‌ ಹಾಗೂ ಪತ್ರಗಳ ಮೂಲಕ ತನ್ನನ್ನು ಸಂಪರ್ಕಿಸುವಂತೆ ಕೇಜ್ರಿವಾಲ್ ಕೋರಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ವಿವಿಧ ಕಾರಣಕ್ಕೆ ಅಮಾನತಾಗಿದ್ದು, ಅವರ ಪಿಂಚಣಿ, ವೈದ್ಯಕೀಯ ಮತ್ತು ಇತರೆ ಭತ್ಯೆಗಳು ತಡೆ ಹಿಡಿಯಲ್ಟಿದ್ದರೆ ಅಂತಹವರು ತಮ್ಮನ್ನು ಸಂಪರ್ಕಿಸಬಹುದು ಎಂದು ಕರೆ ನೀಡಿದ್ದಾರೆ. [ಅಣ್ಣಾರನ್ನು ಖುದ್ದಾಗಿ ಆಹ್ವಾನಿಸುವೆ]

ದೆಹಲಿಯನ್ನು ಮುನ್ನೆಡಸಲು ಸಮರ್ಥ ಅಧಿಕಾರಿಗಳ ತಂಡವನ್ನು ತಾನು ಕಟ್ಟಬೇಕಾಗಿದೆ. ಆದ್ದರಿಂದ ಪ್ರಾಮಾಣಿಕ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿದರೆ, ಅವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡುತ್ತೇನೆ ಮತ್ತು ನಮ್ಮ ಭರವಸೆಗಳನ್ನು ಈಡೇರಿಸಲು ಅವರ ಸಲಹೆಯನ್ನು ಪಡೆಯುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಜನತೆಯಲ್ಲಿ ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ ಕೇಜ್ರಿವಾಲ್, ಎಸ್‌ಎಂಎಸ್ ಮೂಲಕ ಮತ್ತು ಈ-ಮೇಲ್ ಮೂಲಕ ತಮ್ಮ ತಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಿ. ದೆಹಲಿಯ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ನಾನು ಯಾವುದೇ ಮಂತ್ರಶಕ್ತಿ ಅಥವಾ ಮಂತ್ರದಂಡವನ್ನು ಹೊಂದಿಲ್ಲ. ಆದರೆ ಪ್ರಾಮಾಣಿಕ ಜನರು ನಮ್ಮೊಂದಿಗೆ ಕೈ ಜೋಡಿಸಿದರೆ ಯಾವುದೂ ಅಸಾಧ್ಯವಲ್ಲ ಎಂದು ಅವರು ಹೇಳಿದರು.

ಚುನಾವಣೆ ವೇಳೆ ಜನತೆಗೆ ನೀಡಿರುವ ಆಶ್ವಾಸನೆಗಳ ಈಡೇರಿಕೆಗಾಗಿ ತಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಪ್ರಸ್ತುತ ನಾವು ದೆಹಲಿಗೆ 24 ಗಂಟೆಗಳ ನಿರಂತರ ವಿದ್ಯುತ್ ಮತ್ತು ಪ್ರತಿ ನಾಗರೀಕನಿಗೂ ಪ್ರತಿನಿತ್ಯ 700 ಲೀಟರ್ ನೀರು ಸರಬರಾಜು ಮಾಡುವ ಕುರಿತು ಯೋಜನೆಯನ್ನಯ ರೂಪಿಸಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದರು.

English summary
designate Delhi chief minister Arvind Kejriwal on Thursday, December 26 appealed to all honest officers to approach him. He said, "I need team to run Delhi. We would give such officers good position in our government, and take their help to make strategies".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X