ಭಾರತೀಯ ಸೇನೆಗೆ ಪರಮಾಧಿಕಾರ ಘೋಷಿಸಿದ ಪ್ರಧಾನಿ ಮೋದಿ

ನವದೆಹಲಿ, ಜೂನ್.19: ಭಾರತದ ಗಡಿ ರಕ್ಷಣೆಗೆ ನಿಂತಿರುವ ಸೇನಾಪಡೆಗೆ ಪರಮಾಧಿಕಾರವನ್ನು ನೀಡಲಾಗಿದ್ದು, ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

Recommended Video

      ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸಾದ ಶ್ರೀಶಾಂತ್ | Sreesanth | Oneindia Kannada

      ನವದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಭೂಪ್ರದೇಶದ ಒಂದಿಂಚೂ ಜಾಗದ ಮೇಲೆ ಯಾರೇ ಕಣ್ಣು ಹಾಕಿದರೂ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.

      ಲಡಾಖ್ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ನಿಜ. ಶತ್ರುರಾಷ್ಟ್ರವನ್ನು ಅಷ್ಟಕ್ಕೆ ಭಾರತೀಯ ಸೈನಿಕರು ಸುಮ್ಮನೆ ಬಿಟ್ಟಿಲ್ಲ. ಬದಲಿಗೆ ದೇಶದ ಸೇನಾಶಕ್ತಿ ಎಂಥದ್ದು ಎನ್ನುವುದನ್ನು ಸರಿಯಾಗಿ ಮನದಟ್ಟು ಮಾಡುವಂತೆ ತೋರಿಸಿ ಕೊಟ್ಟಿದ್ದಾರೆ. ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆಯ ಸನ್ನದ್ಧವಾಗಿ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

      We Given Our Armed Forces Full Freedom For Taking Any Appropriate Action Necessary: Pm


      ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ:

      ಲಡಾಖ್ ಗಡಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರವು ಆದ್ಯತೆ ನೀಡುತ್ತಿದೆ. ಭಾರತೀಯ ಸೇನೆಯು ಗಡಿಯಲ್ಲಿ ಗಸ್ತು ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಗಡಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಚಟುವಟಿಕೆಗಳ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಲಾಗುತ್ತದೆ.

      ಭಾರತೀಯ ಪ್ರದೇಶದ ಮೇಲೆ ಚೀನಾ ಹಿಡಿತವಿಲ್ಲ:

      ಭಾರತದ ಯಾವುದೇ ಪ್ರದೇಶವನ್ನು ಚೀನಾ ಸೇನೆಯು ಅತಿಕ್ರಮಣ ಮಾಡಿಕೊಂಡಿಲ್ಲ. ಅದಕ್ಕೆ ಭಾರತೀಯ ಸೇನೆಯು ಯಾವುದೇ ಕಾರಣಕ್ಕೂ ಅವಕಾಶವನ್ನೂ ನೀಡುವುದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಅಗತ್ಯ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಮಾಧಿಕಾರವನ್ನು ಸೇನೆಗೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+