ಈ ಗಳಿಗೆಗಾಗಿ 70 ವರ್ಷದಿಂದ ಕಾದಿದ್ದೆವು: ಲಡಾಕ್ ಸಂಸದ ಸಂತಸ

ನವದೆಹಲಿ, ಆಗಸ್ಟ್ 17: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಲಡಾಕ್ ಕುರಿತು ಚರ್ಚೆ ನಡೆದಿರುವುದು ಖುಷಿಯ ವಿಚಾರ ಎಂದು ಲಡಾಕ್‌ನ ಬಿಜೆಪಿ ಸಂಸದ ಜಮ್‌ಯಾಂಗ್ ತ್ಸೆರಿಂಗ್ ನಮ್‌ಗ್ಯಾಲ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ ಲಡಾಕ್ ಚರ್ಚೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಲಡಾಕ್ ವಿಶ್ವಸಂಸ್ಥೆಯಲ್ಲಿ ಇರಲಿ, ಸಂಸತ್‌ನಲ್ಲಿ ಕೂಡ ಚರ್ಚೆಗೆ ಬರುತ್ತಿರಲಿಲ್ಲ ಎಂದು ಅವರು ಟೀಕಿಸಿದ್ದಾರೆ.

We Have Waited 70 Years For This Moment Ladakh MP Jamyang Tsering Namgya

ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಆಹ್ವಾನಿಸುತ್ತೇವೆ. ಅವರು ನಮಗೆ ಸಮಯ ನೀಡುವವರೆಗೂ ಕಾಯುತ್ತೇವೆ. ನಾವು ಅವರಿಗಾಗಿ ಮತ್ತು ಲಡಾಕ್‌ಗೆ ಪ್ರತ್ಯೇಕ ಸ್ಥಾನಮಾನ ಸಿಗುವಂತೆ ಮಾಡಿದ ಎಲ್ಲರೊಂದಿಗೆ ಭರ್ಜರಿ ಸಂಭ್ರಮಾಚರಣೆ ನಡೆಸಲು ಉದ್ದೇಶಿಸುತ್ತಿದ್ದೇವೆ. ನಾವು ಈ ಗಳಿಗೆಗಾಗಿ 70 ವರ್ಷ ಕಾದಿದ್ದೆವು ಎಂದು ನಮ್‌ಗ್ಯಾಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+