ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ಅಮೆರಿಕ ಭಾರತಕ್ಕೆ ಒದಗಿಸುತ್ತಿರುವ ವೈದ್ಯಕೀಯ ಸಾಮಗ್ರಿಗಳ ವಿವರ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 30: ಕೊರೊನಾ ಸೋಂಕು ಹುಟ್ಟಡಗಿಸಲು ಭಾರತದೊಂದಿಗೆ ಅಮೆರಿಕ ಕೈಜೋಡಿಸಿದೆ. ಭಾರತಕ್ಕೆ ಅಮೆರಿಕವು ಸಾಕಷ್ಟು ವೈದ್ಯಕೀಯ ಸಾಮಗ್ರಿಗಳನ್ನು ರವಾನೆ ಮಾಡಿದ್ದು ಅದರ ಕುರಿತು ಮಾಹಿತಿ ನೀಡಲಾಗಿದೆ.

COVID-19 ಪ್ರಕರಣಗಳು ಮಿತಿ ಮೀರಿ ಉಲ್ಬಣ ಆಗುತ್ತಿರುವ ಈ ಎರಡನೇ ಅಲೆಯ ವಿರುದ್ಧ ಭಾರತವು ಹೋರಾಡುತ್ತಿರುವಾಗ ಅಮೆರಿಕ ಭಾರತದೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಂತಿದೆ.

ಭಾರತದ ನಮ್ಮ ಸಹಭಾಗಿಗಳಿಗೆ ತುರ್ತು ಪರಿಹಾರವನ್ನು ಒದಗಿಸಲು ಮುಂಬರುವ ದಿನಗಳಲ್ಲಿ 100 ದಶ ಲಕ್ಷ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಅಮೆರಿಕ ಸರಬರಾಜು ಮಾಡುತ್ತಿದೆ.

Covid 19: List Of Medical Supplies From America To India

ಇದಲ್ಲದೆ, ಅಮೆರಿಕದ ವಿವಿಧ ರಾಜ್ಯ ಸರ್ಕಾರಗಳು, ಖಾಸಗಿ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ದೇಶಾದ್ಯಂತ ಸಾವಿರಾರು ಅಮೆರಿಕನ್ನರು ಭಾರತದಲ್ಲಿ ಈ ಆರೋಗ್ಯ ಬಿಕ್ಕಟ್ಟನ್ನು ಸುಧಾರಿಸಲು ಶ್ರಮಿಸುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ಜನರನ್ನು ಬೆಂಬಲಿಸುತ್ತಿದ್ದಾರೆ.

ಕೋವಿಡ್ 19: ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ರವಾನೆ ಮಾಡಿದ ಅಮೆರಿಕ ಕೋವಿಡ್ 19: ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ರವಾನೆ ಮಾಡಿದ ಅಮೆರಿಕ

ಭಾರತೀಯ ಆಸ್ಪತ್ರೆಗಳಿಗೆ ಅಗತ್ಯವಾದ ಆಮ್ಲಜನಕ, ಅದಕ್ಕೆ ಬೇಕಾದ ಉಪಕರಣಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ತಲುಪಿಸುವತ್ತ ಸಕಲ ಪ್ರಯತ್ನಗಳು ನಡೆದಿವೆ.

ನಮ್ಮ ಆಸ್ಪತ್ರೆಗಳು ತೊಂದರೆಗೊಳಗಾದಾಗ ಭಾರತವು ಅಮೆರಿಕಕ್ಕೆ ನೆರವಿನ ಹಸ್ತ ಚಾಚಿದಂತೆಯೇ ಭಾರತಕ್ಕೆ ಅಗತ್ಯ ಇರುವ ಸಮಯದಲ್ಲಿಸಹಾಯ ಮಾಡಲು ಅಮೆರಿಕ ನಿರ್ಧರಿಸಿದೆ.

COVID-19 ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಿವೆ. ಅಮೆರಿಕದ ಕೋವಿಡ್ -19 ನೆರವು 20 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9.7 ದಶಲಕ್ಷಕ್ಕೂ ಹೆಚ್ಚು ಭಾರತೀಯರನ್ನು ತಲುಪಿ ಜೀವ ರಕ್ಷಕ ಚಿಕಿತ್ಸೆಯನ್ನು ಒದಗಿಸಿದೆ.

