• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವದೆಹಲಿಯ ಅಮೆರಿಕದ ರಾಯಭಾರ ಕಚೇರಿಗೆ ಡೇನಿಯಲ್ ಸ್ಮಿತ್ ನೇಮಕ

|

ನವದೆಹಲಿ, ಮೇ 1: ಪ್ರಭಾರಿ ಸೆಕ್ರೆಟರಿ ಆಫ್‌ ಸ್ಟೇಟ್‌ ಮತ್ತು ಹಂಗಾಮಿ ಡೆಪ್ಯುಟಿ ಸೆಕ್ರೆಟರಿ ಆಫ್‌ ಸ್ಟೇಟ್‌ ಆಗಿ ಕಾರ್ಯನಿರ್ವಹಿಸಿದ ವಿದೇಶಾಂಗ ಸೇವಾ ಸಂಸ್ಥೆಯ ನಿರ್ದೇಶಕರಾದ ರಾಯಭಾರಿ ಡೇನಿಯಲ್ ಸ್ಮಿತ್ ಅವರು ಆಂತರಿಕ ವ್ಯವಹಾರಗಳ ನಿರ್ವಹಣೆಗಾಗಿ ನವದೆಹಲಿಗೆ ತೆರಳಲಿದ್ದಾರೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ತಿಳಿಸಿದೆ.
ಕಳೆದ ಜನವರಿ 20ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಅಧಿಕಾರ ವಹಿಸಿಕೊಂಡ ದಿನದಿಂದ ನವದೆಹಲಿಯಲ್ಲಿ ಯುಎಸ್ ರಾಯಭಾರಿಯ ಸ್ಥಾನ ಖಾಲಿ ಆಗಿತ್ತು. ರಾಯಭಾರಿ ಎಂಬ ವೃತ್ತಿಯು ಅತ್ಯುನ್ನತ ವಿದೇಶಾಂಗ ಸೇವಾ ಶ್ರೇಣಿಯನ್ನು ಹೊಂದಿರುತ್ತದೆ. ಈ ಸ್ಥಾನಕ್ಕೆ ನೇಮಕ ಮಾಡಲು ಸೆನೆಟ್ ದೃಢೀಕರಣದ ಅಗತ್ಯವಿದ್ದು, ಈ ಪ್ರಕ್ರಿಯೆಗೆ ಹಲವು ತಿಂಗಳುಗಳೇ ತೆಗೆದುಕೊಳ್ಳುತ್ತದೆ.

ಕೋವಿಡ್ 19: ಅಮೆರಿಕ ಭಾರತಕ್ಕೆ ಒದಗಿಸುತ್ತಿರುವ ವೈದ್ಯಕೀಯ ಸಾಮಗ್ರಿಗಳ ವಿವರ
ನವದೆಹಲಿಯಲ್ಲಿ ಕೇಂದ್ರ ಕಚೇರಿಯಲ್ಲಿ ರಾಯಭಾರಿ ಇಲ್ಲದೇ ಭಾರತದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಕೊರೊನಾವೈರಸ್ ನಿಭಾಯಿಸುವುದಕ್ಕೆ ಸಹಕಾರ:
ಯುಎಸ್ ರಾಯಭಾರಿ ಸ್ಮಿತ್ ಅವರ ನೇಮಕ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವ ಮತ್ತು ಬದ್ಧತೆಯನ್ನು ತೋರಿಸುತ್ತಿದೆ. ಭಾರತದಲ್ಲಿ ಪ್ರತಿನಿತ್ಯ 4 ಲಕ್ಷಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಸಮರೋಪಾದಿಯಲ್ಲಿ ಪಿಡುಗಿನ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಜಗತ್ತಿನ ಹಲವು ರಾಷ್ಟ್ರಗಳು ಇದರಲ್ಲಿ ಭಾರತಕ್ಕೆ ಬೆಂಬಲವಾಗಿ ನಿಂತಿದ್ದು, ಈ ಪಟ್ಟಿಯಲ್ಲಿ ಅಮೆರಿಕಾ ಮುಂಚೂಣಿಯಲ್ಲಿದೆ.

English summary
US Sent Top Diplomat Daniel Smith As Interim Envoy To India To Face Covid-19 Pandemic Condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X