• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಸಿಕೆ ಹಿಂಜರಿಕೆಯಿಂದ ಕೋವಿಡ್ ನಿವಾರಣೆಯಲ್ಲಿ ಹಿನ್ನಡೆಯಾಗಬಹುದು: ಆದರ್

|
Google Oneindia Kannada News

ಕೊರೊನಾ ಸೋಂಕು ಹೋಗಲಾಡಿಸಲು ಪ್ರತಿಯೊಬ್ಬರು ಕೊರೊನಾ ಲಸಿಕೆ ಪಡೆಯುವ ಅಗತ್ಯವಿದೆ, ಲಸಿಕೆ ಹಿಂಜರಿಕೆಯಿಂದ ಕೋವಿಡ್ ತೊಡೆದುಹಾಕುವಲ್ಲಿ ಹಿನ್ನಡೆಯಾಗಬಹುದು ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಆದರ್ ಪೂನಾವಾಲಾ ತಿಳಿಸಿದ್ದಾರೆ.

ಸಾಧ್ಯವಾದಷ್ಟು ಬೇಗ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಲೇಬೇಕು, ರಾಜ್ಯಗಳಲ್ಲಿ ಕೋವಿಶೀಲ್ಡ್ ಲಸಿಕೆಯ 200 ಮಿಲಿಯನ್ ಡೋಸ್ ಲಭ್ಯವಿದೆ ಎಂದರು.

ಎಷ್ಟೇ ಲಸಿಕೆ ಲಭ್ಯವಿದ್ದರೂ ಕೂಡ ದೇಶದಲ್ಲಿ ಶೇ.40ರಷ್ಟು ಮಂದಿ ಮಾತ್ರ ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆ, ಯಾಕಂದರೆ ಎಷ್ಟೋ ಮಂದಿ ದೇಶದಲ್ಲಿ ಕೊರೊನಾ ಇಳಿಕೆಯಾಗಿದೆ ಎಂದು ತಮ್ಮ ಎರಡನೇ ಡೋಸ್ ಲಸಿಕೆಯನ್ನು ಮರೆತೇ ಬಿಡುತ್ತಾರೆ.

ಕೋವಿಡ್ ಪೋರ್ಟಲ್ ಪ್ರಕಾರ ದೇಶದ ಸುಮಾರು 93 ಕೋಟಿ ವಯಸ್ಕರಲ್ಲಿ 38 ಕೋಟಿಗೂ ಹೆಚ್ಚು ಮಂದಿ ಎರಡೂ ಲಸಿಕೆಗಳನ್ನು ಪಡೆದಿದ್ದಾರೆ ಎಂದರು.

ಕೋವಿಡ್ ಲಸಿಕೆಗಳು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಸೋಂಕಿನಿಂದ ರಕ್ಷಣೆ ನೀಡಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ( WHO) ಹಿರಿಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸೋಂಕಿನ ಪ್ರಮಾಣ ಉಲ್ಬಣಗೊಳ್ಳುವುದು ನಿರೀಕ್ಷಿತವಾಗಿದೆ. ಯುರೋಪ್‍ನ ಹಲವು ದೇಶಗಳಲ್ಲಿ ಸೋಂಕು ಭಾರೀ ಏರಿಕೆ ಕಂಡುಬರುತ್ತಿದೆ. ಜೊತೆಗೆ ನಾನಾ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಆದರೆ ಸಾವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ದಾಖಲಾಗಿಲ್ಲ ಎಂದಿದ್ದಾರೆ.

ಸಾವಿನ ಪ್ರಮಾಣದಲ್ಲಿ ಏರಿಕೆಯಾಗದಿರಲು ಕಾರಣ ಸೋಂಕಿಗೆ ಉತ್ತಾಗುವ ಸಾಧ್ಯತೆ ಇದ್ದ ಬಹುತೇಕ ಜನರಿಗೆ ಎರಡೂ ಡೋಸ್ ಲಸಿಕೆ ನೀಡಿರುವುದು ಎಂದು ಸಂದರ್ಶವೊಂದರಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸಾಕ್ಷ್ಯಗಳ ಅನ್ವಯ , ಎರಡೂ ಡೋಸ್ ಲಸಿಕೆ ಪಡೆದ ಬಹುತೇಕ ವಯಸ್ಕರಲ್ಲಿ 1ವರ್ಷದ ಬಳಿಕ ರೋಗದ ವಿರುದ್ಧ ಹೋರಾಡುವ ಪ್ರತಿಕಾಯ ಪ್ರಮಾಣ ಇಳಿಕೆ ಆದರೂ ಲಸಿಕೆ ಕನಿಷ್ಠ 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ರಕ್ಷಣೆ ನೀಡುವುದು ಕಂಡುಬಂದಿದೆ ಎಂದಿದ್ದಾರೆ.