ಇದಲ್ಲದೆ ಸ್ಥಳೀಯ ಸಮುದಾಯಗಳಿಗೆ ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಕೋವಿಡ್ ಪ್ರಕರಣಗಳ ಪತ್ತೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು; ಹಾಗೂ ತುರ್ತು ಪರಿಸ್ಥಿತಿ ಸನ್ನದ್ಧತೆಯನ್ನು ಹೆಚ್ಚಿಸಲು ನವೀನ ಆರ್ಥಿಕ ಕಾರ್ಯವಿಧಾನಗಳನ್ನು ಸಜ್ಜುಗೊಳಿಸುವುದು ಇವೇ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸೋಂಕು ಸನ್ನದ್ಧತೆಯನ್ನು ಬಲಪಡಿಸಲು 1,000 ಕ್ಕೂ ಹೆಚ್ಚು ಭಾರತೀಯ ಆರೋಗ್ಯ ಸೌಲಭ್ಯಗಳೊಂದಿಗೆ ಪಾಲುದಾರಿಕೆ. ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು 14,000 ಕ್ಕೂ ಹೆಚ್ಚು ಜನರಿಗೆ ತರಬೇತಿ.

ಭಾರತದಲ್ಲಿ COVID-19 ಗೆ ಸಕ್ರಿಯವಾಗಿ ಸ್ಪಂದಿಸುತ್ತಿರುವ ವೈದ್ಯರು, ದಾದಿಯರು, ಶುಶ್ರೂಷಕಿಯರು, ಸಮುದಾಯ ಸ್ವಯಂಸೇವಕರು, ನೈರ್ಮಲ್ಯ ಕಾರ್ಮಿಕರು ಮತ್ತು ಇತರರಿಗೆ ಅಪಾಯವನ್ನು ತಗ್ಗಿಸುವ ಕ್ರಮಗಳ ತರಬೇತಿಯ ಮೂಲಕ 213,000 ಕ್ಕೂ ಹೆಚ್ಚು ಮುಂಚೂಣಿ ಕಾರ್ಮಿಕರನ್ನು ಸುರಕ್ಷಿತವಾಗಿಡಲು ಸಹಾಯ ಮಾಡಿದೆ.

ಯುನಿಸೆಫ್ ನೀಡಿದ ಕೋವಿಡ್ ಮುನ್ನೆಚ್ಚರಿಕೆಯ ಸಂದೇಶವನ್ನು 84 ದಶಲಕ್ಷಕ್ಕೂ ಹೆಚ್ಚು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಿದೆ.

ಹದಿನೈದು ರಾಜ್ಯಗಳಲ್ಲಿ 29 ಆರೋಗ್ಯ ಸೌಲಭ್ಯಗಳಿಗೆ 200 ಅತ್ಯಾಧುನಿಕ ವೆಂಟಿಲೇಟರ್‌ಗಳನ್ನು ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ COVID-19 ರೋಗಿಗಳನ್ನು ಉಪಚರಿಸಲು ಮತ್ತು ಅವರ ಆರೈಕೆಗಾಗಿ ಒದಗಿಸಲಾಗಿದೆ.

ಅಮೆರಿಕ ಒದಗಿಸುತ್ತಿರುವ ಸಾಮಗ್ರಿಗಳ ವಿವರಗಳು:

ಆಮ್ಲಜನಕದ ಬೆಂಬಲ: ಭಾರತದಲ್ಲಿ 1,100 ಆಕ್ಸಿಜನ್ ಸಿಲಿಂಡರ್‌ಗಳ ಆರಂಭಿಕ ವಿತರಣೆ. ಈ ಸಿಲಿಂಡರ್ಗಳನ್ನು ಭಾರತದಲ್ಲೇ ಉಳಿಸಲಾಗುತ್ತದೆ. ಸ್ಥಳೀಯ ಪೂರೈಕೆ ಕೇಂದ್ರಗಳಲ್ಲಿ ಈ ಸಿಲಿಂಡರ್ ಗಳ ಮರುಪೂರಣ ಮಾಡಬಹುದು.

ಇನ್ನೂ ಹೆಚ್ಚಿನ ಸಿಲಿಂಡರ್ ಗಳನ್ನು ಹೊತ್ತ ವಿಮಾನಗಳು ಮುಂದಿನ ದಿನಗಳಲ್ಲಿ ಬರಲಿವೆ. ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅಮೆರಿಕದಲ್ಲಿ ಸ್ಥಳೀಯವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದು ಅವುಗಳನ್ನು ಭಾರತ ಸರ್ಕಾರದ ಸಮನ್ವಯದೊಂದಿಗೆ ಆರೋಗ್ಯ ವ್ಯವಸ್ಥೆಗೆ ತಲುಪಿಸುತ್ತದೆ.

ಆಮ್ಲಜನಕ ಸಾಂದ್ರಕಗಳು: ವಾತಾವರಣದ ಗಾಳಿಯಿಂದ ಆಮ್ಲಜನಕವನ್ನು ಉತ್ಪಾದಿಸಿಕೊಳ್ಳಲು 1700 ಆಮ್ಲಜನಕ ಸಾಂದ್ರಕಗಳು ಸಹಾಯಕವಾಗುತ್ತವೆ. ಈ ಸಂಚಾರಿ ಘಟಕಗಳು ರೋಗಿಯ ಚಿಕಿತ್ಸೆಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತವೆ.

