• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನೇಪಾಳ ಜೊತೆ ಸಂಬಂಧ ಬಲವಾಗಿದೆ': ಓರ್ವ ಭಾರತೀಯನ ಹತ್ಯೆ ಬಳಿಕ ಸೇನೆ ಮುಖ್ಯಸ್ಥ

|

ದೆಹಲಿ, ಜೂನ್ 13: 'ನೇಪಾಳದ ಜೊತೆ ಭಾರತದ ಸಂಬಂಧ ಬಲವಾಗಿದೆ' ಎಂದು ಭಾರತೀಯ ಸೇನೆ ಮುಖ್ಯಸ್ಥ ಎಂ ಎಂ ನರವಾಣೆ ಹೇಳಿದ್ದಾರೆ. ನೇಪಾಳದ ಗಡಿಯಲ್ಲಿ ಓರ್ವ ಭಾರತೀಯನನ್ನು ಗುಂಡಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

   Video of lady protesting Infront of a police station in rain goes viral | Oneindia Kannada

   ಈ ಘಟನೆ ಬಳಿಕ ನೇಪಾಳದ ಕುರಿತು ಮಾತನಾಡಿರುವ ಭಾರತೀಯ ಸೇನೆ ಮುಖ್ಯಸ್ಥ ಎಂ ಎಂ ನರವಾಣೆ ''ನೇಪಾಳದೊಂದಿಗೆ ನಮಗೆ ಬಲವಾದ ಸಂಬಂಧವಿದೆ. ನಮ್ಮ ನಡುವೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಹೋಲಿಕೆಗಳಿವೆ. ಅವರೊಂದಿಗಿನ ನಮ್ಮ ಸಂಬಂಧವು ಯಾವಾಗಲೂ ಪ್ರಬಲವಾಗಿದೆ ಮತ್ತು ಭವಿಷ್ಯದಲ್ಲಿ ಬಲವಾಗಿರಲಿದೆ'' ಎಂದಿದ್ದಾರೆ.

   ಶುಕ್ರವಾರ ಬೆಳಿಗ್ಗೆ 8.40ರ ಸಮಯದಲ್ಲಿ ನೇಪಾಳದ ಗಡಿಯಲ್ಲಿ ಓರ್ವ ಭಾರತೀಯನ ಮೇಲೆ ನೇಪಾಳ ಸೈನಿಕರು ಗುಂಡು ಹಾರಿಸಿದ್ದು, ಈ ಘಟನೆಯಲ್ಲಿ 25 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.

   ನೇಪಾಳ ಬಾರ್ಡರ್‌ನಲ್ಲಿ ಭಾರತೀಯನ ಹತ್ಯೆ : ನಿಜಕ್ಕೂ ಅಲ್ಲಿ ಏನಾಯಿತು?

   ನೇಪಾಳದಲ್ಲಿರುವ ಸೊಸೆಯನ್ನು ನೋಡಲು ಮಗನ ಜೊತೆ ತಂದೆ ಭಾರತದ ಗಡಿ ಪ್ರದೇಶದಿಂದ ತೆರಳುತ್ತಿದ್ದ ಸಮಯದಲ್ಲಿ, ಅಲ್ಲಿನ ಪೊಲೀಸರ ಜೊತೆ ವಾಗ್ವಾದ ನಡೆದಿದೆ. ಪ್ರವೇಶ ನೀಡಲು ಸಾಧ್ಯವಿಲ್ಲ. ಭಾರತಕ್ಕೆ ಹಿಂತಿರುಗಿ ಹೋಗಿ ಎಂದು ಸೂಚಿಸಿದ್ದಾರೆ. ಆದರೆ, ಕುಟುಂಬ ಮತ್ತು ಸಿಬ್ಬಂದಿ ನಡುವಿನ ವಾಗ್ವಾದ ಕಡಿಮೆಯಾಗಿಲ್ಲ. ಆದ್ದರಿಂದ 15 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ 25 ವರ್ಷದ ಯುವಕ ವಿಕೇಶ್ ಯಾದವ್ ಮೃತಪಟ್ಟಿದ್ದಾನೆ ಎಂದು ತಿಳಿದಿದೆ.

   ಬಳಿಕ, ಆತನ ತಂದೆಯನ್ನು ನೇಪಾಳ ಸೇನೆ ವಶಪಡಿಸಿಕೊಂಡಿತ್ತು. ಇಂದು ಆ ವ್ಯಕ್ತಿಯನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಆ ವ್ಯಕ್ತಿಯ ಮೇಲೆಯೂ ಹಲ್ಲೆ ನೇಪಾಳ ಸೈನಿಕರು ಹಲ್ಲೆ ಮಾಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.

   English summary
   We have a very strong relationship with Nepal. Our relation with them has always been strong and will remain strong in the furture: Army chief General MM Naravane.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X