• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಷ್ಮಾ ಪಾರ್ಥೀವ ಶರೀರ ಮುಂದೆ ಪ್ರಧಾನಿ ಮೋದಿ ಕಣ್ಣೀರಧಾರೆ

|
   Sushma Swaraj : ಸುಷ್ಮಾ ಸ್ವರಾಜ್ ಗೆ ಅಂತಿಮ ನಮನ ಸಲ್ಲಿಸುವ ವೇಳೆ ಕಣ್ಣೀರಿಟ್ಟ ಮೋದಿ

   ನವದೆಹಲಿ, ಆಗಸ್ಟ್ 07: ಒಂದು ಕಾಲದಲ್ಲಿ ಪ್ರಧಾನಿ ಮೋದಿ ಅವರ ಕೇಂದ್ರ ಸಚಿವ ಸಂಪುಟದ ಶಕ್ತಿಯಾಗಿದ್ದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಯ ನೋವಿನಿಂದ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ನಿನ್ನೆ ರಾತ್ರಿ ನಿಧನವಾರ್ತೆ ಕೇಳಿದ ಕೂಡಲೇ ಪ್ರಧಾನಿ ಸಚಿವಾಲಯದಿಂದ ಭಾವುಕ ಟ್ವೀಟ್ ಗಳು ಸರಣಿಯಾಗಿ ಹೊರ ಬಂದವು. ಮೋದಿ ಸಂಪುಟದ ಪ್ರಮುಖ ಸಚಿವರು ತಕ್ಷಣವೆ ಏಮ್ಸ್ ಗೆ ಧಾವಿಸಿ, ಸಕಲ ವ್ಯವಸ್ಥೆ ನೋಡಿಕೊಂಡರು. ಇಂದು ಸುಷ್ಮಾ ಸ್ವರಾಜ್ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಕುಟುಂಬದವರಿಗೆ ಸಾಂತ್ವನ ಹೇಳಿದರು.

   ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

   ಸುಷ್ಮಾ ನಿವಾಸಕ್ಕೆ ತೆರಳಿದ ಕೆಂಪು ವಸ್ತ್ರಧಾರಿಯಾಗಿ ಚಿರನಿದ್ರೆಗೆ ಜಾರಿರುವ ಸುಷ್ಮಾ ಅವರ ಪಾರ್ಥೀವಶರೀರವನ್ನು ನೋಡಿ ಎರದು ಕೈ ಜೋಡಿಸಿ ಕೆಲ ಹೊತ್ತು ನಿಂತಲ್ಲೇ ನಿಂದರು. ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸುವಾಗ ಮೋದಿ ಕಣ್ಣಾಲಿ ತುಂಬಿ ಬಂದಿತ್ತು.

   ಇಂದು ಕಣ್ಣೀರುಕ್ಕಿಸುತ್ತಿವೆ, ಅಂದು ನಕ್ಕು ನಲಿಸಿದ್ದ ಸುಷ್ಮಾ ಟ್ವೀಟ್ಇಂದು ಕಣ್ಣೀರುಕ್ಕಿಸುತ್ತಿವೆ, ಅಂದು ನಕ್ಕು ನಲಿಸಿದ್ದ ಸುಷ್ಮಾ ಟ್ವೀಟ್

   ನಂತರ ಸುಷ್ಮಾ ಪುತ್ರಿ ಬಾನ್ಸುರಿ ಹಾಗೂ ಪತಿ ಸ್ವರಾಜ್ ಕೌಶಲ್ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಮಾತುಗಳನ್ನಾಡಿದರು ಆದರೆ, ಈ ಸಂದರ್ಭದಲ್ಲಿ ದುಃಖ ಉಮ್ಮಳಿಸಿ ಬಂದಿತ್ತು, ಕಣ್ಣೀರು ತಡೆಯುವ ಯಾವ ಪ್ರಯತ್ನವನ್ನು ಮಾಡುವಂತಿರಲಿಲ್ಲ, ಅಗಲಿದ ಸೋದರಿ ಸಮಾನ ಸುಷ್ಮಾ ಅವರಿಗೆ ಕಂಬನಿಧಾರೆ ಹರಿಸಿದರು.