ಈ ನಡುವೆ ಕೋವ್ಯಾಕ್ಸಿನ್‌ಗೆ ಅನುಮತಿ ನೀಡಲು ಸುದೀರ್ಘ ಅವಧಿಗೆ ತೆಗೆದುಕೊಂಡಿದ್ದನ್ನು ಸಮರ್ಥಿಸಿದ ಡಾ. ಸೌಮ್ವಾ ಸ್ವಾಮಿನಾಥನ್‌, ಸ್ವತಂತ್ರ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನು ಗೌರವಿಸಬೇಕು.

ಯಾವುದೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಪ್ರಕ್ರಿಯೆಯು ಕನಿಷ್ಠ 45ರಿಂದ 165 ದಿನಗಳವರೆಗೆ ನಡೆಯುತ್ತದೆ. ಕೋವ್ಯಾಕ್ಸಿನ್‌ಗೆ 90 ದಿನಗಳಲ್ಲೇ ಅಂಥ ಅನುಮತಿ ಸಿಕ್ಕಿದೆ. ಹೀಗಾಗಿ ವ್ಯಾಕ್ಸಿನ್‌ಗೆ ಅನುಮತಿ ನೀಡಲು ಸುದೀರ್ಘ ಅವಧಿ ತೆಗೆದುಕೊಳ್ಳಲಾಗಿದೆ ಎಂಬುದು ಸರಿಯಲ್ಲ ಎಂದು ಡಬ್ಲ್ಯುಎಚ್‌ಒ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರೀಸ್‌ತನ್ನ ಡ್ರೋನ್‌ 'ಅಕ್ಟಾಕಾಪ್ಟರ್‌' ಮೂಲಕ 50 ವಯಲ್ಸ್‌ ಕೋವಿಡ್‌ ಲಸಿಕೆಯನ್ನು ಬೆಂಗಳೂರು ಹೊರವಲಯದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರವಾನಿಸಿದೆ. ಇದು ನಗರದಲ್ಲಿ ನಡೆದ ಮೊದಲ ಕಾರ್ಯಾಚರಣೆಯಾಗಿದೆ.

ಸ್ವದೇಶಿ ನಿರ್ಮಿತ ಅಕ್ಟಾಕಾಪ್ಟರ್‌(ಬೆಳಗ್ಗೆ 9.43ಕ್ಕೆ ಚಂದಾಪುರ ಆರೋಗ್ಯ ಕೇಂದ್ರದಿಂದ ಕೋವಿಡ್‌ ಲಸಿಕೆಯನ್ನು ವಿಶೇಷವಾದ ಕಂಟೈನರ್‌ನಲ್ಲಿ ತುಂಬಿಸಿಕೊಂಡು 14 ಕಿ.ಮೀ. ದೂರದಲ್ಲಿದ್ದ ಹರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇವಲ 10 ನಿಮಿಷ ಅವಧಿಯಲ್ಲಿ ಲಸಿಕೆಯನ್ನು ತಲುಪಿಸಿತು. ಲಸಿಕೆ ತಲುಪಿಸಿದ ಡ್ರೋನ್‌ ಆ ಬಳಿಕ ಮತ್ತೆ ಚಂದಾಪುರಕ್ಕೆ ವಾಪಾಸ್‌ ಆಯಿತು. ಈ ಇಡೀ ಪ್ರಕ್ರಿಯೆ ಕೇವಲ 20 ನಿಮಿಷದಲ್ಲಿ ಮುಕ್ತಾಯಗೊಂಡಿತು. ಸೆಕೆಂಡ್‌ಗೆ 10 ಮೀಟರ್‌ ದೂರ ಕ್ರಮಿಸುವ ಸಾಮರ್ಥ್ಯವನ್ನು ಈ ಡ್ರೋನ್‌ ಹೊಂದಿದೆ.

   Americaದಿಂದ ಪರಭಕ್ಷಕ Drones ಖರೀದಿಸಲು ಮುಂದಾದ India | Oneindia Kannada

   1ನೇ ಡೋಸ್ ಓಕೆ, 2ನೇ ಡೋಸ್ ಯಾಕೆ; ಸಿಲಿಕಾನ್ ಸಿಟಿ ಜನರ ಹೊಸ ಡೈಲಾಗ್!1ನೇ ಡೋಸ್ ಓಕೆ, 2ನೇ ಡೋಸ್ ಯಾಕೆ; ಸಿಲಿಕಾನ್ ಸಿಟಿ ಜನರ ಹೊಸ ಡೈಲಾಗ್!

   English summary
   Adar Poonawalla, the chief of Serum Institute of India which manufactures COVID-19 vaccine Covishield, on Wednesday said vaccine hesitancy was the "greatest threat" in overcoming the pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X