ವಿಡಿಯೋ: ಪ್ರಧಾನಿಯಾಗಿ ನರೇಂದ್ರ ಮೋದಿ
ನವದೆಹಲಿ, ಮೇ.26: ನರೇಂದ್ರ ಮೋದಿ ಅವರು ದೇಶ ಪ್ರಧಾನಿಯಾಗಿ ಸೋಮವಾರ ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ಲೈವ್ ವಿಡಿಯೋ ಭರ್ಜರಿ ದಾಖಲೆಗೆ ಸಾಕ್ಷಿಯಾಗಿದೆ. ಇದುವರೆವಿಗೂ ಚುನಾವಣಾ ಪ್ರಚಾರ ಹಾಗೂ ನಂತರ ನಡೆದ ಸಮಾರಂಭಗಳ ಆನ್ ಲೈನ್ ವಿಡಿಯೋ ವೀಕ್ಷಕರ (real time) ಸಂಖ್ಯೆ ಹೊಸ ದಾಖಲೆ ಬರೆದಿದೆ.
ಆಂಧ್ರದ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷ ಉದ್ಘಾಟನೆ ಸಮಾರಂಭದ ವಿಡಿಯೋ ರಿಯಲ್ ಟೈಮ್ ವೀಕ್ಷಕರ ಸಂಖ್ಯೆ(Watching Now) 6,899 ದಾಟಿತ್ತು. ಆದರೆ, ಸೋಮವಾರದ ಮೋದಿ ಪದಗ್ರಹಣ ಕಾರ್ಯಕ್ರಮ ಲೈವ್ ವಿಡಿಯೋ ಈ ಸಮಯಕ್ಕೆ(17.59) 29,267 ಸಂಖ್ಯೆ ದಾಟಿದೆ.[ಮೋದಿ ಪದಗ್ರಹಣ ಅಪ್ಡೇಟ್]
ಇದೇ ಮೊದಲ ಬಾರಿಗೆ 8 ರಾಷ್ಟ್ರಗಳ ನಾಯಕರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಇದರ ಜೊತೆಗೆ 3 ಸಾವಿರಕ್ಕೂ ಅಧಿಕ ಮಂದಿ ಮೋದಿ ಅವರ ಪ್ರಮಾಣವಚನಕ್ಕೆ ಆಗಮಿಸುತ್ತಿರುವುದು ಇತಿಹಾಸದಲ್ಲೇ ಮೊದಲು. ಈ ಮೊದಲು ಅಟಲ್ ಬಿಹಾರಿ ವಾಜಪೇಯಿ ಅವರು 1999ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ 1200 ಮಂದಿ ಆಗಮಿಸಿದ್ದು ಇದುವರೆಗಿನ ದಾಖಲೆಯಾಗಿದೆ. ಇನ್ನಷ್ಟು ವಿವರ ಹಾಗೂ ಚಿತ್ರಗಳನ್ನು ಮುಂದೆ ನೋಡಿ..
ಆನ್ ಲೈನ್ ವಿಡಿಯೋ ಇಲ್ಲಿ ನೋಡಿ
ಚುನಾವಣಾ ಪ್ರಚಾರ ಹಾಗೂ ನಂತರ ನಡೆದ ಸಮಾರಂಭಗಳ ಆನ್ ಲೈನ್ ವಿಡಿಯೋ ವೀಕ್ಷಕರ (real time) ಸಂಖ್ಯೆ ಹೊಸ ದಾಖಲೆ ಬರೆದಿದೆ.

150 ರಾಜತಾಂತ್ರಿಕರ ಆಗಮನ
ರಾಷ್ಟ್ರಪತಿ ಅಂಗಳದಲ್ಲಿ ನಡೆಯುವ ಈ ಸಮಾರಂಭಕ್ಕೆ ವಿದೇಶಗಳಿಂದ ಸುಮಾರು 150 ರಾಜತಾಂತ್ರಿಕರು ಆಗಮಿಸುತ್ತಿರುವುದು ವಿಶೇಷ. ಇದರ ಜೊತೆಗೆ 17 ರಾಜ್ಯಪಾಲರನ್ನು ಕೂಡ ಆಹ್ವಾನಿಸಲಾಗಿದೆ.

ಕಾಂಗ್ರೆಸ್ ನಾಯಕರ ಆಗಮನ
ಈ ಸಮಾರಂಭಕ್ಕೆ ನಿರ್ಗಮಿತ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆಗಮಿಸಿದ್ದಾರೆ.

ರಾಜ್ ಘಾಟ್ ನಲ್ಲಿ ನರೇಂದ್ರ ಮೋದಿ
ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ನರೇಂದ್ರ ಮೋದಿ ನಮಿಸಿದರು.
ಯೂಟ್ಯೂಬ್ , ದೂರದರ್ಶನ ಚಾನೆಲ್ ನಲ್ಲಿ ವಿಡಿಯೋ
ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದ ನರೇಂದ್ರ ಮೋದಿ.

ಮೋದಿ ಅವರಿಂದ ಪ್ರಮಾಣ ವಚನ ಸ್ವೀಕಾರ
'ಮೇ ನರೇಂದ್ರ ದಾವೋದರ್ ಮೋದಿ ಈಶ್ವರ್ ಕೆ ನಾಮ್ ಶಪಥ್...' ಎಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ. ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಮೋದಿ ಹಾಗೂ ರಾಜನಾಥ್ ಸಿಂಗ್
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಹಾಗೂ ರಾಜನಾಥ್ ಸಿಂಗ್

ಡಿವಿ ಸದಾನಂದ ಗೌಡ ಕ್ಯಾಬಿನೆಟ್ ಗೆ
ಮೋದಿ ಕ್ಯಾಬಿನೆಟ್ ಸೇರಿದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ

ಹೇಮಮಾಲಿನಿ, ಧರ್ಮೇಂದ್ರ
ಹೇಮಮಾಲಿನಿ, ಧರ್ಮೇಂದ್ರ, ಸಲ್ಮಾನ್ ಖಾನ್, ಅನುಪಮ್ ಖೇರ್ ಸೇರಿದಂತೆ ಸಿನಿಮಾ ಕ್ಷೇತ್ರದ ಗಣ್ಯರು ಹಾಜರು

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ
ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾವಿಧಿಕ್ಕೂ ಮುನ್ನ












Click it and Unblock the Notifications