• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಗಸ್ಟಾ ವೆಸ್ಟ್ ಲ್ಯಾಂಡ್: ಅಪ್ರೂವರ್ ಆಗುವುದಾಗಿ ರಾಜೀವ್ ಸಕ್ಸೇನಾ ಅರ್ಜಿ

|

ಅಗಸ್ಟಾ ವೆಸ್ಟ್ ಲ್ಯಾಂಡ್ ನ 3600 ಕೋಟಿ ರುಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತನಾಗಿರುವ ರಾಜೀವ್ ಸಕ್ಸೇನಾ ತಾನು ಅಪ್ರೂವರ್ ಆಗುವುದಾಗಿ ದೆಹಲಿ ಕೋರ್ಟ್ ಮೊರೆ ಹೋಗಿದ್ದಾರೆ. ವಿಶೇಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಈ ಬಗ್ಗೆ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆಯನ್ನು ಕೇಳಿದ್ದಾರೆ. ಈ ಬಗೆಗಿನ ವಿಚಾರಣೆಯನ್ನು ಗುರುವಾರಕ್ಕೆ ಕೋರ್ಟ್ ಮುಂದೂಡಿದೆ.

ಅಗಸ್ಟಾ ವೆಸ್ಟ್ ಲ್ಯಾಂಡ್: ಎರಡನೇ ಆರೋಪಿ ಸಕ್ಸೇನ ದುಬೈನಿಂದ ಭಾರತಕ್ಕೆ

ದುಬೈ ಮೂಲದ ಕಂಪನಿಗಳಾದ ಯುಎಚ್ ವೈ ಸಕ್ಸೇನಾ ಮತ್ತು ಮೆಟ್ರಿಕ್ಸ್ ಹೋಲ್ಡಿಂಗ್ಸ್ ನ ನಿರ್ದೇಶಕನಾಗಿದ್ದಾನೆ ಸಕ್ಸೇನಾ. ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಆರೋಪ ಪಟ್ಟಿಯಲ್ಲಿ ಈತನ ಹೆಸರು ಕೂಡ ಇದೆ.

ದುಬೈ ಮೂಲದ ರಾಜೀವ್ ಸಕ್ಸೇನಾನನ್ನು ಜನವರಿಯಲ್ಲಿ ಭಾರತಕ್ಕೆ ಕರೆತರಲಾಯಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಕರೆತಂದ ಎರಡನೇ ಆರೋಪಿ ಸಕ್ಸೇನಾ. ಬ್ರಿಟಿಷ್ ನಾಗರಿಕ- ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ ಆರೋಪ ಹೊತ್ತಿರುವ ಮೈಖೇಲ್ ಕ್ರಿಶ್ಚಿಯನ್ ನನ್ನು ದುಬೈನಿಂದ ದೇಶಕ್ಕೆ ಕರೆತರಲಾಗಿದೆ. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ.

English summary
Rajeev Saxena, who was arrested in the ₹3,600-crore AgustaWestland money-laundering case, on February 27 moved a Delhi court to become an approver in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X