ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!

By Nayana
|
Google Oneindia Kannada News

ನವದೆಹಲಿ, ಮೇ.2: ಪ್ರಯಾಣಿಕರಿಗೊಂದು ಸಿಹಿಸುದ್ದಿ, ಇನ್ನು ವಿಮಾನದೊಳಗೆ ಮೊಬೈಲ್ ಬಳಸಬಹುದು, ಇಷ್ಟು ದಿನ ವಿಮಾನದೊಳಗೆ ಮೊಬೈಲ್ ಬಳಕೆ ನಿಷೇಧವಿತ್ತು. ಹಾಗೆಯೇ ವಿಮಾನ ಆಕಾಶಕ್ಕೆ ಹಾರುವಾಗ ಇಂಟರ್‌ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು.

ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ವಿಮಾನದೊಳಗೆ ಮೊಬೈಲ್‌ನಲ್ಲಿ ಮಾತನಾಡಲು ಅಂತರ್ಜಾಲ ಸೇವೆ ಒದಗಿಸುವ ಭಾರತೀಯ ದೂರ ಸಂಪರ್ಕ ಪ್ರಾಧಿಕಾರದ ಶಿಫಾರಸ್ಸಿಗೆ ದೂರ ಸಂಪರ್ಕ ಆಯೋಗ ಸಮ್ಮತಿ ಸೂಚಿಸಿದೆ. ನೌಕಾಯಾನದಲ್ಲಿ ಈ ಸೇವೆಯನ್ನು ಒದಗಿಸಲು ಟ್ರಾಯ್ ಒಪ್ಪಿಗೆ ನೀಡಿದೆ. ಇದು ಮೂರ್ನಾಲ್ಕು ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಕೆಐಎನಲ್ಲಿ ವಿಮಾನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶಕೆಐಎನಲ್ಲಿ ವಿಮಾನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಮಾನಯಾನದ ವೇಳೆ ಅಂತರ್ಜಾಲ ಮತ್ತು ಮೊಬೈಲ್ ಸೇವೆ ನೀಡಲು ಒಪ್ಪಿಗೆ ಇದೆ. ಆದರೆ, ವಿದೇಶಿ ಸ್ಯಾಟಲೈಟ್‌ಗಳು ಮತ್ತು ಗೇಟ್‌ವೇ ಗಳಿಂದ ಇಂತಹ ಅಂತರ್ಜಾಲ ಸಂಪರ್ಕಕ್ಕೆ ಅನುಮತಿ ಪಡೆದುಕೊಳ್ಳಬೇಕಿದೆ.

Use mobile services while flying as government approves in-flight connectivity

ಈ ಸೇವೆಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದನ್ನು ಸೇವಾದಾತ ಸಂಸ್ಥೆಗಳು, ವಿಮಾನಯಾನ ಸಂಸ್ಥೆಗಳು, ಅಂತಾರಾಷ್ಟ್ರೀಯ ಒಪ್ಪಂದ ಇವೆಲ್ಲವನ್ನು ಗಮನಿಸಿ ನಿರ್ಧರಿಸಬೇಕಾಗುತ್ತದೆ ಎಂದು ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ ಅರುಣಾ ಸುಂದರರಾಜನ್ ತಿಳಿಸಿದ್ದಾರೆ.

ಭಾರತದಲ್ಲಿ ಸದ್ಯ ವಿಮಾನದಲ್ಲಿ ಮೊಬೈಲ್ ಬಳಕೆ ಮತ್ತು ಅಂತರ್ಜಾಲ ಸೇವೆ ನಿಷೇಧಿಸಲಾಗಿದೆ. ಆದರೆ, ಹಲವು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ವೈ-ಫೈ ಬಳಕೆಗೆ ಅನುಮತಿ ಇದೆ. ಈ ವಿಮಾನಗಳು ಭಾರತ ವಾಯುಗಡಿ ಪ್ರವೇಶಿಸುತ್ತಿದ್ದಂತೆ ಸ್ಥಗಿತಗೊಳ್ಳುತ್ತದೆ. ದೂರಸಂಪರ್ಕ ಸಂಬಂಧಿಸಿದ ಕುಂದುಕೊರತೆಗಳ ಮೇಲೆ ಕೈಗೊಂಡ ಕ್ರಮವನ್ನು ಪರಿಶೀಲಿಸಲು ಒಂಬುಡ್ಸ್ಮನ್ ನೇಮಿಸುವ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು.

English summary
In a good news for air passengers, the Telecom Commission on Tuesday granted conditional approval for in-flight mobile services connectivity, The mobile phone calls and internet services will be allowed in domestic and international flights in India, the sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X