ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ ಟಿಎಂಸಿ ದೂರ

|
Google Oneindia Kannada News

ನವದೆಹಲಿ, ಜುಲೈ 21: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರುವುದಾಗಿ ತಿಳಿಸಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಸ್ಪರ್ಧಿಸಿದ್ದಾರೆ.

ಆಡಳಿತ ಪಕ್ಷದ ಜಗದೀಪ್ ಧನಕರ್ ಅಥವಾ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಇಬ್ಬರಲ್ಲಿ ಯಾರನ್ನೂ ಬೆಂಬಲಿಸದಿರಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಜಿತ್ ಬ್ಯಾನರ್ಜಿ ತಿಳಿಸಿದರು.

Vice-President Poll 2022: Trinamool congress To Abstain From Voting

'ಎನ್‌ಡಿಎ (ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಉಭಯ ಸದನಗಳಲ್ಲಿ 35 ಸಂಸದರನ್ನು ಹೊಂದಿರುವ ನಮ್ಮ ಪಕ್ಷದೊಂದಿಗೆ ಸೂಕ್ತ ಸಮಾಲೋಚನೆ ಮತ್ತು ಚರ್ಚೆಯಿಲ್ಲದೆ ವಿರೋಧ ಪಕ್ಷದ ಅಭ್ಯರ್ಥಿಯನ್ನು ನಿರ್ಧರಿಸಲಾಗಿದೆ. ಹೀಗಾಗಿ ನಾವು ರೀತಿಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರವಿರಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ." ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಸುದ್ದಿಗಾರರಿಗೆ ತಿಳಿಸಿದರು.

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತಿಚೇಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಜಗದೀಪ್ ಧನಕರ್ ಅವರ ನಡುವೆ ಡಾರ್ಜಿಲಿಂಗ್‌ನಲ್ಲಿ ಸಭೆ ನಡೆದಿತ್ತು. ತಮ್ಮನ್ನು ಬೆಂಬಲಿಸುವಂತೆ ಜಗದೀಪ್ ಧನಕರ್ ಮಮತಾ ಬ್ಯಾನರ್ಜಿ ಅವರನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Vice-President Poll 2022: Trinamool congress To Abstain From Voting

"ಒಂದೆಡೆ ಎನ್‌ಡಿಎಯ ಜಗದೀಪ್ ಧನಕರ್, ಇನ್ನೊಂದು ಕಡೆ ಮಾರ್ಗರೆಟ್ ಆಳ್ವಾ ಇದ್ದಾರೆ. ಜಗದೀಪ್ ಧನಕರ್ ಅವರ ನಡವಳಿಕೆ ಮತ್ತು ಭಾರಿ ಪಕ್ಷಪಾತ ಕಳೆದ ಮೂರು ವರ್ಷಗಳಿಂದ ಬಂಗಾಳದ ಜನರ ಮೇಲೆ ಹಲ್ಲೆ ನಡೆಸಿದೆ, ನಾವು ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

English summary
Mamata Banerjee's Trinamool congress today said it will abstain from voting in the Vice President election 2022. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X