ಆಮ್ಲಜನಕ ಉತ್ಪಾದನಾ ಘಟಕಗಳು (ಪಿಎಸ್‌ಎ ಸಿಸ್ಟಮ್ಸ್): ತಲಾ 20 ರೋಗಿಗಳಿಗೆ ಸಹಾಯಕವಾಗಬಲ್ಲವು. ಇವು ಬಹು ದೊಡ್ಡ- ಪ್ರಮಾಣದ ಘಟಕಗಳು, ಹಾಗೂ ಹೆಚ್ಚುವರಿ ಸಂಚಾರಿ ಘಟಕಗಳು ನಿರ್ದಿಷ್ಟ ಕೊರತೆಗಳನ್ನು ನೀಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅಮೆರಿಕನ್ ತಜ್ಞರ ತಂಡವು ಭಾರತದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೂಡಿ ಕೆಲಸ ಮಾಡುತ್ತಾ ಈ ಘಟಕಗಳನ್ನು ಕಾರ್ಯತತ್ಪರತೆ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಾರೆ.

*ವೈಯಕ್ತಿಕ ರಕ್ಷಣಾ ಸಾಧನಗಳು: ರೋಗಿಗಳು ಮತ್ತು ಭಾರತೀಯ ಆರೋಗ್ಯ ಸಿಬ್ಬಂದಿಯನ್ನು ರಕ್ಷಿಸಲು 15 ದಶಲಕ್ಷ ಎನ್ 95 ಮಾಸ್ಕ್‌ ನೀಡಿಕೆ.

ಲಸಿಕೆ-ಉತ್ಪಾದನಾ ಸಾಮಗ್ರಿ ಸರಬರಾಜು: ಅಮೆರಿಕ ತನಗಾಗಿ ಬಳಕೆಗಾಗಿ ಆರ್ಡರ್ ಮಾಡಿದ್ದ ಅಸ್ಟ್ರಾ ಜೆನೆಕಾ ಲಸಿಕೆಯ ಸರಬರಾಜುಗಳನ್ನು ಭಾರತಕ್ಕೆ ನೀಡುತ್ತಿದೆ. ಇದರಿಂದ ಭಾರತಕ್ಕೆ 20 ಮಿಲಿಯನ್ ಡೋಸ್ COVID-19 ಲಸಿಕೆ ತಯಾರಿಸಲು ಅನುವಾಗುತ್ತದೆ್.

• ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು (ಆರ್‌ಡಿಟಿಗಳು): 1 ಮಿಲಿಯನ್ ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು - ಶ್ವೇತಭವನದಲ್ಲಿ ಬಳಸುವ ಮಾದರಿಯನ್ನೇ ಭಾರತಕ್ಕೂ ನೀಡಲಾಗುತ್ತಿದೆ. ಈ ಪರೀಕ್ಷೆಗಳು 15 ನಿಮಿಷದಲ್ಲೇ ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡಬಲ್ಲವಾಗಿದ್ದು, ಸಮುದಾಯ ಹರಡುವಿಕೆಯನ್ನು ಗುರುತಿಸಿ, ತಡೆಯಲು ಸಹಾಯಕವಾಗುತ್ತವೆ.

ಚಿಕಿತ್ಸಕಗಳು: ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಆಂಟಿವೈರಲ್ ಡ್ರಗ್ ರಿಮೆಡೆಸಿವಿರ್‌ನ 20,000 ಚಿಕಿತ್ಸಾ ಕೋರ್ಸ್‌ಗಳ ಮೊದಲ ಕಂತು ಸರಬರಾಜು ಮಾಡಲಾಗಿದೆ.

* ಸಾರ್ವಜನಿಕ ಆರೋಗ್ಯ ನೆರವು: ಅಮೆರಿಕದ ಸಿಡಿಸಿ ತಜ್ಞರು ಈ ಕೆಳಗಿನ ಕ್ಷೇತ್ರಗಳಲ್ಲಿ ಭಾರತದ ತಜ್ಞರೊಂದಿಗೆ ಕೈ ಜೋಡಿಸುತ್ತಾರೆ: ಪ್ರಯೋಗಾಲಯ, ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಜೀನೋಮಿಕ್ ಸೀಕ್ವೆನ್ಸಿಂಗ್ ಮತ್ತು ಮಾಡೆಲಿಂಗ್‌ಗಾಗಿ ಬಯೋಇನ್ಫರ್ಮ್ಯಾಟಿಕ್ಸ್, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಲಸಿಕೆ ವಿತರಣೆ ಪ್ರಕ್ರಿಯೆ, ಹಾಗೂ ಅಪಾಯಗಳ ಕುರಿತ ಸಂವಹನ ಕ್ಷೇತ್ರಗಳಲ್ಲಿ ನೆರವು.

English summary
The first consignments of medical supplies from the US reached India, List Of Medical Supplies here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X