ದೆಹಲಿ ದರ್ಬಾರ್ : ಶೇ 63 ರಷ್ಟು ಮತದಾನ
ನವದೆಹಲಿ, ಫೆ.7 : ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ಅಂತ್ಯಗೊಂಡಿದ್ದು ಶೇ 63.5ರಷ್ಟು ಮತದಾನವಾಗಿದೆ. 70 ಕ್ಷೇತ್ರಗಳಲ್ಲಿ 673 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲರ ಭವಿಷ್ಯ ಮತಯಂತ್ರ ಸೇರಿದೆ. ಫೆ.10ರ ಮಂಗಳವಾರ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
ನವದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ 1.33 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಹೊಂದಿದ್ದರು. 12,177 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಪೊಲೀಸ್ ಮತ್ತು ಅರೆಸೇನಾಪಡೆ ಸೇರಿ ಸುಮಾರು 55 ಸಾವಿರ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. [ದೆಹಲಿ ಚುನಾವಣೆ: ಚಾಣಕ್ಯ ವರದಿಯಲ್ಲಿ ಯಾರಿಗೆ ಬಹುಮತ?]

ಬಿಜೆಪಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಅಧಿಕಾರ ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿತ್ತು. [ದೆಹಲಿ ಮತದಾನದ ಚಿತ್ರಗಳು ಇಲ್ಲಿವೆ]
As Delhi votes today, urging voters to go out & vote in large numbers. I particularly call upon my young friends to vote in record numbers.
— Narendra Modi (@narendramodi) February 7, 2015 ಸಮಯ 5 ಗಂಟೆ : ದೆಹಲಿಯಲ್ಲಿ ಸಂಜೆ 5 ಗಂಟೆಯ ವೇಳೆಗೆ ಶೇ 63.5ರಷ್ಟು ಮತದಾನವಾಗಿದೆ.
ಸಮಯ 2.30 : ಮಧ್ಯಾಹ್ನ 2 ಗಂಟೆಯ ವೇಳೆಗೆ ದೆಹಲಿಯಲ್ಲಿ ಶೇ 41.2ರಷ್ಟು ಮತದಾನವಾಗಿದೆ.
ಸಮಯ 1 ಗಂಟೆ : ಮಧ್ಯಾಹ್ನ 12.30ರ ವೇಳೆಗೆ ನವದೆಹಲಿಯಲ್ಲಿ ಶೇ 24.5ರಷ್ಟು ಮತದಾನವಾಗಿದೆ. ಯಾವುದೇ ಅಹಿತಕರ ಘಟನೆಗಳ ನಡೆದಿಲ್ಲ, ಶಾಂತಿಯುತವಾಗಿ ಮತದಾನ ಸಾಗುತ್ತಿದೆ.
ಸಮಯ 12. 10 : ಅರವಿಂದ್ ಕೇಜ್ರಿವಾಲ್ ತುಂಬಾ ಸುಳ್ಳು ಹೇಳುತ್ತಾರೆ ಎಂದು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಯಾರು ಮತ್ತೊಂದು ಚುನಾವಣೆ ಬಯಸುವುದಿಲ್ಲ. ಆದ್ದರಿಂದ ಈ ಬಾರಿ ಸ್ಥಿರ ಸರ್ಕಾರ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
Former Delhi CM Sheila Dikshit casts her vote #DelhiVotes pic.twitter.com/5iznpOdS5F
— ANI (@ANI_news) February 7, 2015 ಸಮುಯ 11.30 : ದೆಹಲಿಯಲ್ಲಿ ಬೆಳಗ್ಗೆ 11 ಗಂಟೆಯ ವರೆಗೆ ಶೇ 19.1 ರಷ್ಟು ಮತದಾನವಾಗಿದೆ.

ಸಮಯ 10 ಗಂಟೆ : ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದೆಹಲಿಯಲ್ಲಿ ಜನರು ಮತದಾನ ಮಾಡುತ್ತಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಯ ವರೆಗೆ ಶೇ 10 ರಷ್ಟು ಮತದಾನವಾಗಿದೆ.
ಸಮಯ 9.30 : ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಿ.ಕೆ.ದತ್ ಕಾಲೋನಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ರಾತ್ರಿ ಮದ್ಯ ಹಂಚಲಾಗಿದೆ. ಇಂತಹ ಪಕ್ಷಗಳಿಗೆ ಮತ ನೀಡಬೇಡಿ ಎಂದು ಅವರು ದೆಹಲಿ ಜನರಿಗೆ ಮನವಿ ಮಾಡಿದ್ದಾರೆ.
AAP CM candidate Arvind Kejriwal en-route BK Dutt Colony to cast his vote pic.twitter.com/LfsTztjYH8
— ANI (@ANI_news) February 7, 2015 ಸಮಯ 8.30 : ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಉದಯ್ ಪಾರ್ಕ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇಂದು ದೆಹಲಿ ಜನರಿಗೆ ಐತಿಹಾಸಿಕ ದಿನವಾಗಿದ್ದು, ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ದೆಹಲಿಯಲ್ಲಿ ಈ ಬಾರಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
BJP Delhi CM candidate Kiran Bedi after casting her vote outside Uday Park polling booth #DelhiVotes https://t.co/eNL6SYdd42
— ANI (@ANI_news) February 7, 2015 











Click it and Unblock the Notifications