ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೂ ಟ್ರಿಪ್ ತಪ್ಪಿಸದೆ 1 ಲಕ್ಷ ಕಿಮೀ ಪ್ರಯಾಣ ಪೂರೈಸಿದ ವಂದೇ ಭಾರತ್

|
Google Oneindia Kannada News

ನವದೆಹಲಿ, ಮೇ 17: ಸಂಪೂರ್ಣ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಂದೇ ಒಂದು ಟ್ರಿಪ್ ತಪ್ಪಿಸದೆ ಒಂದು ಲಕ್ಷ ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿದ ಸಾಧನೆ ಮಾಡಿದೆ.

'ದೆಹಲಿಯಿಂದ ವಾರಣಾಸಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫೆಬ್ರವರಿ 15ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕಳೆದ ಮೂರು ತಿಂಗಳಲ್ಲಿ ಒಂದೇ ಒಂದು ಪ್ರಯಾಣವನ್ನು ತಪ್ಪಿಸದೆ ಅದು ಬುಧವಾರಕ್ಕೆ ಒಂದು ಲಕ್ಷ ಕಿ.ಮೀ. ಸಂಚರಿಸಿದೆ' ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ಮೋದಿಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ಪ್ರಧಾನಿ ಮೋದಿಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಮರುದಿನದಂದೇ ಕಾನ್ಪುರ ಬಳಿ ತಾಂತ್ರಿಕ ದೋಷಕ್ಕೆ ಒಳಗಾಗಿ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಅದನ್ನು ದುರಸ್ತಿಪಡಿಸಲಾಗಿತ್ತು. ಫೆಬ್ರವರಿ 17ರಿಂದ ಅದು ಅಧಿಕೃತ ವಾಣಿಜ್ಯ ಸಂಚಾರ ಆರಂಭಿಸಿತ್ತು.

Vande Bharat express completes 1 lakh km in 3 months without missing a trip

ಆದರೆ, ಈ ವಿಶೇಷ ರೈಲಿಗೆ ಕಿಡಿಗೇಡಿಗಳು ಹಾನಿಮಾಡುವ ಕೃತ್ಯ ಎಸಗುತ್ತಿದ್ದಾರೆ. ಕಲ್ಲುತೂರಾಟ ನಡೆಸಿ ಇದುವರೆಗೆ ರೈಲಿನ 12 ಗಾಜುಗಳನ್ನು ಒಡೆಯಲಾಗಿದೆ. ಕಲ್ಲು ಎಸೆಯುವವರ ಮೇಲೆ ನಿಗಾ ಇಡಲು ರೈಲಿನ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!

16 ಕೋಚ್‌ಗಳಿರುವ ರೈಲಿನಲ್ಲಿ ತಲಾ 52 ಸೀಟುಗಳ ಪ್ರತ್ಯೇಕ ಎರಡು ಕಂಪಾರ್ಟ್‌ಮೆಂಟ್ ಇವೆ. 78 ಸೀಟುಗಳ ಟ್ರೇಲರ್‌ ಕೋಚ್‌ಗಳಿವೆ. ಎಕ್ಸಿಕ್ಯುಟಿವ್ ಕ್ಲಾಸ್‌ನ ಕೋಚ್‌ಗಳಲ್ಲಿ ರೈಲು ಸಂಚರಿಸುವ ದಿಕ್ಕಿಗೆ ಅನುಗುಣವಾಗಿ ಸೀಟುಗಳು ತಿರುಗುತ್ತವೆ.

ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ಹೈಸ್ಪೀಡ್ ರೈಲನ್ನು ತಯಾರಿಸಲಾಗಿದೆ. ಅತ್ಯಧಿಕ ವೇಗದ ವೈಫೈ, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಸ್ಪರ್ಶಮುಕ್ತ ಬಯೋ ವಾಕ್ಯೂಮ್ ಶೌಚಾಲಯ, ಎಲ್‌ಇಡಿ ಬೆಳಕು, ಮೊಬೈಲ್ ಚಾರ್ಜ್‌ ಪಾಯಿಂಟ್‌ಗಳು ಮತ್ತು ಹವಾಮಾನಕ್ಕೆ ಅನುಗುಣವಾಗಿ ಸ್ವಯಂಚಾಲಿತವಾಗಿ ಬದಲಾಗುವ ಹವಾಮಾನ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ರೈಲಿನಲ್ಲಿದೆ.

English summary
The highly advanced and indigenous train Vande Bharat Express has completed 1 Lakh KMs without missing a single trip in Three months since its first commercial run from February 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X