   ಇದು ನನ್ನ ಜೀವಮಾನದ ಅಮೂಲ್ಯ ದಿನ

   ಇದು ನನ್ನ ಜೀವಮಾನದ ಅಮೂಲ್ಯ ದಿನ

   ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದ ಸುಷ್ಮಾ ಅವರು 'ಈ ದಿನಕ್ಕಾಗಿ ನನ್ನ ಜೀವಮಾನದಲ್ಲಿ ಇದೇ ದಿನಕ್ಕೋಸ್ಕರ ಕಾಯುತ್ತಿದ್ದೆ" ಎಂದು ಕೊನೆಯ ಬಾರಿಗೆ ಟ್ವೀಟ್​ ಮೂಲಕ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದರು.

   ತಾಯಿ ಸುಷ್ಮಾಗೆ ಗಾಲಿ ಜನಾರ್ದನ ರೆಡ್ಡಿ ಬರೆದ ಶೋಕ ಪತ್ರತಾಯಿ ಸುಷ್ಮಾಗೆ ಗಾಲಿ ಜನಾರ್ದನ ರೆಡ್ಡಿ ಬರೆದ ಶೋಕ ಪತ್ರ

   ಬಿಜೆಪಿ ಹಿರಿಯ ಜೀವಿ ಎಲ್ ಕೆ ಅಡ್ವಾಣಿ ಕಂಬನಿ

   ಬಿಜೆಪಿ ಹಿರಿಯ ಜೀವಿ ಎಲ್ ಕೆ ಅಡ್ವಾಣಿ ಅವರು ಸುಷ್ಮಾ ಅವರಿಗೆ ಅಂತಿಮ ನಮನ ಸಲ್ಲಿಸಿ, ಸುಷ್ಮಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಡ್ವಾಣಿ ಪುತ್ರಿ ಪ್ರತಿಭಾ ಅವರು ಕೂಡಾ ಭಾವುಕರಾಗಿ ಪಾರ್ಥೀವ ಶರೀರದ ಮುಂದೆ ಕಣ್ಣೀರು ಹರಿಸಿದರು.

   ವಾಜಪೇಯಿ ನಿಧನಕ್ಕೆ ಮೋದಿ ಕಂಬನಿ

   2018ರ ಆಗಸ್ಟ್​ 16ರಂದು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅಗಲಿಕೆಯ ನೋವಿನಲ್ಲಿ ಕಣ್ಣೀರಿಟ್ಟಿದ್ದ ಮೋದಿ ಅವರು, ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಅವರ ನಿಧನರಿಂದ ಸಹಜವಾಗಿ ತೀವ್ರವಾಗಿ ದುಃಖಿತರಾಗಿದ್ದಾರೆ.

   ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

   ಸುಷ್ಮಾ ಬಗ್ಗೆ ಮೋದಿ ಟ್ವೀಟ್

   "ಸುಷ್ಮಾ ಅನಾರೋಗ್ಯವನ್ನೂ ಲೆಕ್ಕಿಸದೆ ವಿದೇಶಾಂಗ ವ್ಯವಹಾರ ಖಾತೆಯನ್ನು ನಿಭಾಯಿಸಿದ್ದರು. ಅವರ ಇಡೀ ಜೀವನವನ್ನು ದೇಶದ ಜನರ ಸೇವೆಗೆ ಮೀಸಲಿಟ್ಟಿದ್ದರು. ಕೋಟ್ಯಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದು ಟ್ವೀಟ್​ ಮಾಡಿದ್ದರು. ಹಾಗೇ ಅವರ ನಿಧನದಿಂದ ತೀವ್ರ ದುಃಖವಾಗಿದೆ" ಎಂದು ಮೋದಿ ಟ್ವೀಟ್ ಮಾಡಿದ್ದರು.

   English summary
   Watch: PM Modi pays tribute to Sushma Swaraj, fights to hold back tears. Modi stood with folded hands in front of Sushma's mortal remains with a sombre expression.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X