ರಾಮಜನ್ಮಭೂಮಿ ಮಸೀದಿ ಕಟ್ಟುವ ಸ್ಥಳವಲ್ಲ : ಸುಬ್ರಮಣಿಯನ್ ಸ್ವಾಮಿ

Posted By: Nayana
Subscribe to Oneindia Kannada

ನವದೆಹಲಿ, ನವೆಂಬರ್14 : ಮಸೀದಿಯನ್ನು ಯಾವ ಜಾಗದಲ್ಲಿ ಬೇಕಾದರೂ ಕಟ್ಟಬಹುದು ಆದರೆ ರಾಮ ಜನ್ಮಭೂಮಿಯಲ್ಲಿ ಅಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಇಂದು(ನ.14) ಹೇಳಿದ್ದಾರೆ.

ಅಯೋಧ್ಯೆ: ಮಧ್ಯಸ್ಥಿಕೆಗೆ ಬಂದ ರವಿಶಂಕರ್ ರನ್ನು ಗೇಲಿ ಮಾಡಿದ ಓವೈಸಿ

ಅಯೋಧ್ಯೆ ವಿವಾದವನ್ನು ಇತ್ಯರ್ಥಪಡಿಸುವಂತೆ ಧಾರ್ಮಿಕ ಗುರು ರವಿ ಶಂಕರ್ ಅವರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದು, ನ.16ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿ, ಮಸೀದಿಯನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು, ನಮಾಜ್ ಓದುವ ಸ್ಥಳ ಮಸೀದಿಯಾಗಿದೆ. ಸೌದಿ ಅರೇಬಿಯಾದಲ್ಲಿ ಮಸೀದಿ ಕುಸಿದುಬಿದ್ದಿತ್ತು.

We can build Maszid any where, but not Rama's birth place :Swamy

ಬಳಿಕ ಮಸೀದಿಯನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಲಾಗಿತ್ತು. ಅದೇ ರೀತಿ ಭಾರತದಲ್ಲೂ ಬಾಬ್ರಿ ಮಸೀದಿಯನ್ನು ಹೆಚ್ಚು ಮುಸನ್ಮಾನರು ಇರುವ ಅಂಬೇಡ್ಕರ್ ಜಿಲ್ಲೆಗಳ ಗಡಿಗಳಲ್ಲಿ ಸ್ಥಳಾಂತರ ಮಾಡಬಹುದು ಎಂದು ಹೇಳಿದ್ದಾರೆ. ದೇಶದಲ್ಲಿ 40 ಸಾವಿರ ದೇವಾಲಯಗಳನ್ನು ಧ್ವಂಸ ಮಾಡಲಾಗಿತ್ತು. ನಾವು ಅದಾವುದನ್ನೂ ಕೇಳುತ್ತಿಲ್ಲ.

ಕೇವಲ ಮೂರು ದೇವಾಲಯಗಳನ್ನು ನಿರ್ಮಾಣ ಮಾಡಲು ಆಗ್ರಹಿಸುತ್ತಿದ್ದೇವೆ. ಮಥುರಾದಲ್ಲಿ ಕೃಷ್ಣ ದೇಗುಲ, ಅಯೋಧ್ಯೆಯಲ್ಲಿ ರಾಮ ದೇಗುಲ ಹಾಗೂ ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ದೇಗುಲ ನಿರ್ಮಾಣ ಮಾಡುವಂತೆ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior BJP leader and MP Rajyasabha subramanian Swamy opined that maszid can build any where but we can't build Rama Janmabhumi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