• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್‌ಲೈನ್ಸ್‌ಗೆ ಟಾಟಾ ರೀ ಎಂಟ್ರಿ, ಮುಂಬಯಿಗೆ ಮೊದಲ ಪಯಣ

By Staff
|

ನವದೆಹಲಿ, ಜ. 9: ದೇಶದಲ್ಲಿರುವ ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ಭರಿಸಲಾಗದೆ, ತಳಕಚ್ಚುತ್ತಿವೆ. ಸರ್ಕಾರಿ ಮಾಲೀಕತ್ವದ ಏರ್ ಇಂಡಿಯಾ ಕೂಡ ಆರ್ಥಿಕ ಸಂಕಷ್ಟದಿಂದ ಹೈರಾಣಾಗಿದೆ. ಇಂತಹ ಸನ್ನಿವೇಷದಲ್ಲಿಯೂ ಟಾಟಾ ಸಮೂಹವು ಆರು ದಶಕಗಳ ನಂತರ ವಿಮಾನಯಾನ ಕ್ಷೇತ್ರಕ್ಕೆ ಹೊಸ ಉತ್ಸಾಹದೊಂದಿಗೆ ಪುನಃ ಕಾಲಿಟ್ಟಿದೆ.

ಟಾಟಾ ಮತ್ತು ಸಿಂಗಪುರ್ ಏರ್‌ಲೈನ್ಸ್ ಜಂಟಿ ಮಾಲೀಕತ್ವದ ವಿಸ್ತಾರಾ ವಿಮಾನಯಾನ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಹಾರಾಟ ಆರಂಭಿಸಿದೆ. ಶುಕ್ರವಾರ ಬೆಳಗ್ಗೆ ನವದೆಹಲಿಯಿಂದ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಗೆ ಪ್ರಯಾಣಿಕರನ್ನು ಒಯ್ದಿದೆ. [ಥಂಡಿ ಹಿಡಿದ ವಿಮಾನ ತಳ್ಳಿದ ಪ್ರಯಾಣಿಕರು]

ಈ ಮೂಲಕ ಸರ್ಕಾರಿ ಮಾಲೀಕತ್ವದ ಏರ್ ಇಂಡಿಯಾ ಹಾಗೂ ಖಾಸಗಿ ಸಂಸ್ಥೆ ಜೆಟ್ ಏರ್‌ವೇಯ್ಸ್ ನಂತರ ವಿಸ್ತಾರಾ ಕಂಪನಿಯು ದೇಶದಲ್ಲಿ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುವ ಮೂರನೇ ಕಂಪನಿ ಎನ್ನಿಸಿಕೊಂಡಿದೆ.

ಟಾಟಾ ಸಮೂಹವು ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿಯೇ ಈ ಕುರಿತು ಘೋಷಣೆ ಮಾಡಿತ್ತು. 2015ರ ಜನವರಿ 9ರಂದು ದೆಹಲಿಯಿಂದ ಮುಂಬಯಿ ಹಾಗೂ ಅಹಮದಾಬಾದ್‌ಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿತ್ತು. [ಸ್ಪರ್ಧೆಗೆ ಏರ್ ಇಂಡಿಯಾ, ಇದು ಸರ್ಕಾರಿ ಸವಾಲ್]

148 ಸೀಟ್‌ಗಳ ಏರ್‌ಬಸ್ : ಪ್ರಸ್ತುತ ವಿಸ್ತಾರಾ ಕಂಪನಿಯು ಎರಡು A320 ಏರ್‌ಬಸ್‌ಗಳನ್ನು ಲೀಸ್‌ ಮೇಲೆ ಪಡೆದಿದ್ದು, ಇವುಗಳಲ್ಲಿ 148 ಸೀಟ್‌ಗಳಿವೆ. ಇದರಲ್ಲಿ 16 ಬಿಸಿನೆಸ್ ದರ್ಜೆ, 36 ಪ್ರೀಮಿಯಂ ಎಕಾನಮಿ ಹಾಗೂ 96 ಎಕಾನಮಿ ಸೀಟ್‌ಗಳು.

ಮೊದಲ ವರ್ಷ ನವದೆಹಲಿಯಿಂದ ಗೋವಾ, ಮುಂಬಯಿ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚಂಡೀಗಢ, ಶ್ರೀನಗರ, ಜಮ್ಮು ಮತ್ತು ಪಾಟ್ನಾ ನಗರಗಳಿಗೆ ವಿಮಾನಯಾನ ಸೇವೆ ನೀಡುವುದಾಗಿ ವಿಸ್ತಾರಾ ಕಂಪನಿಯು ತಿಳಿಸಿದೆ. [ಏರಿ ಟಿಕೆಟ್ ದರ ಸಮರ, ಏರ್ ಏಷ್ಯಾ ಎಂಟ್ರಿ ಆಫರ್]

ಮೊದಲ ವರ್ಷದಲ್ಲಿ 87 ಹಾರಾಟಗಳನ್ನು ನಡೆಸಲು ಸಂಸ್ಥೆ ಉದ್ದೇಶಿಸಿದ್ದು, ಇದಕ್ಕಾಗಿ 5 ಏರ್‌ಬಸ್ A320 ಗಳನ್ನು ಲೀಸ್‌ ಮೇಲೆ ಪಡೆಯಲು ನಿರ್ಧರಿಸಿದೆ. ನಾಲ್ಕನೇ ವರ್ಷಕ್ಕೆ 301 ಹಾರಾಟಗಳನ್ನು ನಡೆಸುವ ಗುರಿ ಹೊಂದಿರುವುದಾಗಿ ವಿಸ್ತಾರಾ ಸಂಸ್ಥೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata-SIA joint venture airline Vistara has taken off Friday with its first flight from New Delhi to Mumbai. The launch of the new full-service airline will also mark the re-entry of the Tata Group in the airline business after over six decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more