ಆಘಾತ ನೀಡಿದ ಅಮೆರಿಕದ ನಡೆಯನ್ನು 'ದುರದೃಷ್ಟಕರ' ಎಂದ ಭಾರತ

ನವದೆಹಲಿ, ಜೂನ್ 01: ಆದ್ಯತೆಯ ವಹಿವಾಟಿನ(GSP) ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ವಾಪಸ್ ಪಡೆದ ಅಮೆರಿಕದ ನಡೆಯನ್ನು ಭಾರತ 'ದುರದೃಷ್ಟಕರ' ಎಂದು ಕರೆದಿದೆ.

ಕಳೆದ ಮಾರ್ಚ್ ನಲ್ಲೇ ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಭಾರತ ಈ ಬಗ್ಗೆ ಪುನರ್ಪರಿಶೀಲನೆ ಮಾಡಿದರೆ ನಿರ್ಧಾರ ಬದಲಿಸುವ ಬಗ್ಗೆ ಯೋಚಿಸುವುದಾಗಿಯೂ ಟ್ರಂಪ್ ಹೇಳಿದ್ದರು.

ಆದರೆ ಭಾರತ ಅಮೆರಿಕದ ಬಳಿ ಮನವಿ ಮಾಡಿಕೊಂಡರೂ ಅಮೆರಿಕ ತನ್ನ ನಡೆಯನ್ನು ಸಡಿಲಗೊಳಿಸದಿರುವುದು ದುರದೃಷ್ಟಕರ ಎಂದು ಭಾರತ ಹೇಳಿದೆ.

US decision of removing India from GSP, India calls it unfortunate

"ಯಾವುದೇ ಅಭಿವೃದ್ಧಿ ಹೊಂದಿದ ದೇಶ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ನೀಡುವ ಜಿಎಸ್ಪಿ ಅಡಿಯಲ್ಲಿ ಕೆಲವು ಸೌಲಭ್ಯಗಳನ್ನು ನೀಡುತ್ತದೆ. ಆದರೆ ಜೂನ್ 5 ರ ನಂತರ ಭಾರತಕ್ಕೆ ಅಮೆರಿಕ ನೀಡುತ್ತಿದ್ದ ಈ ಸೌಲಭ್ಯವನ್ನು ಹಿಂತೆಗೆದುಕೊಳ್ಳುತ್ತಿರುವುದು ಖೇದಕರ. ಈ ಬಗ್ಗೆ ನಾವು ಮಾತುಕತೆ ನಡೆಸಿದರೂ ಅಮೆರಿಕ ತನ್ನ ನಡೆಯಲ್ಲಿ ಬದಲಾವಣೆ ಇಲ್ಲ ಎಂದಿರುವುದು ದುರದೃಷ್ಟಕರ ಸಂಗತಿ" ಎಂದು ಭಾರತ ಹೇಳಿದೆ.

ಅಮೆರಿಕದ ಆದ್ಯತೆ ವಹಿವಾಟು(Generalized System of Preferences) ವ್ಯವಸ್ಥೆ ಇರುವುದು ಜಗತ್ತಿನ ಹಲವು ಬಡ ದೇಶಗಳು ವ್ಯಾಪಾರ-ವ್ಯವಹಾರ ಕ್ಷೇತ್ರಗಳಲ್ಲಿ ಮುಂದುವರಿದು, ಅವರ ಆರ್ಥಿಕತೆ ದೃಢವಾಗಿ, ಬಡತನದಿಂದ ಹೊರಗೆ ಬರಲು ನೆರವಾಗುವ ಉದ್ದೇಶದಿಂದ.

ಈ ವಹಿವಾಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಶೂನ್ಯ ಅಥವಾ ಕಡಿಮೆ ಸುಂಕ ಹಾಕಲಾಗುತ್ತದೆ. ಬಡ ದೇಶಗಳ ಪಟ್ಟಿಯನ್ನು ಅಮೆರಿಕವೇ ಸಿದ್ಧಪಡಿಸುತ್ತದೆ. ಆಯ್ದ ಉತ್ಪನ್ನಗಳಿಗೆ ಉಳಿದ ವಿಶ್ವ ವಾಣಿಜ್ಯ ಒಕ್ಕೂಟದ ರಾಷ್ಟ್ರಗಳಿಗಿಂತ ಕಡಿಮೆ ಸುಂಕ ಹಾಕಲಾಗುತ್ತದೆ. ಪ್ರತಿ ವರ್ಷ ಉತ್ಪನ್ನಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ. ಜತೆಗೆ ಯಾವ ದೇಶಗಳನ್ನು ಆದ್ಯತಾ ವಹಿವಾಟಿನ ಅಡಿ ಪರಿಗಣಿಸಬೇಕು ಎಂದು ಕೂಡ ತೀರ್ಮಾನಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+